
ಕಲಬುರಗಿ;ಮಾ.13: ಬಹುಪಾಲು ಜನಸಂಖ್ಯೆಯಲ್ಲಿ ಪೌಷ್ಟಿಕಾಂಶದ ಕೊರತೆ, ಪರಿಸರ ನಾಶ, ಮತ್ತು ವಿಶೇಷವಾಗಿ ದೇಶದ ಯುವಕರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಮಹಿಳೆಯರು ಮುಂದೆ ಬರಬೇಕೆಂದು ಶಿಕ್ಷಣ ತಜ್ಞೆ ಮತ್ತು ಅದಮ್ಯ ಚೇತನ ಪ್ರತಿμÁ್ಠನದ ಅಧ್ಯಕ್ಷೆ ಹಾಗೂ ಸಹ-ಸಂಸ್ಥಾಪಕಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ ಹೇಳಿದರು.
ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀಮತಿ ತೇಜಸ್ವಿನಿ, ವಿಶ್ವದ ಅತ್ಯಂತ ಕೆಟ್ಟ ವಾಯು ಮಾಲಿನ್ಯವನ್ನು ಎದುರಿಸುತ್ತಿರುವ 20 ನಗರಗಳಲ್ಲಿ 18 ನಗರಗಳು ಭಾರತದಲ್ಲಿವೆ ಮತ್ತು ಇದಕ್ಕೆ ಹೆಚ್ಚುವರಿಯಾಗಿ ಭಾರತದ ನಗರ ಪ್ರದೇಶಗಳಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್‍ನ ಅಪಾಯವು ತುಂಬಾ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ಕಳವಳಕಾರಿ ವಿಷಯವಾಗಿದೆ. ಕೈಗಾರಿಕೆಗಳು ಜಲಮೂಲಗಳಿಗೆ ಸಂಸ್ಕರಿಸದೆ ಹೊರಹಾಕುವ ತ್ಯಾಜ್ಯವು ದೇಶ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶರಣಬಸವ ವಿಶ್ವವಿದ್ಯಾಲಯವು ಮಹಿಳಾ ಸಾಧಕರಿಗೆ ಪ್ರತಿ ವರ್ಷ ನೀಡುವ ಪ್ರತಿಷ್ಠಿತ “ಮಾತೋಶ್ರೀ ಗೋದುತಾಯಿ ಅವ್ವ” ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ, ಶ್ರೀಮತಿ ತೇಜಸ್ವಿನಿ, ದೇಶ ಎದುರಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆ ಎಂದರೆ ಭಾರತೀಯ ಜನಸಂಖ್ಯೆಯ ಕಡಿಮೆ ಪೌಷ್ಟಿಕಾಂಶ ಮಟ್ಟಗಳು ಮತ್ತು ಭಾರತವು ತನ್ನ ಜನಸಂಖ್ಯೆಯ ಪೌಷ್ಠಿಕಾಂಶ ಮಟ್ಟದಲ್ಲಿ, ಇಡೀ ವಿಶ್ವದಲ್ಲಿ 103ನೇ ಸ್ಥಾನದಲ್ಲಿದೆ ಎಂದು ಹೇಳಿದರು. ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಮತ್ತು ಭಾರತೀಯ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದ ದ್ವಿದಳ ಧಾನ್ಯಗಳನ್ನು ಪಡೆಯುವ ಮೂಲಕ ದೇಶವು ತನ್ನ ಜನಸಂಖ್ಯೆಗೆ ಆಹಾರದ ಕೊರತೆಯನ್ನು ಯಶಸ್ವಿಯಾಗಿ ನಿವಾರಿಸಿದ್ದರೂ, ದೇಶದ ಬಹುಪಾಲು ಜನಸಂಖ್ಯೆಯು ಆಹಾರ ಸೇವನೆಯಲ್ಲಿ ಪೌಷ್ಟಿಕಾಂಶ ಮಟ್ಟದ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು.
ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ದೇಶದ ಯುವಕರು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆ. ವಿಶ್ವಾದ್ಯಂತ ನಡೆಸಿದ ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ 58 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯು ಕಡಿಮೆ ಅಥವಾ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಸಮೀಕ್ಷೆಯ ಫಲಿತಾಂಶಗಳ ಆಶ್ಚರ್ಯಕರ ಭಾಗವೆಂದರೆ ಭಾರತದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನಸಂಖ್ಯೆಯ 36 ಪ್ರತಿಶತದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. “ಇದು ಒಂದು ಆತಂಕಕಾರಿ ಪರಿಸ್ಥಿತಿ” ಎಂದು ಶ್ರೀಮತಿ ತೇಜಸ್ವಿನಿ ಹೇಳಿದರು.
ತಮಗೆ ವಹಿಸಲಾದ ಎಲ್ಲಾ ಕೆಲಸಗಳಲ್ಲಿ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸುವ ಮೂಲಕ ತಾವು ಪುರುಷನಿಗಿಂತ ಕಡಿಮೆಯಿಲ್ಲ ಎಂದು ಜಗತ್ತಿಗೆ ಸಾಬೀತುಪಡಿಸಿದ ಮಹಿಳೆಯರು ತಮ್ಮ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಪುರುಷರಿಗಿಂತ ಹೆಚ್ಚು ಛಾಪು ಮೂಡಿಸಿದ ಮತ್ತು ಶ್ರೇಷ್ಠತೆಯನ್ನು ಸಾಧಿಸಿದ ಯಾವುದೇ ವಲಯವಿಲ್ಲ ಎಂದು ಅವರು ಹೇಳಿದರು. “ಈಗ, ಮಹಿಳೆಯರು ಯುವಜನರು ಎದುರಿಸುತ್ತಿರುವ ಪರಿಸರ ನಾಶ, ಪೌಷ್ಟಿಕಾಂಶ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಸಮಸ್ಯೆಯನ್ನು ಕೈಗೆತ್ತಿಕೊಂಡು ಅದಕ್ಕೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಸಮಯ ಬಂದಿದೆ” ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಮಾತೋಶ್ರೀ ಗೋದುತಾಯಿ ಅವ್ವಾ ಪ್ರಶಸ್ತಿ, ಸ್ತ್ರೀ ಶಕ್ತಿ ಪ್ರಶಸ್ತಿಗಳು, ಸ್ತ್ರೀ ರತ್ನ ಪ್ರಶಸ್ತಿ, ವೀರ ಮಹಿಳಾ ಪ್ರಶಸ್ತಿ, ಕಾಯಕ ರತ್ನ ಮತ್ತು ಉತ್ಕøಷ್ಟ ಮಹಿಳಾ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರದಾನ ಮಾಡಿದರು, ಶರಣಬಸವೇಶ್ವರ ಸಂಸ್ಥಾನ ಮತ್ತು ಶರಣಬಸವ ವಿಶ್ವವಿದ್ಯಾಲಯವು ಭವಿಷ್ಯದ ಪೀಳಿಗೆಗೆ ಮಾದರಿಯಾಗಿದ್ದ ಮಹಿಳಾ ಸಾಧಕಿಯರನ್ನು ಗೌರವಿಸಲು ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಮತ್ತು ರಾಜಸ್ಥಾನದ ವಿವಿಧ ಭಾಗಗಳ ಶಾಲೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಿದ್ದಕ್ಕಾಗಿ, ಶ್ರೀಮತಿ ತೇಜಸ್ವಿನಿ ಅನಂತ ಕುಮಾರ ಅವರು ಮಾಡಿದ ಸೇವೆಗೆ ಅವರು ಗೌರವ ಪಡೆದಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದರು. “ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ನಿಗದಿತ ಸಮಯದಲ್ಲಿ ಆಹಾರ ನೀಡುವುದು ಮತ್ತು ಅವರಿಗೆ ಪ್ರತಿದಿನ ಪೌಷ್ಟಿಕ ಆಹಾರವನ್ನು ಒದಗಿಸುವುದು ಸುಲಭದ ಕೆಲಸವಲ್ಲ. ಮಾನವಕುಲಕ್ಕೆ ಸೇವೆ ಸಲ್ಲಿಸುವುದು ದೇವರ ಸೇವೆ ಎಂಬ ಶ್ರೀಮತಿ ತೇಜಸ್ವಿನಿ ಅವರ ದೃಢ ನಂಬಿಕೆಯನ್ನು ತೋರಿಸುತ್ತದೆ ಎಂದರು.
ಸಮಾರಂಭದಲ್ಲಿ ಮಹಿಳಾ ವಿದ್ಯಾರ್ಥಿಗಳು ತಮ್ಮ ವಿಭಿನ್ನ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಿದರು. ಅವರ ಆತ್ಮವಿಶ್ವಾಸದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಡಾ. ಅವ್ವಾಜಿ, ಈ ಮಹಿಳೆಯರು ಪ್ರದರ್ಶಿಸಿದ ಆತ್ಮವಿಶ್ವಾಸವು ಇತರ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಆತ್ಮವಿಶ್ವಾಸವನ್ನು ಗಳಿಸಿ ಯಶಸ್ಸನ್ನು ಸಾಧಿಸಲು ಪಾಠವಾಗಬೇಕು ಎಂದು ಹೇಳಿದರು. ಕಲಬುರಗಿ ಜಿಲ್ಲೆಯಲ್ಲಿ, ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಸೇರಿದಂತೆ ಎಲ್ಲಾ ಉನ್ನತ ಹುದ್ದೆಗಳಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವನ್ನು ಒದಗಿಸಲಾಗಿದೆ ಎಂದು ಡಾ. ಅವ್ವಾಜಿ ಹೇಳಿದರು. ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಉಪ ಮಹಾಪೌರರು ಮಹಿಳೆಯರಾಗಿದ್ದು ಅತಿ ಸಂತೋಷದ ವಿಷಯ ಎಂದು ಹೇಳಿದರು.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಮಾತೋಶ್ರೀ ಗೋದುತಾಯಿ ಅವ್ವ ಪ್ರಶಸ್ತಿ, ಅರಿವು ಶಾಲೆಯ ಸಂಸ್ಥಾಪಕಿ ಶ್ರೀಮತಿ ಸುಖೀಮಣಿ ಬಿ ಪಾಟೀಲ್ ಹಾಗೂ ವಾಸ್ತುಶಿಲ್ಪಿ ನಳಿನಿ ಮಹಾಗಾಂವ್‍ಕರ್ ಅವರಿಗೆ ಸ್ತ್ರೀ ಶಕ್ತಿ ಪ್ರಶಸ್ತಿ, ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಅವರಿಗೆ ಸ್ತ್ರೀ ರತ್ನ ಪ್ರಶಸ್ತಿ, ಮಹಿಳಾ ಪೆÇಲೀಸ್ ಠಾಣೆಯ ಪೋಲಿಸ್ ನೀರಿಕ್ಷಕರಾದ ಶ್ರೀಮತಿ ಅಕ್ಕಮಹಾದೇವಿ ನೀಲೆ ಹಾಗೂ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಶ್ರೀಮತಿ ಸ್ವಾತಿ ದರ್ಗಿ ಅವರಿಗೆ ವೀರ ಮಹಿಳೆ ಪ್ರಶಸ್ತಿ, ಶರಣಬಸವ ವಿಶ್ವವಿದ್ಯಾಲಯದ ಡಾ. ಎಂ. ಸಶಿಕಲಾ ಅವರಿಗೆ ಕಾಯಕ ರತ್ನ ಪ್ರಶಸ್ತಿ ಮತ್ತು ಡಾ. ಶ್ರೀದೇವಿ ಹೊಸಮನಿ ಅವರಿಗೆ ಉತ್ಕøಷ್ಟ ಮಹಿಳಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ನಿರ್ದೇಶಕಿ ಹಾಗೂ ಚಿತ್ರಕಥೆಗಾರ್ತಿ ಡಾ. ರೂಪಾ ಅಯ್ಯರ್ ಅವರನ್ನು ಡಾ. ಅವ್ವಾಜಿಯವರು ಸನ್ಮಾನಿಸಿ ಗೌರವಿಸಿದರು. ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವμರ್Á ರಾಜೀವ್ ಜಾನೆ, ಉಪಮೇಯರ್ ತೃಪ್ತಿ ಎಸ್ ಲಾಖೆ ಹಾಗೂ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶ್ರೀಮತಿ ಶೋಭಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಲಕ್ಷ್ಮೀ ಪಾಟೀಲ ಮಾಕಾ ಸ್ವಾಗತಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ನಿರ್ದೇಶಕ ಪೆÇ್ರ. ವಿ. ಡಿ. ಮೈತ್ರಿ, ಕುಲಸಚಿವ ಮೌಲ್ಯಮಾಪನ ಡಾ. ಎಸ್. ಎಚ್. ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ, ಡೀನ್ ಡಾ. ಶಿವಕುಮಾರ ಜವಳಿಗಿ, ಡೀನ್ (ಸಂಶೋಧನೆ) ಡಾ. ಸುಜಾತಾ ಮಲ್ಲಾಪುರ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.



























