Home ಜಿಲ್ಲೆ ಮಾ. 22 ರಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ: ದೊಡ್ಡೆಂದ್ರ ಶ್ರೀಗಳು

ಮಾ. 22 ರಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ: ದೊಡ್ಡೆಂದ್ರ ಶ್ರೀಗಳು

ಬೀದರ್:ಮಾ.12: ಮಾ. 22 ರಂದು ನಗರದ ಕುಂಬಾರವಾಡ ಕಮಾನ್ ಹತ್ತಿರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಬೆ. 11 ಗಂಟೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಜಿಲ್ಲಾ ಘಟಕದ ವತಿಯಿಂದ ವಿಶ್ವಕರ್ಮ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಪೂಜ್ಯ ಶ್ರೀ ದೊಡ್ಡೆಂದ್ರ ಮಹಾಸ್ವಾಮಿಗಳು ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಆಗಮಿಸಲಿದ್ದು, ಸಮಾವೇಶದಲ್ಲಿ ಸಮಾಜದ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ಥಿತಿಗತಿ ಕುರಿತು ಚರ್ಚೆಯಾಗಲಿದೆ. ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ಸೌಲಭ್ಯ, ತಿಂಥಣಿ ಮೌನೇಶ್ವರ ಪ್ರಾಧಿಕಾರ ರಚನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಯಾಗಲಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ದತ್ತಾತ್ರಿ ವಿಶ್ವಕರ್ಮ ಹಿಪ್ಪಳಗಾಂವ ಮಾತನಾಡುತ್ತ ವಿಶ್ವಕರ್ಮ ಸಮುದಾಯ ಇಂದು ಬಹಳಷ್ಟು ಹಿಂದುಳಿದಿದೆ. ನಮ್ಮಿಂದಲೇ ದೇಶದ ಹಲವು ಪುತ್ಥಳಿಗಳು, ಹಲವು ವಸ್ತುಗಳಿಗೆ ಒಂದು ಹೊಸ ರೂಪ ಕೊಡಲಾಗುತ್ತದೆ. ಆದರೆ ನಮ್ಮ ಸಮಾಜಕ್ಕೆ ಒಂದು ರಾಜಕೀಯ ಮತ್ತು ಆರ್ಥಿಕ ನೆಲೆ ಇಲ್ಲದಂತಾಗಿದೆ. ಸಮಾಜದ ಬಾಂಧವರು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸಿ ಸಮಾಜವನ್ನು ಒಗ್ಗೂಡಿಸಲು ಮತ್ತು ಸಂಘಟಿಸಲು ಸಮಾವೇಶಕ್ಕೆ ಆಗಮಿಸಬೇಕೆಂದು ತಿಳಿಸಿದರು.
ಇದೇ ವೇಳೆ ಮಹಾಸಭಾದ ಗೌರವಾಧ್ಯಕ್ಷ ಜಯಪ್ರಕಾಶ ಪೆÇದ್ದಾರ, ಮಹಿಳಾ ಗೌರವಾಧ್ಯಕ್ಷೆ ಅಂಬುಜಾ ವಿಶ್ವಕರ್ಮ, ಮಹಿಳಾ ಜಿಲ್ಲಾಧ್ಯಕ್ಷೆ ಸುಲೋಚನಾ ವಿಶ್ವಕರ್ಮ, ಯುವ ಘಟಕದ ಅಧ್ಯಕ್ಷ ಪ್ರಶಾಂತ ವಿಶ್ವಕರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.