
ಕಲಬುರಗಿ:ಮಾ.೧೬:ನಗರದ ಉದನೂರ ವರ್ತೂಲ ರಸ್ತೆಗೆ ಹೊಂದಿಕೊAಡಿರುವ ಮಾಣಿಕ್ ಪ್ರಭು ಬಡಾವಣೆಯಲ್ಲಿರುವ ಅಪರಾಜೀತ ಶಾಲೆಯಲ್ಲಿ #ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ# ಸಂಭ್ರಮದಿAದ ಆಚರಣೆ ಮಾಡಲಾಯಿತು. ಮೊದಲಿಗೆ, ಜೈ ಭವಾನಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ, ಕುಮಾರಿ ಭೂಮಿಕಾ ಭಂಡಾರಿ ಎಲ್ಲರನ್ನು ಸ್ವಾಗತಿದರು, ನಂತರ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪಾಲಕರು ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀಮತಿ ಲಕ್ಶ್ಮೀ ದತ್ತಾತ್ರೇಯ ಪಾಟೀಲ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಭಾಗದಲ್ಲಿ ದಶಕದಿಂದ ಶಿಕ್ಷಣ ತಾಂತ್ರಿಕ ಮತ್ತು ಪಾರಪರಿಕ ವಿದ್ಯಾ ಸೇವೆ ಮಾಡುವ ನಿಮ್ಮ ಕಾರ್ಯ ಸ್ಲಾಘನಿಯವಾದದ್ದು, ಮನೆಯೇ ವಿದ್ಯಾ ಕೇಂದ್ರ ವನ್ನಾಗಿಸಿ, ಸತಿ ಪತಿ ಗಳಿಬ್ಬರು ಸತತವಾಗಿ ದುಡಿಯುವ ನಿಮ್ಮ ಕೆಲಸಕ್ಕೆ ಕೈ ಜೋಡಿಸುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಅಳಿಲು ಸೇವೆ ಗೈತ್ತೇವೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪುಪಂಜಲಿ ಭಂಡಾರಿ ವಹಿಸಿದ್ದರು, ಕೊನೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯವಾದಿ ರಾಜಗೋಪಾಲ ಭಂಡಾರಿ ವಂದಿಸಿದರು.



























