Home ಜಿಲ್ಲೆ ಮಹಿಳೆಯರು ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಮಹಿಳೆಯರು ಸ್ವಾಸ್ಥ್ಯ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಭಾಲ್ಕಿ:ಮಾ.9:ಮಹಿಳೆಯರ ಆರೋಗ್ಯವು ಕುಟುಂಬ ಮತ್ತು ಸಮಾಜದ ಯೋಗಕ್ಷೇಮಕ್ಕೆ ಮೂಲಾಧಾರವಾಗಿರುವುದರಿಂದ ಆಧುನಿಕ ಮಹಿಳೆಯರು ಸ್ವಾಸ್ಥ್ಯ ಆರೋಗ್ಯ ಕಾಪಾಡುವುದು ಅಗತ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ರಾಧಾ ಬಹನಜಿ ಅಭಿಪ್ರಾಯಪಟ್ಟರು.
ಪಟ್ಟಣದ ಖಂಡ್ರೆ ಗಲ್ಲಿಯಲ್ಲಿರುವ ಪಾಟೀಲ್ ಮಲ್ಟಿಸ್ಪೇಷಲಿಟಿ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.
ಇತ್ತೀಚೆಗೆ ಮಹಿಳೆಯರಿಗೆ ದೈಹಿಕ ಪರಿಶ್ರಮದ ಅಭಾವದಿಂದ ನಾನಾ ಕಾಯಿಲೆಗಳು ಬರುತ್ತಿವೆ.ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ,ದೈಹಿಕ ವ್ಯಾಯಾಮ ಮಾಡುವುದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅವಶ್ಯಕ.ಪಾಟೀಲ್ ಆಸ್ಪತ್ರೆಯವರು ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಆರೋಗ್ಯ ಶಿಬಿರದ ಲಾಭ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ತ್ರೀರೋಗತಜ್ಞೆ ಡಾ.ಶೈಲಜಾ ತಳವಾಡೆ ಅವರು ಮಾತನಾಡಿ,ಮಕ್ಕಳಿಲ್ಲದವರು ಕೊರಗುವ ಚಿಂತೆಯಿಲ್ಲ.ಸಂತಾನೋತ್ಪತ್ತಿ ಹಂತಗಳು,ಹಾರ್ಮೋನ ಬದಲಾವಣೆಗಳಿಗೆ ಮೇಲಿಂದ ಮೇಲೆ ಚಿಕಿತ್ಸೆ ನೀಡಿದಾಗ ಮಕ್ಕಳ ಭಾಗ್ಯ ಪಡೆಯಬಹುದು ಎಂದರು.ಸ್ತ್ರೀರೋಗತಜ್ಞೆ ಡಾ.ಮಧುಮತಿ ನಾಯಕ ಅವರು ಮಾತನಾಡಿ,ಹೆಚ್ಚಿನ ಯುವತಿಯರು ಮೊಬೈಲ್,ಟಿವಿ ಧಾರವಾಹಿಯಲ್ಲಿ ಕಾಲ ಹರಣ ಮಾಡಿ ಉತ್ತಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ.ಸಮತೋಲನ ಆಹಾರದಿಂದ ನಾವು ನಿರೋಗಿ ಜೀವನ ಸಾಗಿಸಬಹುದು ಎಂದರು.
ಸ್ತ್ರೀರೋಗತಜ್ಞೆ ಡಾ.ಕವಿತಾ ನಿತೀನ ಪಾಟೀಲ್ ಮಾತನಾಡಿ,ಉದ್ಯೋಗಸ್ಥ ಮಹಿಳೆಯರು ಆರೋಗ್ಯದ ಕಡೆ ಲಕ್ಷ್ಯ ಕೊಡುವುದು ಅಗತ್ಯ.ಯಾವುದೇ ರೋಗಗಳು ಬರದಂತೆ ಮುನ್ನೇಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.ನಗರದಾದಾ ಮಹಾರಾಜರು ನೇತೃತ್ವ ವಹಿಸಿದ್ದರು.
ಡಾ.ಕೃತಿಕಾ ಕನಸೆ,ಡಾ.ನಮ್ರತಾ ಶೆಡೋಳೆ,ವಂದನಾ ಕಾಳೆ,ಐಶ್ವರ್ಯ ಕನಸೆ,ಪೂಜಾ ರಾಠೋಡ,ಉಷಾ ಬನಬರೆತಾಯಿ,ಡಾ.ನಿತೀನ ಪಾಟೀಲ,ಡಾ.ಶಶಿಕಾಂತ ಭೂರೆ,ಡಾ.ವಿಜಯಕುಮಾರ ರಾಠೋಡ,ಡಾ.ಉದ್ಧವ ಕನಸೆ,ಗಣೇಶ,ವೆಂಕಟೇಶ ಬಿರಾದಾರ,ಪ್ರೇಮಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.