
ಬೆಂಗಳೂರು, ಮಾ. ೧೩- ಹಿರಿಯ ಶಾಸಕರುಗಳು ಮಂತ್ರಿಗಿರಿ ಬೇಡಿಕೆಯನ್ನು ಇಟ್ಟುಕೊಂಡು ನಿನ್ನೆ ಸಭೆ ನಡೆಸಿದ್ದೇವೆ. ಬರುವ ಸೋಮವಾರ ದೆಹಲಿಗೂ ಹೋಗುತ್ತೇವೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ಹಿರಿಯ ಶಾಸಕರ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಮಾನ ಮನಸ್ಕರುಳ್ಳ ಹಿರಿಯ ಶಾಸಕರು ಸಭೆ ಸೇರಿದ್ದೇವೆ. ೨೫ ಕ್ಕೂ ಹೆಚ್ಚು ಶಾಸಕರು ಇದ್ದೇವೆ. ಮಂತ್ರಿಗಿರಿ ಕೊಡಬೇಕು ಎಂಬ ಹಕ್ಕೋತ್ತಾಯವನ್ನು ಮಂಡಿಸಿದ್ದೇವೆ. ನಮ್ಮದು ಬೇಡಿಕೆಯಲ್ಲ, ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು.
೨೦೨೮ಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದ ನಮ್ಮೆಲ್ಲರ ಆಸೆ. ಹಾಗಾಗಿ ನಿನ್ನೆ ಹಿರಿಯ ಶಾಸಕರು ಸಭೆ ಸೇರಿ ಸಂಪುಟ ಪುನಾರಚನೆ ಆಗಬೇಕು ಎಬ ಒತ್ತಾಯವನ್ನು ಹೈಕಮಾಂಡ್ ಮುಂದಿಡಲು ನಿರ್ಧರಿಸಿದ್ದವೆ. ಸೋಮವಾರ ದೆಹಲಿಗೆ ಹೋಗುತ್ತೇವೆ ಎಂದರು.
ನಮ್ಮದು ಭಿನ್ನಮತ ಅಲ್ಲ, ನಮ್ಮ ಹಕ್ಕು ಮುಕ್ತವಾಗಿ ನಾವು ಮಾತನೋಡದು ಅಷ್ಟೇ. ಸರ್ಕಾರ ಗಟ್ಟಿ ಇದೆ. ಒಳ್ಳೆಯ ಬಜೆಟ್‌ನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಸಂಪುಟ ಪುನಾರಚನೆ ಮಾಡಿ ೪-೫ ಬಾರಿ ಗೆದ್ದಿರುವ ಶಾಸಕರನ್ನು ಮಂತ್ರಿ ಮಾಡಿ ಎಂಬ ಬೇಡಿಕೆ ಇಟ್ಟುಕೊಂಡು ನಿನ್ನೆ ಸಭೆ ನಡೆಸಿದ್ದೇವೆ ಎಂದರು.
ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಅಶೋಟ್ ಪೊಟ್ಟಣ ಹೇಳಿಕೆ
ನಿನ್ನೆ ಹಿರಿಯ ಶಾಸಕರ ಸಭೆ ಬಗ್ಗೆ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಸಹ ಪ್ರತಿಕ್ರಿಯೆ ನೀಡಿ, ಕೆಲ ಮಂತ್ರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಕೈಗೆ ಸಿಗುವುದಿಲ್ಲ. ಕೆಲ ಮಂತ್ರಿಗಳ ಕಾರ್ಯವೈಖರಿ ಬಗ್ಗೆ ಅಮಸಾಧಾನ ಇದೆ. ಹಾಗಾಗಿ ಸಂಪುಟ ಪುನಾರಚಿಸಿ ಹೊಸಬರಿಗೆ ಅವಕಾಶ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಶೀಘ್ರದಲ್ಲೇ ನಾವು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.






























