
ಹುಬ್ಬಳ್ಳಿ,ಅ.೧೮-ಉತ್ತರ ಕರ್ನಾಟಕ ಭಾಗದ ಜನತೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿಶ್ವದರ್ಜೆಯ ಚಿಕಿತ್ಸೆಯನ್ನು ನೀಡುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ನಗರದಲ್ಲಿ ಉತ್ತರ ಕರ್ನಾಟಕದ ಪ್ರಥಮ ಹೆಚ್‌ಸಿಜಿ ಕ್ಯಾನ್ಸರ್ ಸೆಂಟರ್ ನ ಅತ್ಯಾಧುನಿಕ ‘ಎಲೆಕ್ಟಾ ವರ್ಸಾ ಎಚ್‌ಡಿ’ ವಿಕಿರಣ ಚಿಕಿತ್ಸಾ ಯಂತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಸಚಿವರು
ನೂತನ ಚಿಕಿತ್ಸಾ ವ್ಯವಸ್ಥೆಯಿಂದ ಇಲ್ಲಿನ ಜನತೆಗೆ ಪ್ರಯಾಣ ಮತ್ತು ವೆಚ್ಚಗಳೆರಡನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಇದು ಅಸಂಖ್ಯಾತ ರೋಗಿಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ನಮ್ಮ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ಬಲಪಡಿಸುತ್ತದೆ. ಈ ಮಹತ್ವದ ಉಪಕ್ರಮಕ್ಕಾಗಿ ನಾನು ಹೆಚ್‌ಸಿಜಿಯನ್ನು ಅಭಿನಂದಿಸುತ್ತೇನೆ ಎಂದರು.
ಹುಬ್ಬಳ್ಳಿ-ಧಾರವಾಡವನ್ನು ಕರ್ನಾಟಕದಲ್ಲಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಕೇಂದ್ರವಾಗಿರಲಿದೆ.ಈ ಮಾದರಿಯು ದಕ್ಷಿಣ ಮಹಾರಾಷ್ಟç, ಗೋವಾ ಮತ್ತು ಉತ್ತರ ಕರ್ನಾಟಕದಾದ್ಯಂತ ಇದೇ ಮೊದಲನೆಯದಾಗಿದೆ.
ವಿಶ್ವದರ್ಜೆಯ ವಿಕಿರಣ ಚಿಕಿತ್ಸೆಯು ಈಗ ರೋಗಿಗಳ ಮನೆಗೆ ಸಮೀಪದಲ್ಲಿಯೇ ಲಭ್ಯವಾಗಲಿದ್ದು, ಅವರ ಮತ್ತು ಅವರ ಕುಟುಂಬದ ಆರ್ಥಿಕ ಮತ್ತು ಪ್ರಯಾಣದ ಹೊರೆಯನ್ನು ಕಡಿಮೆ ಮಾಡಲಿದೆ.
ಈ ಯಂತ್ರವು ಸರ್ಫೇಸ್ ಗೈಡೆಡ್ ರೇಡಿಯೇಶನ್ ಥೆರಪಿ , ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿ ಸ್ಟೀರಿಯೊಟ್ಯಾಕ್ಟಿಕ್ ಬಾಡಿ ರೇಡಿಯೇಶನ್ ಥೆರಪಿ , ವಾಲ್ಯೂಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್ ಥೆರಪಿ , ಮತ್ತು ಅಡಾಪ್ಟಿವ್ ರೇಡಿಯೇಶನ್ ಥೆರಪಿ ವೈಶಿಷ್ಟ÷್ಯಗಳನ್ನು ಹೊಂದಿದೆ. ಈ ಸುಧಾರಿತ ತಂತ್ರಜ್ಞಾನಗಳು ಶ್ವಾಸಕೋಶ, ಯಕೃತ್ತು ಮತ್ತು ಮೆದುಳಿನಲ್ಲಿರುವ ಸಂಕೀರ್ಣ ಗಡ್ಡೆಗಳಿಗೂ ನಿಖರತೆ ಚಿಕಿತ್ಸೆ ಒದಗಿಸುತ್ತವೆ. ಇದರಿಂದಾಗಿ, ಈ ಹಿಂದೆ ಉಪಶಮನಕಾರಿ ಚಿಕಿತ್ಸೆ ಮಾತ್ರ ಸಾಧ್ಯವಿದ್ದ ಕೆಲವು ಪ್ರಕರಣಗಳನ್ನು ಈಗ ಗುಣಪಡಿಸುವ ಉದ್ದೇಶದಿಂದ ಚಿಕಿತ್ಸೆ ನೀಡಲು ಅನುವು ಮಾಡಿಕೊಡುತ್ತದೆ ಎಂದು ಹೆಲ್ತ್ಕೇರ್ ಗ್ಲೋಬಲ್ ಎಂಟರ್‌ಪ್ರೆöÊಸಸ್ ಲಿಮಿಟೆಡ್‌ನ ಸಂಸ್ಥಾಪಕ ಡಾ. ಬಿ.ಎಸ್. ಅಜಯ್‌ಕುಮಾರ್ ತಿಳಿಸಿದರು.
ಶಾಸಕ ಮಹೇಶ್ ಟೆಂಗಿನಕಾಯಿ,ಹೆಲ್ತ್ಕೇರ್ ಗ್ಲೋಬಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮನೀಶ್ ಮಟ್ಟು ಹಿರಿಯ ಅಧಿಕಾರಿಗಳಾದ ಮನಿಷಾ ಕುಮಾರ್, ಡಾ. ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.