
ಬೀದರ್: ಪಾಶ್ರ್ವವಾಯುಗೆ ತುತ್ತಾದ ರೋಗಿಯು 4 ಗಂಟೆ ಒಳಗೆ ನುರಿತ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖವಾಗುವ ಪ್ರಮಾಣ ಹೆಚ್ಚಿರುತ್ತದೆ ಎಂದು ಗುದಗೆ ಸೂಪರ್ ಸ್ಪೆಶಾಲಿಟಿ ಹಾಗೂ ಮಲ್ಟಿ ಆಸ್ಪತ್ರೆಯ ಖ್ಯಾತ ನರರೋಗ ತಜ್ಞರಾದ ಪ್ರಶಾಂತ ಅಲ್ಲೇ ತಿಳಿಸಿದರು.
ನಗರದ ಪ್ರತಿಷ್ಠಿತ ಗುದಗೆ ಸೂಪರ್ ಸ್ಪೆಷಾಲಿಟಿ ಹಾಗೂ ಮಲ್ಟಿ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಎಂ. ಆರ್. ಐ, ಸಿಟಿ ಸ್ಕ್ಯಾನ್ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಹಮ್ಮಿಕೊಂಡ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 1.8 ಕೋಟಿ ಜನರಿಗೆ ಪಾಶ್ರ್ವವಾಯು (ಸ್ಟ್ರೋಕ್) ಉಂಟಾಗುತ್ತಿದ್ದು, ಅದರ ಪರಿಣಾಮವಾಗಿ 50 ಲಕ್ಷ ಜನರು ಸಾವನ್ನಪ್ಪುತ್ತಾರೆ. “ಸ್ಟ್ರೋಕ್ ಇಸ್ ಎ ಮೆಡಿಕಲ್ ಎಮರ್ಜೆನ್ಸಿ” ಎಂಬ ನುಡಿಗಟ್ಟಿನಡಿ ಈ ದಿನ ವಿಶ್ವ ಪಾಶ್ರ್ವವಾಯು ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಪಾಶ್ರ್ವವಾಯು ಬಾಧಿತರಿಗೆ “ವೇಗವಾಗಿ ಚಿಕಿತ್ಸೆ ನೀಡುವುದು ಜೀವ ಉಳಿಸುವ ಪ್ರಮುಖ ಅಂಶ, ಪಾಶ್ರ್ವವಾಯು ತಡೆಗಟ್ಟಲು ಸಮಯದ ಮೌಲ್ಯ ತುಂಬಾ ಮುಖ್ಯ. ಮೊದಲ ನಾಲ್ಕು ಮತ್ತು ಅರ್ಧ ಗಂಟೆಗಳಲ್ಲಿ ಚಿಕಿತ್ಸೆ ದೊರೆತರೆ, ಜೀವ ಉಳಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಪುನರೂಚ್ಛರಿಸಿದರು.
ಉನ್ನತ ರಕ್ತದೊತ್ತಡ, ಮಧುಮೇಹ, ಧೂಮಪಾನ ಮತ್ತು ಅತಿ ತೂಕ ಪಾಶ್ರ್ವವಾಯುಗೆ ಪ್ರಮುಖ ಕಾರಣಗಳಾಗಿವೆ. ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳಿಂದ ಸ್ಟ್ರೋಕ್ ತಡೆಯಬಹುದು. ಸ್ಟ್ರೋಕ್‍ನ ಮೊದಲ ಲಕ್ಷಣಗಳನ್ನು ಗುರುತಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ದೇಹದ ಒಂದು ಭಾಗ ದುರ್ಬಲವಾಗುವುದು, ಮಾತಿನಲ್ಲಿ ಅಸ್ಪಷ್ಟತೆ ಅಥವಾ ಮುಖದ ಬದಿಯ ವಕ್ರತೆ ಕಾಣಿಸಿದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದರು.
ಪಾಶ್ರ್ವವಾಯು ತುರ್ತು ಸ್ಥಿತಿ ಎಂದರೆ ತಕ್ಷಣ ಚಿಕಿತ್ಸೆ ಅಗತ್ಯ, ಮೊದಲ 4.5 ಗಂಟೆಗಳು ನಿರ್ಣಾಯಕ, ಜೀವನ ಶೈಲಿ ಬದಲಾವಣೆ ಮತ್ತು ನಿಯಮಿತ ತಪಾಸಣೆ ಮುಖ್ಯ, ಸಾರ್ವಜನಿಕ ಜಾಗೃತಿ ಅಗತ್ಯ ಎಂದು ಡಾ.ಅಲ್ಲೆ ಪ್ರತಿಪಾದಿಸಿದರು.
ಗುದಗೆ ಸೂಪರ್ ಸ್ಪೆಷಾಲಿಟಿ ಹಾಗೂ ಮಲ್ಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಡಾ ಚಂದ್ರಕಾಂತ ಗುದಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿಶ್ವದಾದ್ಯಂತ ವಲ್ರ್ಡ್ ಸ್ಟೋಕ್ ಡೇ ಎಂದು ಆಚರಿಸಲಾಗುತ್ತಿದೆ. ಹಾಗೆ ನಮ್ಮ ಆಸ್ಪತ್ರೆಯಲ್ಲೂ ಸಹ ಇಂದು ವಲ್ರ್ಡ್ ಸ್ಟೋಕ್ ಡೆ ನಿಮಿತ್ಯ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಶಿಬಿರ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ನಮ್ಮ ಆಡು ಭಾಷೆಯಲ್ಲಿ ಲಕವಾ ಅಥವಾ ಪ್ಯಾರಾಲೈಸಿಸ್ ಎಂದು ಕರೆಯಲಾಗುತ್ತದೆ. ಪಾಶ್ರ್ವವಾಯು ಉಂಟಾಗಲು ರಕ್ತನಾಳದಲ್ಲಿ ತಂಬೋಸಿಸ್ ಅಥವಾ ನರಗಳ ದೌರ್ಬಲ್ಯದಿಂದ ಇದು ಸಂಭವಿಸುತ್ತದೆ. ಇದರಿಂದ ರಕ್ತಚಲನ ಪ್ರಮಾಣ ಕಡಿಮೆ ಆಗಿ ಆಮ್ಲಜನಕ ಸೇರಿದಂತೆ ಇತರೆ ಪೆÇೀಷಕಾಂಶಗಳ ಸಾಗಾಟ ಕಡಿಮೆಯಾಗಿ ಪಾಶ್ರ್ವವಾಯು ಸಂಭವಿಸುತ್ತದೆ. ಇದರಿಂದ ಒಂದು ನಿಮಿಷಕ್ಕೆ 10 ಲಕ್ಷ 90ಸಾವಿರ ನರಗಳು ಸತ್ತು ಹೋಗುತ್ತವೆ. ಇದಕ್ಕೆ ಗೋಲ್ಡನ್ ಪಿರೇಡ್ ಎಂದು ಕರೆಯಲ್ಪಡುವ ನಾಲ್ಕು ಗಂಟೆ ಒಳಗಡೆ ನುರಿತ ವೈದ್ಯರಿಂದ ಪರಿಣಾಮಕಾರಿ ಚಿಕಿತ್ಸೆ ಪಡೆದಾಗ ಮಾತ್ರ ರೋಗದ ಪ್ರಮಾಣ ಕಡಿಮೆಯಾಗಿಸಲು ಸಾಧ್ಯವಿದೆ. ಇದರಿಂದ ಕೈಕಾಲು, ಬಾಯಿ ಸೇರಿದಂತೆ ಇತರೆ ಅಂಗಾಂಗದಲ್ಲಿ ಪುನಃ ಚೇತನಗೊಳ್ಳಲು ಸಾಧ್ಯವಿದೆ . ಅದಕ್ಕೆ ಸಮಯ ಬಹಳ ಮುಖ್ಯ. ಇದನ್ನು ತುರ್ತು ಪರಿಸ್ಥಿತಿ ಚಿಕಿತ್ಸೆ ರೂಪದಲ್ಲಿ ಗುರ್ತಿಸಬಹುದಾಗಿದೆ ಎಂದರು.
ಒಳ್ಳೆಯ ಹಾಗೂ ಮನೆಯ ಮಿತ ಆಹಾರ ಅಗತ್ಯ. ಸಕ್ಕರೆ ಹಾಗೂ ಉಪ್ಪಿನ ಬಳಕೆ ಕಡಿಮೆ ಮಾಡಬೇಕು. ದಿನಾಲು ವ್ಯಾಯಾಮ, ವಾಯುವಿಹಾರ, ಯೋಗ ಹಾಗೂ ಧ್ಯಾನ, ಸರಿಯಾದ ನಿದ್ರೆ, ಹೆಚ್ಚು ನೀರು ಕುಡಿಯುವುದು, ಮಾನಸಿಕ ಒತ್ತಡ ನಿವಾರಣೆಗೆ ಒತ್ತು ನೀಡುವುದು, ಅತಿ ಅವಶ್ಯಕವಾಗಿದೆ ಎಂದು ಡಾ.ಗುದಗೆ ಹೇಳಿದರು.
ಬುಧವಾರ ಬೆಳಿಗ್ಗೆ 9.30 ಗಂಟೆಯಿಂದ ಸಾಯಂಕಾಲ 4 ಗಂಟೆ ವರೆಗೆ ಬೀದರ್ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ರಾಜ್ಯದ ಜಹಿರಾಬಾದ್, ನಾರಾಯಣಖೇಡ, ಮಹಾರಾಷ್ಟ್ರದ ಉದಗೀರ, ನಿಲಂಗಾ ಸೇರಿದಂತೆ ಇತರೆ ಕಡೆಗಳಿಂದ ನೂರಾರು ರೋಗಿಗಳು ಗುದಗೆ ಆಸ್ಪತ್ರೆಗೆ ಧಾವಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಆಗಮಿಸಿದ ಎಲ್ಲ ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಎಂ ಆರ್ ಐ, ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಚಿಕಿತ್ಸೆಯಲ್ಲಿ ರಿಯಾಯಿತಿ ನೀಡಿ ರೋಗಿಗಳನ್ನು ಉಪಚರಿಸಲಾಯಿತು.
ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸಚಿನ್ ಗುದಗೆ, ಖ್ಯಾತ ಹೃದಯ ರೋಗ ತಜ್ಞರಾದ ಡಾ.ನಿತಿನ್ ಗುದಗೆ, ಇತರೆ ಹಿರಿಯ ವೈದ್ಯರಾದ ಡಾ.ಮಹೇಶ ತೊಂಡಾರೆ, ಡಾ. ನಾಗಭೂಷಣ್, ಹೈದರಾಬಾದಿನ ಖ್ಯಾತ ಕ್ಯಾನ್ಸರ್ ರೋಗ ತಜ್ಞರಾದ ಡಾ. ಲಕ್ಷ್ಮೀ ಹರೀಶ, ಡಾ ಶಾರದಾ ಗುದಗೆ, ಡಾ. ವಿಜಯಲಕ್ಷ್ಮಿ ಗುದಗೆ, ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು, ಹಾಗೂ ರೋಗಿಗಳ ಅವಲಂಬಿತರು ಶಿಬಿರದಲ್ಲಿ ಪಾಲ್ಗೊಂಡರು.






























