ಅಥಣಿಯಲ್ಲಿ ಫೆ.೦೨ ರಂದು ವಿರಾಟ್ ಹಿಂದೂ ಸಮ್ಮೇಳನ

ಅಥಣಿ : ಜ.೩೧:ಹಿಂದೂ ಧರ್ಮವನ್ನು ಒಗ್ಗೂಡಿಸಬೇಕು ಹಿಂದೂ ಧರ್ಮವನ್ನು ಗಟ್ಟಿಯಾಗಿ ಬೆಳೆಸಬೇಕು. ನಾವೆಲ್ಲರೂ ಹಿಂದೂಗಳು ಒಂದಾಗಬೇಕು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಉದ್ದೇಶ ಇಟ್ಟುಕೊಂಡು ಫೆ. ೦೨ ರಂದು ಸೋಮವಾರ ವಿರಾಟ್ ಹಿಂದೂ ಸಮಾವೇಶವನ್ನು ಆಯೋಜಿಸಲಾಗಿದ್ದು. ಜಾತಿ ಮತ ಪಂಥ ರಾಜಕೀಯ ಎನ್ನದೆ ವಿರಾಟ ಹಿಂದೂ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಭಾಗವಹಿಸಿ ಕಾರ್ಯಕ್ರಮ
ಯಶಸ್ವಿಗೊಳಿಸಬೇಕು ಎಂದು ಆರ್ ಎಸ್ ಎಸ್ ಪ್ರಾಂತ ಸಂಚಾಲಕ ಅರವಿಂದರಾವ್ ದೇಶಪಾಂಡೆ ಕರೆ ನೀಡಿದರು.
ಅಥಣಿ ಶುಕ್ರವಾರ ಪಟ್ಟಣದ ಆರ್ ಎಚ್ ಕುಲಕರ್ಣಿ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ ಹಿಂದೂ ಸಮ್ಮೇಳನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ ಉಸ್ತುವಾರಿ ಹಾಗೂ ಕೇಂದ್ರದ ಸಚಿವ ಗೋಪಾಲ ಜಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದಿವ್ಯ ಸಾನಿಧ್ಯವನ್ನ ನಿಡಸೋಸಿ ಸಿದ್ದ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ಸಾನಿಧ್ಯವನ್ನ ಅಥಣಿ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮೀಜಿ. ವಹಿಸಲಿದ್ದಾರೆ. ಎಂದು ಹೇಳಿದ ಅವರು ಭಾರತೀಯ ಹಿಂದೂ ಸಂಸ್ಕೃತಿ ಪರಂಪರೆ ಉಳಿಬೇಕು ಸನಾತನ ಪರಂಪರೆ ಉಳಿಬೇಕು, ಎಂಬ ಉದ್ದೇಶದಿಂದ ಅನೇಕ ಸ್ಥಳಗಳಲ್ಲಿ ವಿರಾಟ್ ಹಿಂದೂ ಸಮ್ಮೇಳನಗಳು ನಡೆಯುತ್ತಿವೆ. ಫೆ.೦೨ ರಂದು ನಡೆಯುವ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಸಮಗ್ರ ಹಿಂದೂ ಕುಲದ ಎಲ್ಲ ಜನರು ಹಾಗೂ ಪಕ್ಷಾತೀತವಾಗಿ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು
ಆನಂತರ ವಿರಾಟ್ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಅದ್ಯಕ್ಷ ಅಣ್ಣಪ್ಪ ಹುದ್ದಾರ ಮಾತನಾಡಿ ಸಮ್ಮೇಳದಲ್ಲಿ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡುತ್ತದೆ. ಯುವಜನತೆ ತನ್ನ ಪಾರಂಪರಿಕ ಮೌಲ್ಯಗಳ ಕುರಿತು ಅಭಿಮಾನ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಬಹುದು. ಪರಿಸರ, ಶ್ರೇಷ್ಠ ಜೀವನ ಶೈಲಿ ಮತ್ತು ಆರೋಗ್ಯದ ವಿಚಾರಗಳ ಬಗ್ಗೆ ಹಾಗೂ ಹಿಂದೂ ಸಮಾಜದ ಅರಿವು ಅವರಲ್ಲಿ ಮೂಡುತ್ತದೆ. ಇವತ್ತು ಹಿಂದೂ ಧರ್ಮ ಗಟ್ಟಿಯಾಗ ಬೇಕಾದರೆ ದೇಶದಲ್ಲಿರುವ ಎಲ್ಲ ಹಿಂದುಗಳು ಒಂದಾಗಬೇಕೆAದು ಕರೆ ನೀಡಿದರು.

“ಶೋಭಾ ಯಾತ್ರೆ”
ಅಥಣಿ ಪಟ್ಟಣದಲ್ಲಿ ಫೆ. ೦೨ ಸೋಮವಾರ ರಂದು ಮಧ್ಯಾಹ್ನ ೦೩ ಗಂಟೆಗೆ ವಿರಾಟ ಹಿಂದೂ ಸಮ್ಮೇಳನದ ಶೋಭಾ ಯಾತ್ರೆ ಪಟ್ಟಣದ ಸಿದ್ದೇಶ್ವರ ಅಗಸ (ವಿದ್ಯಾಪೀಠ ಶಾಲೆ) ಯಿಂದ ಆರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಭೋಜರಾಜ ಕ್ರೀಡಾಂಗಣದಲ್ಲಿ ನಡೆಯುವ ಸಮ್ಮೇಳನ ಸ್ಥಳಕ್ಕೆ ಆಗಮಿಸಲಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಮಹೇಶ ಕಾಪಸೆ, ಡಾ.ರಾಹುಲ ಭೋಸಲೆ, ಪ್ರಭಾಕರ ಚವ್ಹಾಣ, ಗಿರೀಶ ಬುಟಾಳೆ, ಅಪ್ಪಾಸಾಬ ಅವತಾಡೆ, ರವಿ ಪೂಜಾರಿ, ಸಂಪತಕುಮಾರ ಶೆಟ್ಟಿ, ಸಿದ್ದಪ್ಪ ಮುದಕಣ್ಣವರ, ಡಾ.ವಿನಾಯಕ ಚಿಂಚೋಳಿಮಠ, ಚಂದ್ರಶೆಖರ ಯಲ್ಲಟ್ಟಿ, ಸೌರಭ ಮಾಶಾಳ, ಪ್ರಶಾಂತ ತೋಡಕರ, ದೇವೇಂದ್ರ ಬಿಸ್ವಾಗರ, ಎಸ್ ಕೆ ಹೋಳೆಪ್ಪನವರ, ವೀರೇಂದ್ರ ಕಾಗವಾಡೆ, , ಸುನಂದಾ ಚವ್ಹಾಣ, ಸರೋಜಿನಿ ಪಟ್ಟಣ, ಶೋಭಾ ಕುಂಬಾರ, ಶಾರದಾ ಹಣಮಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.