Home ಮುಖಪುಟ ಸುದ್ದಿ ೩ ರಾಜ್ಯಗಳಲ್ಲಿ ಮತದಾನ ಶಾಂತಿಯುತ

೩ ರಾಜ್ಯಗಳಲ್ಲಿ ಮತದಾನ ಶಾಂತಿಯುತ

ಎಡದಿಂದ ಬಲಕ್ಕೆ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಬಿಜೆಪಿ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಮತ್ತು ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸಾಮಿ.

ಘಟಾನುಘಟಿಗಳ ಭವಿಷ್ಯ ನಿರ್ಧಾರ

ನವದೆಹಲಿ,ಏ.೯- ದೇಶದ ಭವಿಷ್ಯದ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಪೈಕಿ ಇಂದು ಅಸ್ಸಾಂ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು ಎಲ್ಲೆಡೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.


ಅಸ್ಸಾಂ ಪುದುಚೇರಿ ಮತ್ತು ಕೇರಳಂನಲ್ಲಿ ಯಾರಿಗೆ ಅಧಿಕಾರ ಚುಕ್ಕಾಣಿ ಸಿಗಲಿದೆ ಹಾಗೂ ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯಕ್ಕೆ ಮತದಾರರು ಇಂದು ಮುದ್ರೆ ಒತ್ತಿದ್ದಾರೆ ಮತದಾರರ ತೀರ್ಪು ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದ್ದುಮೇ ನಾಲ್ಕರಂದು ಮತದಾರರ ತೀರ್ಪು ಬಹಿರಂಗವಾಗಲಿದೆ ಇಂದು ಮತದಾನ ನಡೆದಿರುವ ಮೂರು ರಾಜ್ಯಗಳಲ್ಲೂ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದು ಮತದಾನ ಬಿರಿಸಿನಿಂದ ಸಾಗಿದೆ


ಅಸ್ಸಾಂನಲ್ಲಿ ಮಧ್ಯಾಹ್ನದ ವೇಳೆಗೆ ಶೇ.೫೫. ಕೇರಳ ಶೇ.೫೪.೨೩ ಮತ್ತು ಪುದುಚೇರಿ ಶೇ.೫೬.೪೧ ಮತದಾನವಾಗಿದೆ, ಸಂಜೆ ೬ ಗಂಟೆಯ ತನಕ ಮತದಾನ ನಡೆಯಲಿದ್ದು ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.


ಕೇರಳಂನ ೧೪೦ ವಿಧಾನಸಭಾ ಕ್ಷೇತ್ರ, ಅಸ್ಸಾಂನ ೧೨೬ ಮತ್ತು ಪುದುಚೆರಿಯ ೩೦ ವಿಧಾನಸಭಾ ಕ್ಷೇತ್ರಗಳಿಗೆ ಬಿಗಿ ಭದ್ರತೆಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ
ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಬಿಜೆಪಿ ಮತ್ತು ಎಡ ಪಕ್ಷಗಳು ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ರೂಪಿಸಿದ್ದರೆ ,ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳು ತವಕದಲ್ಲಿದೆ.


ಅಸ್ಸಾಂನಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿ ಅಧಿಕಾರ ಕಸಿಯಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಅದೇ ರೀತಿ
ಪುದುಚೆರಿಯಲ್ಲಿ ಎನ್ ಆರ್ ಕಾಂಗ್ರೆಸ್‌ನ ರಂಗಸ್ವಾಮಿ ಆಡಳಿತ ಮತ್ತೊಮ್ಮೆ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್ ಅಧಿಕಾರ ಕಸಿಯುವ ಪ್ರಯತ್ನ ನಡೆಸಿದೆ.

೭೨೨ ಅಭ್ಯರ್ಥಿಗಳು ಕಣದಲ್ಲಿ


ಅಸ್ಸಾಂನಲ್ಲಿ ೧೨೬ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು೭೨೨ ಅಭ್ಯರ್ಥಿಗಳ ಕಣದಲ್ಲಿದ್ದು ೨.೫ ಕೋಟಿಗೂ ಹೆಚ್ಚು ಮತದಾರರು ಅಸ್ಸಾಂ ಮುಖ್ಯಮಂತ್ರಿ ಹಿಮಾಂಶು ಬಿಸ್ವಾಸ್ ಶರ್ಮಾ ಸೇರಿದಂತೆ ಘಟಾನುಘಟಿ ನಾಯಕರ ಭವಿಷ್ಯ ಇಂದು ನಿರ್ಧಾರಿಸಲಿದ್ದಾರೆ.

ಅವರ ರಾಜಕೀಯ ಹಣೆಬರೆಹ ನಿರ್ಧರಿಸಲಿದ್ಧಾರೆ


ಬೆಳಗ್ಗೆ ೭ ಗಂಟೆಗೆ ಮತದಾನ ಶುರವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಸತತ ಪ್ರಯತ್ನ ಮಾಡಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ರೈಜೋರ್ ದಳ ಮತ್ತು ಸಿಪಿಐ(ಎಂ) ಅಸ್ಸಾಂನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ.


೨,೫೦,೫೪,೪೬೩ ಮತದಾರರಲ್ಲಿ, ೧,೨೫,೩೧,೫೫೨ ಪುರುಷ ಮತದಾರರು ಮತ್ತು ೧,೨೫,೨೨,೫೯೩ ಮಹಿಳೆಯರು. ೩೧೮ ತೈತೀಯ ಲಿಂಗಿಗಳು ಮತ್ತು ೬೩,೪೨೩ ಸೇವಾ ಮತದಾರರಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾನದ ತಂಡಗಳು ಐವಿಎಂಗಳು ಮತ್ತು ವಿವಿಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದವು. ಈಗ ಬೆಳಗ್ಗೆಯಿಂದಲೇ ಮತದಾರರು ಉದ್ದನೆಯ ಸಾಲಿನಲ್ಲಿ ನಿಂತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರು ಉತ್ಸಾದಿಂದ ತಮ್ಮ ಹಕ್ಕು ಚಲಾಯಿಸುತ್ತಿರು ದೃಶ್ಯ ಕಂಡುಬಂತು.


೧೬,೦೦೦ ಸಿಬ್ಬಂದಿ, ೧,೭೦೦ ಮತಗಟ್ಟೆಗಳಲ್ಲಿ ಸುಮಾರು ೪,೦೦೦ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಅವರಿಗೆ ಎರಡು ಕಂಪನಿಗಳ ಸಿಎಪಿಎಫ್ ಮೀಸಲು ಇಡಲಾಗಿದೆ ಎಂದು.

೩೦ ಕ್ಷೇತ್ರಗಳಿಗೆ ಮತದಾನ
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ, ಎಲ್ಲಾ ೩೦ ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಎನ್.ರಂಗಸ್ವಾಮಿ ಸೇರಿದಂತೆ ಒಟ್ಟು ೨೯೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಎನ್‌ಡಿಎ, ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವನ್ನು ಎದುರಿಸುತ್ತಿದೆ. ಸುಮಾರು ೯.೫ ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ೧,೦೦೦ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕೇರಳಂ ರಾಜ್ಯದಲ್ಲೂ ಡಳಿತರೂಢ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಚುನಾವಣೆ ಪೈಪೋಟಿ ಇದ್ದು ಎಡ ಪಕ್ಷಗಳ ನೇತೃತ್ವದ ಯುಡಿಫ್ ಚುನಾವಣೆ ಗೆದ್ದು ಹ್ಯಾಟ್ರಿಕ್ ಬಾರಿಸುವ ದವಕದಲ್ಲಿದ್ದರೆ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತೆ ಅಧಿಕಾರ ಗದ್ದುಗೆ ಇರುವ ಹರಸಾಹಸ ನಡೆಸಿದೆ