
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೬: ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ. ಕಾವ್ಯ ರಚನೆ ಕಠಿಣವಾದ ಕೆಲಸ. ಕಾವ್ಯ ರಚನೆಗೆ ಶಬ್ದ ಸಂಗ್ರಹ, ಶಬ್ದಗಳ ಅರಿಕೆ ಮತ್ತು ಸಂದರ್ಭಾನುಸಾರ ಕಾವ್ಯದಲ್ಲಿ ಅವುಗಳ ಬಳಸಿಕೊಳ್ಳುವುದು ಗೊತ್ತಿರಬೇಕಾಗುತ್ತದೆ ಎಂದು ತ್ರಿಭಾಷ ಸಾಹಿತಿ ಜಿ.ಆರ್. ಕುಲಕರ್ಣಿ ಹೇಳಿದರು.
ನಗರದ ದಿವಟಗೇರಿ ರಾಯರ ಮಠದಲ್ಲಿ ರವಿವಾರ ೧೫ ಮಾರ್ಚ್ ರಂದು ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷದ್(ನೋಂ) ವಿಜಯಪುರ ಜಿಲ್ಲಾ ಸಮಿತಿ ಆಯೋಜನೆ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿದ ಅವರು ಕಾವ್ಯ ರಚನೆ ಕುರಿತು ತಿಳಿಸಿದರು.
ಇನ್ನೋರ್ವ ಅತಿಥಿ ಪ್ರೊ. ಚಿದಂಬರ ಪಾಟೀಲ ಅವರು ಮಾತನಾಡಿ, ಉತ್ತರ ಕರ್ನಾಟಕ ಸಾಹಿತ್ಯಗಳ ಬಗ್ಗೆ ಸಂಶೋಧನೆಯಾಗಬೇಕೆAದು ಆಶಯ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ರೇಖಾ ಮುತಾಲಿಕ ಅವರ ಕಥಾ ಕುಸುಮಗಳು ಪುಸ್ತಕ ಲೋಕಾರ್ಪಣೆಯಾಯಿತು. ಪ್ರಭಾಕ ಖೇಡದ ಹಾಗೂ ರೇಖಾ ಗೋಗಿ ಪುಸ್ತಕವನ್ನು ಪರಿಚಯಿಸಿದರು.
ಎರಡನೇ ಅವಧಿಯಲ್ಲಿ ಕವಿಗೋಷ್ಠಿ ಹಾಗೂ ಜೊತೆಗೆ ಅಭಾಸಾಪ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕವನ ಸ್ಪರ್ಧೆ ವಿಜೇತರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.
ಕವಿಗೋಷ್ಠಿಯಲ್ಲಿ ೨೫ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
ಅಧ್ಯಕ್ಷತೆ ವಿವೇಕ ಕುಲಕರ್ಣಿ ವಹಿಸಿದ್ದರು.
ಶ್ರೀರಂಗ ಕುಲಕರ್ಣಿ ನಿರೂಪಿಸಿದರು. ಗಂಗಾಧರ ಪವಾಡ ಶೆಟ್ಟಿ ಸ್ವಾಗತಿಸಿದರು. ಮಯೂರ ತಿಳಗೂಳಕರ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಕಾಂತ ಕುಲಕರ್ಣಿ , ಬಳವಂತ ಕುಲಕರ್ಣಿ , ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ , ಆನಂದ ಗೋಡಸೆ , ವಿಠ್ಠಲ ಜಾಧವ , ಪ್ರಕಾಶ ಜಾಗೀದಾರ , ಮಾಧುರಿ ಕುಲಕರ್ಣಿ , ಪ್ರಿಯಾ ಹರಿದಾಸ , ವಿದ್ಯಾವತಿ ಬೆಣ್ಣೂರ , ಭಾರತಿ ಗೋಡಸೆ ಮುಂತಾದವರು ಉಪಸ್ಥಿತರಿದ್ದರು






























