Home ಜಿಲ್ಲೆ ಮಹಿಳಾ ವಿಚಾರಗೋಷ್ಠಿ

ಮಹಿಳಾ ವಿಚಾರಗೋಷ್ಠಿ


ನವಲಗುಂದ,ಮಾ.೯: ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಧರ್ಮಸ್ಥಳ ಸಂಸ್ಥೆಯ ಕಾರ್ಯಗಳು ಶ್ಲಾಘನಿಯ ಎಂದು ಪುರಸಭಾ ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ ಜೋಶಿ ಹೇಳಿದರು.


ಅವರು ಪಟ್ಟಣದ ಶ್ರೀ ನಾಗಲಿಂಗ ಸ್ವಾಮಿ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿಗಳಾದ ವೇದವತಿ ದಂಡಗಿದಾಸರ ಮಾತನಾಡಿ ಮಹಿಳೆಯರು ಕುಟುಂಬ, ಆರೋಗ್ಯ, ಮಕ್ಕಳ ಪಾಲನೆ ಶೈಕ್ಷಣಿಕ ಜವಾಬ್ದಾರಿಯ ಹಾಗೂ ಬ್ಯಾಂಕುಗಳ ವ್ಯವಹಾರ, ಆರ್ಥಿಕ ದುರ್ಬಳಕೆಯಿಂದ ಎಚ್ಚರವಾಗಿರಿ ಎಂದರು.


ಸAಪನ್ಮೂಲ ವ್ಯಕ್ತಿ ನ್ಯಾಯವಾದಿ ಕೌಶಲ್ಯ ಪಾಟೀಲ ಅವರು ಮಹಿಳೆಯರಿಗೆ ಪ್ರಸ್ತುತ ಮಹಿಳಾ ಕಾನೂನುಗಳ ಹಾಗೂ ಸಾಮಾಜಿಕವಾಗಿ ಮಹಿಳೆಯರು ಹೇಗೆ ಪ್ರಗತಿಯನ್ನು ಸಾಧಿಸಬೇಕು ಎಂಬ ವಿವರಣೆ ನೀಡಿದರು.