
ಯಾದಗಿರಿ:ಏ.೮: ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಪುಣ್ಯದ ಕಾರ್ಯವಾಗಿದ್ದು, ಇದು ಮಳೆ ಆರಂಭವಾಗುವವರೆಗೂ ನಿರಂತರವಾಗಿ ಮುಂದುವರಿಯಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಹಳೆ ಕೋರ್ಟ್ ಮುಂಭಾಗದಲ್ಲಿ ನಗರಸಭೆ ವತಿಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅರವಟಿಗೆ ಹಾಗೂ ಪಕ್ಷಿಗಳಿಗೆ ಕಾಳು ಮತ್ತು ನೀರಿನ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲ ಜೀವಿಗಳಿಗೂ ಊಟದ ಕೊರತೆ ಕೆಲವೊಮ್ಮೆ ಸಹನೀಯವಾದರೂ, ಕುಡಿಯುವ ನೀರು ಅತಿ ಅವಶ್ಯಕವಾಗಿದ್ದು, ಈ ದಿಕ್ಕಿನಲ್ಲಿ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ಪರಿಸರ ಅಭಿಯಂತರ ಪ್ರಶಾಂತ ಸೂರ್ಯವಂಶಿ, ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ ಹಾಗೂ ಸಿಬ್ಬಂದಿಗಳಾದ ಶಂಭುಲಿAಗ, ಶಿವಪುತ್ರ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.





















