ಮತಗಳ್ಳತನ: ಗುತ್ತೇದಾರ ಖಂಡನೆ

ಕಲಬುರಗಿ,ಅ.29-ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆದ 2023 ರ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಮತಕಳ್ಳತನ ಮಾಡಿ ಮತದಾರರ ಮತದಾನ ಕಸಿದುಕೊಂಡು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರುವದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದÀ ಜಗದೇವ ಗುತ್ತೇದಾರ ಕಾಳಗಿ ತೀವ್ರವಾಗಿ ಖಂಡಿಸಿದ್ದಾರೆ.
ವೋಟಚೊರಿ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲಗಾಂಧಿಯವರು ದೇಶದಾದ್ಯಂತ ಹೊರಾಟ ನೆಡೆಸಿರುವ ಫಲವಾಗಿ ಆಳಂದ ಕ್ಷೇತ್ರದ ವೋಟಚೊರಿ ಅಕ್ರಮ ಬಯಲಿಗೆ ಬಂದಿದೆ. ಇದನ್ನು ಸರಕಾರ ಎಸ್.ಐ.ಟಿ. ತನಿಖೆ ವಹಿಸಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸುತ್ತಿದೆ. ವೋಟಚೊರಿ ಮಾಡಿ ವಾಮಮಾರ್ಗದ ಮೂಲಕ 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲು ಕುತಂತ್ರ ನಡೆಸಿ ಮತದಾರರ ಮತದಾನ ಕಸಿದುಕೊಂಡಿರುವದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ.ü ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ
ಮಾಡಿಕೊಂಡು ವೋಟಚೊರಿ ಮಾಡುತ್ತಿರುವದು ಖಂಡನೀಯ. ಭಾರತ ಸಂವಿಧಾನದ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಅಧಿಕಾರ ದಾಹಕ್ಕಾಗಿ ಏನೆಲ್ಲಾ ಕುತಂತ್ರ ನಡೆಸಿ ವೋಟಚೊರಿ ಮೂಲಕ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿ ಆಳಂದ ಕ್ಷೇತ್ರದ ಮತದಾರರ ಮತದಾನ ಹಕ್ಕು ಕಸಿದುಕೊಂಡಿರುವದನ್ನು ಅವರು ಖಂಡಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ
ಕಲಿಸಲಿದ್ದಾರೆಂದು ಅವರು ಎಚ್ಚರಿಸಿದ್ದಾರೆ.