
ಕಲಬುರಗಿ: ಪಶ್ಚಿಮ ಏಷಿಯಾದಲ್ಲಿ ನಡೆಯುತ್ತಿರುವ ಯುದ್ಧ ಮಾನವಕುಲಕ್ಕೆ ನಾಚಿಕೆ ತರುವಂತ ವಿಷಯ ಸಾವು ಯಾರದಾದರೇನು ? ಮೊದಲು ಸಾಯುವುದು ಮನುಷ್ಯತ್ವ! ನಂತರ ಮನುಷ್ಯರನ್ನು ಕೊಲ್ಲುವುದಾಗಿದೆ. ಆದರೆ ಭಾರತೀಯರಲ್ಲಿ ಎಡಪಂಥಿಯ ವಿಚಾರ ಧಾರೆಗಳನ್ನು ಹೊಂದಿರುವ ಕೆಲವೇ ಜನರಿಗೆ ಇರಾನ್ ಮೇಲಿನ ಧಾಳಿಯಂತೆ ಬಾಂಗ್ಲಾದೇಶದಲ್ಲಿನ ಜನರ ಮೇಲಿನ ಧಾಳಿ ಕಾಣಲಿಲ್ಲವೇ ? ಕೆಲವೇ ತಿಂಗಳ ಹಿಂದೆ ಅಲ್ಲಿನ ನಾಗರಿಕರನ್ನು ಜೀವಂತವಾಗಿ ಸುಟ್ಟರು, ಅವರು ಮನುಷ್ಯರಲ್ಲವೇ ? ಇರಾನ್ ದೇಶದ ಮೇಲೆ ನಡೆಯುತ್ತಿರುವ ಯುದ್ಧ ಖಂಡನಿಯವಾಗಿದೆ. ಆದರೆ ಆಂತರಿಕ ಯುದ್ಧವನ್ನು ಖಂಡಿಸಲು ಎಡಪಂಥಿರಿಗೆ ನೈತಕತೆ ಇಲ್ಲವೇ ? ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ಹೊರಹಾಕಿದ್ದಾರೆ.
ಹೇಳಿಕೆ ಹೊರಡಿಸಿರುವ ಅವರು ಕಲಬುರಗಿಯಲ್ಲಿ ಎಡಪಂಥಿಯ ವಿಚಾರದಾರೆಗಳನ್ನು ಹೊಂದಿರುವ ಕೆಲವು ಹೋರಟಗಾರರಿಗೆ ತಮ್ಮ ನಿಲುವನ್ನು ಸರಿಯಾಗಿ ಸಮರ್ಥನೆ ಮಾಡಿಕೊಳ್ಳಲು ಆಗುತ್ತಿಲ್ಲ. ಜಗತ್ತನ್ನು ಯುದ್ಧದಕಡೆ ತೆಗೆದುಕೊಂಡು ಹೋಗುತ್ತಿರುವರನ್ನು ಖಂಡಿಸುತ್ತಾರೆ. ಇನ್ನೊಂದು ಕಡೆ ಉಗ್ರವಾದವನ್ನು ಖಂಡಿಸುತ್ತಾರೆ. ಉಗ್ರವಾದವನ್ನು ಖಂಡಿಸುವ ಎಡಪಂಥಿಯರಿಗೆ ಬಾಂಗ್ಲಾದೇಶದಲ್ಲಿ ಜೀವಂತವಾಗಿ ಅನೇಕ ಕುಟುಂಬಗಳನ್ನು ನಾಶ ಮಾಡಿದರು. ಇಂದು ಭಾರತದಲ್ಲಿ ನೂಳುಕೊರರಾಗಿ ಬಂದು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ, ಅಂತಹವರನ್ನು ಸಮರ್ಥನೆ ಮಾಡುವುದು ಎಷ್ಟು ಸಮರ್ಥನಿಯವಾಗಿದೆ?. ಇರಾನ್ ಮೂಲದಿಂದ ಬಂದವರು ಇಂದು ಅನೇಕ ಕಾನೂನ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವದು ರಾಷ್ಟ್ರೀಯ ಅಪರಾಧ ವರದಿಯಲ್ಲಿ ಇರುವುದು ಎಡಪಂಥಿರಯಗೆ ತಿಳಿದಿಲ್ಲವೇ?
ಮನುಷ್ಯರನ್ನು ಕೊಲ್ಲುವುದು ನಾಗರಿಕ ಸಭ್ಯಸಮಾಜವು ಉಗ್ರವಾಗಿ ಖಂಡಿಸಬೇಕು ಅದರಂತೆ ಆದರೆ ಉಗ್ರವಾದನ್ನು ಸದಾ ಬೆಂಬಲಿಸುವ ಮನಸ್ಥಿತಿಯವರನ್ನು ಖಂಡಿಸುವ ಧೈರ್ಯವನ್ನು ಎಡಪಂಥಿರು ಮಾಡುತ್ತಿಲ್ಲ. ಇವರ ವಿಚಾರಗಳನ್ನು ನಾವು ಉಗ್ರವಾಗಿ ಖಂಡಸಬೇಕಾಗುತ್ತದೆ. ಭಾರತದಲ್ಲಿ ಆಂತರಿಕವಾಗಿ ಉಗ್ರವಾದನವನ್ನು ಬೆಂಬಲಿಸುವ ಅನ್ಯಕೋಮಿನ ಜನರನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಮತ್ತೇ ಉಗ್ರವಾದ ವಿಚಾರಧಾರಗಳು ತಲೆ ಎತ್ತಲು ಆರಂಭಿಸುತ್ತವೆ. ಜಗತ್ತಿಗೆ ಕಂಟಕವಾಗಿರುವ ಉಗ್ರವಾದ ಮನಸ್ಥಿತಿಯನ್ನು ಯಾವ ರಾಷ್ಟ್ರಗಳಲ್ಲಿ ಹೆಚ್ಚು ಆಗುತ್ತಿದೆ ಎಂದು ಮೊದಲು ನಾಗರಿಕ ಸಮಾಜ ತಿಳಿಬೇಕಾಗಿದೆ. ಅದಕ್ಕಾಗಿಯೇ ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಯವರು ಇರಾನ್ ಮೇಲಿನ ಯುದ್ಧವನ್ನು ಖಂಡಿಸಿಲ,? ಬದಲಾಗಿ ಜಗತ್ತಿಗೆ ಯುದ್ಧದ ಅವಶ್ಯಕತೆ ಇಲ್ಲ, “ಯುದ್ಧ ಬೇಡ, ಜಗತ್ತಿಗೆ ಬುದ್ಧ ಬೇಕು” ಎಂದು ಬಲವಾಗಿ ಹೇಳಿದ್ದಾರೆ.
ಎಡಪಂಥಿಯ ವಿಚಾರಧಾರೆಗಳನ್ನು ಹೊಂದಿರುವ ಜನರು ಕಳೆದ ಐವತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಹೇಗೆ ಮಾಡಿದ್ದಾರೆ ಎನ್ನುವುದು ಅಧ್ಯಯನ ಮಾಡಲಿ, ಸದಾ ಬಂದೂಕಿನಿಂದ ಎಲ್ಲವನ್ನು ಗೆಲ್ಲುತ್ತೇವೆ ಎನ್ನುವವರಿಗೆ ನಿಮ್ಮ ಹೋರಾಟದ ಮುಖಾಂತರ ಯಾವ ಸಂದೇಶ ನೀಡುತ್ತಿರಿ? ಎನ್ನುವದು ಸ್ಪಷ್ಟವಾಗಿ ಕಾಣುತ್ತಿದೆ. ಜಗತ್ತಿನ ಚಿಂತೆ ಬಿಟ್ಟು ಆಂತರಿಕ ಭದ್ರತೆಯ ಕುರಿತು ಎಡಪಂಥಿಯರ ವಿಚಾರಗಳ ಕುರಿತು ಚಿಂತನೆ ಮಾಡಲಿ, ಹೀಗೆ ಪರೋಕ್ಷವಾಗಿ ಉಗ್ರವಾದವನ್ನು ಬೆಂಬಲಿಸುವವರನ್ನು ನೀವು ಬೆಂಬಲಿಸಿದರೆ, ಮುಂದಿನ ದಿನಗಳಲ್ಲಿ ನೀವು ಪಶ್ಚಾತಾಪ ಪಡುವಂತ ದಿನಗಳು ದೂರವಿಲ್ಲದಂತಾಗುತ್ತಿದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಖಾರವಾಗಿ ಟೀಕಿಸಿದ್ದಾರೆ.

























