Home ಜಿಲ್ಲೆ ಕಲಬುರಗಿ ಪ್ರವಾಸೋದ್ಯಮದಲ್ಲಿ ವ್ಯಾಪಕ ಉದ್ಯೋಕಾವಕಾಶ: ಪ್ರೊ. ಬಟ್ಟು ಸತ್ಯನಾರಾಯಣ

ಪ್ರವಾಸೋದ್ಯಮದಲ್ಲಿ ವ್ಯಾಪಕ ಉದ್ಯೋಕಾವಕಾಶ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ,ಏ.9: ಪ್ರವಾಸೋದ್ಯಮ ವಲಯವು ವ್ಯಾಪಕ ಉದ್ಯೋಗಾವಕಾಶಗಳನ್ನು ಹೊಂದಿದೆ, ಆದ್ದರಿಂದ ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳಾಗುವುದಕ್ಕಿಂತ ಹೆಚ್ಚಾಗಿ ಉದ್ಯೋಗ ಸೃಷ್ಟಿಕರ್ತರಾಗಬೇಕು ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಸಿಯುಕೆಯ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗ ಆಯೋಜಿಸಿದ್ದ ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ ಪ್ರವಾಸೋದ್ಯಮ ಕ್ಷೇತ್ರವು ಭಾರತದ ಜಿಡಿಪಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಎಐ ಮತ್ತು ಡಿಜಿಟಲ್ ತಂತ್ರಜ್ಞಾನವು ಉದ್ಯೋಗವನ್ನು ಕಸಿದುಕೊಳ್ಳುವ ಬದಲು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ಯಮಕ್ಕೆ ನವೀನ ಅಭ್ಯಾಸಗಳು ಮತ್ತು ಕೌಶಲ್ಯದ ಅಗತ್ಯವಿದೆ. ಆದ್ದರಿಂದ ಉತ್ತಮ ಅವಕಾಶಗಳಿಗಾಗಿ ಉದ್ಯಮ ಸಿದ್ಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ. ಪ್ರವಾಸೋದ್ಯಮವು ಸೇವಾ ಉದ್ಯಮವಾಗಿರುವುದರಿಂದ ಜನರನ್ನು ನಿರ್ವಹಿಸುವುದು ಅತ್ಯಂತ ಸವಾಲಿನದ್ದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮಾನವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಹೇಳಿದರು.
ವಿದ್ಯಾರ್ಥಿಗಳು ರೋಬೋಟ್ ಸ್ವಾಗತಕಾರ, ರೋಬೋಟ್ ಸರ್ವರ್, ಜಿಯೋ ಫೆನ್ಸಿಂಗ್, ಜಿಪಿಎಸ್ ಆಧಾರಿತ ಸಂಚಾರ ನಿರ್ವಹಣೆ ಮತ್ತು ಪಾಕಿರ್ಂಗ್, ಥ್ರೀಡಿ ಕ್ಯಾಂಪಸ್ ಪ್ರವಾಸ, ಎಐ ಆಧಾರಿತ ಪ್ರಯಾಣ ಯೋಜನೆ, ಕ್ಯೂಆರ್ ಕೋಡ್ ಆಧಾರಿತ ಗಮ್ಯಸ್ಥಾನ ಮಾಹಿತಿ ವ್ಯವಸ್ಥೆ, ಸೌರ ಫಲಕ ಬೆಂಚುಗಳು, ಹೊಲೊಗ್ರಾಮ್ ವರ್ಚುವಲ್ ಪ್ರವಾಸೋದ್ಯಮ, ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ, ಡಿಜಿಟಲ್ ಟೆಲ್ಲರ್ ಯಂತ್ರ ಮತ್ತು ಪ್ರವಾಸಿಗರಿಗೆ ಪೌಷ್ಟಿಕ ಆಹಾರದ ಮಾದರಿಗಳನ್ನು ಪ್ರದರ್ಶಿಸಿದರು.ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ಜಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ಶಿವ ಎಂ ವಂದಿಸಿದರು.
ಈ ಸಂದರ್ಭದಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಡೀನ್ ಪೆÇ್ರ.ಪಾಂಡುರಂಗ ವಿ ಪತ್ತಿ, ಪೆÇ್ರ.ಅಂಕತಿ ರಘು, ಡಾ.ಡಿ.ಗೌತಮ್, ಡಾ.ನವೀನ್, ಡಾ.ನಟರಾಜ್ ಪಟ್ಟೇಡ್, ಡಾ.ಜಗದೀಶ್ ಬಿರಾದಾರ್, ಡಾ.ಗಣಪತಿ ಬಿ ಸಿನ್ನೂರ್, ಡಾ.ಶಿವಾನಂದ ಬಂಟನೂರ, ಡಾ.ರಂಗನಾಥಂ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.