Home ಮುಖಪುಟ ಸುದ್ದಿ ೨-೩ ವಾರಗಳಲ್ಲಿ ಯುದ್ಧ ಅಂತ್ಯ-ಟ್ರಂಪ್ ಸುಳಿವು

೨-೩ ವಾರಗಳಲ್ಲಿ ಯುದ್ಧ ಅಂತ್ಯ-ಟ್ರಂಪ್ ಸುಳಿವು

ವಾಷಿಂಗ್ಟನ್,ಏ೧:ಇರಾನ್ ವಿರುದ್ಧದ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮುಂದಿನ ಎರಡು ಮೂರು ವಾರಗಳಲ್ಲಿ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗಿದೆ.ಸಂಘರ್ಷವನ್ನು ಕೊನೆಗೊಳಿಸಲು ಅಮೇರಿಕಾ, ಇರಾನ್ ಜೊತೆ ರಾಜತಾಂತ್ರಿಕ ಒಪ್ಪಂದದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸಂಘರ್ಷ ನಿಲ್ಲಿಸಲು ಅಮೇರಿಕಾ ಮುಂದಿಟ್ಟ ೧೫ ಅಂಶಗಳ ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದ ಅಮೇರಿಕಾ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಯೂ ಟರ್ನ್ ಹೊಡೆದಿದ್ದು ಇರಾನ್, ಅಮೇರಿಕಾ ಜೊತೆ ಒಪ್ಪಂದ ಮಾಡಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ

ಶ್ವೇತಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮಧ್ಯಪ್ರಾಚ್ಯವನ್ನು ತಲ್ಲಣಗೊಳಿಸಿದೆ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದ ಒಂದು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷದ ಅಂತ್ಯದ ಬಗ್ಗೆ ಸುಳಿವು ನೀಡಿದ್ದಾರೆ.

ಈ ಸಂಬಂಧ ಶೀಘ್ರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಎರಡು ಮೂರು ವಾರಗಳಲ್ಲಿ ಸಂಘರ್ಷ ಮುಗಿಯಬಹುದು
ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕಕ್ಕೆ ಇರಾನ್‌ನೊಂದಿಗೆ ರಾಜತಾಂತ್ರಿಕ ಒಪ್ಪಂದ ಅಗತ್ಯವಿಲ್ಲ ಇರಾನ್ ಒಪ್ಪಂದ ಮಾಡಿಕೊಳ್ಳಬೇಕಾಗಿಲ್ಲ, ಇಲ್ಲ ಎಂದು ಹೇಳಿದ್ದಾರೆ

ಇರಾನ್ ವಿರುದ್ದ ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್‌ನ ಅಗತ್ಯ ಮೂಲ ಸೌಕರ್ಯ ನಾಶ ಮಾಡಿದ್ದೇವೆ ತ್ವರಿತವಾಗಿ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ

ಪರಮಾಣು ಶಸ್ತ್ರಾಸ್ತ್ರಗಳನ್ನು ಅನುಸರಿಸದಿರಲು ಇರಾನ್ ಬದ್ಧತೆ, ಯುರೇನಿಯಂ ಪುಷ್ಟೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವುದು ಚೌಕಟ್ಟಿನ ಪ್ರಮುಖ ಬೇಡಿಕೆಗಳಲ್ಲಿ ಸೇರಿವೆ

ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಾತನಾಡಿ ಸಾವಿರಾರು ಜನರನ್ನು ಕೊಂದ, ಪ್ರದೇಶದಾದ್ಯಂತ ಹರಡಿರುವ, ಇಂಧನ ಪೂರೈಕೆ ಅಡ್ಡಿಪಡಿಸಿದ ಮತ್ತು ಜಾಗತಿಕ ಆರ್ಥಿಕ ಆಘಾತದ ಭಯ ಹುಟ್ಟುಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಒಪ್ಪಂದಕ್ಕೆ ಮುಕ್ತರಾಗಿದ್ದಾರೆ ಎಂದು ಹೇಳಿದ್ಧಾರೆ