ಹಳ್ಳಿ ಕ್ಷೌರಿಕೆ ಮನೆ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ

ಕೋಲಾರ,ಫೆ,೧೯-ಸವಿತಾ ಸಮಾಜದ ವತಿಯಿಂದ “ಹಳ್ಳಿ ಕ್ಷೌರಿಕೆ ಮನೆ ವಾಸ್ಯವ್ಯ ಎಂಬ ಕಾರ್ಯಕ್ರಮವನ್ನು ಮೂಡಣಬಾಗಿಲಿನ ಕೋಲಾರ ತಾಲ್ಲೂಕಿನ ದೊಡ್ಡಸ್ಸಾಳ ಗ್ರಾಮದಲ್ಲಿ ಇಂದು ಚಾಲನೆ ನೀಡಲಾಗುವುದು ಎಂದು ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತುರಾಜ್ ತಿಳಿಸಿದರು.


ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಸವಿತ ಸಮಾಜದ ಸಂಘವು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸವಿತಾ ಬಂಧುಗಳಿಗೆ ಸರ್ಕಾರದ ವತಿಯಿಂದ ಅನುದಾನ ಮತ್ತು ನಿಗಮಗಳಿಂದ ದೊರೆಯುತ್ತಿರುವ ಸೌಲಭ್ಯಗಳ ಹಾಗೂ ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ದೆಸೆಯಲ್ಲಿ ಹಾಗೂ ಸಮಾಜದಲ್ಲಿ ಸಮಾನತೆಯ ಹಕ್ಕು ಚಲಾಯಿಸಲು ಆತ್ಮಸ್ಥೆರ್ಯ ತುಂಬುವ ದಿಸೆಯಲ್ಲಿ ಈ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಆಯೋಜಿಸಲಾಗುವುದು ಎಂದು ಹೇಳಿದರು.


ಶತಶತಮಾನಗಳಿಂದ ಕ್ಷೌರಿಕ ಸಮುದಾಯವನ್ನು ಕೀಳಾಗಿ ಗುರುತಿಸಿ ಶೋಷಣೆಗೆ ತುತ್ತಾಗುತ್ತಿದೆ.. ಅದರೆ ಸಮಾಜದಲ್ಲಿ ಪ್ರತಿಯೊಬ್ಬರ ಹುಟ್ಟಿನಿಂದ ಸಾಯುವವರೆಗೆ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸವಿತ ಸಮುದಾಯ ಇಲ್ಲದೆ ಯಾವೂದೇ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ದೇವರ ಕಾರ್ಯಕ್ರಮ, ಮಂಗಳ ಕಾರ್ಯಕ್ರಮಗಳು, ಗೃಹ ಪ್ರವೇಶಗಳು, ಮದುವೆಗಳು, ಸೇರಿದಂತೆ ಎಲ್ಲಾ ಸಮುದಾಯವರು ಸವಿತ ಸಮುದಾಯದವರು ವಾದ್ಯಗಳನ್ನು ನುಡಿಸದೆ ಯಾವ ಕಾರ್ಯಕ್ರಮಗಳನ್ನು ಮಾಡಲಾರರು.ಪ್ರತಿಯೊಂದು ಸಮುದಾಯಗಳಿಗೆ ನಮ್ಮ ಸಮಾಜದ ಅವಶ್ಯಕತೆ ಇರುವಾಗ ಸಮಾನತೆಯಿಂದ ಕಾಣುವಂತಾಗ ಬೇಕಾಗಿರುವುದು ಸಮಾಜಿಕ ನ್ಯಾಯವಾಗಿದೆ ಎಂದರು.


ಯಾವೂದೇ ಕಾರ್ಯಕ್ರಮಗಳಿಗೆ ಜಾತಿ ಭೇದವಿಲ್ಲದೆ ಪ್ರತಿಯೊಂದು ಸಮುದಾಯದವರಿಗೂ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಈ ಸಮುದಾಯವನ್ನು ಸಮಾಜದಲ್ಲಿ ಕ್ಷೌರಿಕ, ಅಜಾಮ ಇತ್ಯಾದಿಗಳಾಗಿ ಸಂಬೋಧಿಸುವ ಮೂಲಕ ಕೀಳಾಗಿ ಕಾಣಲಾಗುತ್ತಿದೆ. ಈ ಸಮುದಾಯವನ್ನು ಬೈಗುಳಗಳಿಗೆ ಹಾಗೂ ವ್ಯಂಗವಾಡಲು ಬಳಿಸುವುದು ಪ್ರಚಲಿತದಲ್ಲಿದೆ. ಈ ಕುರಿತು ರಾಜಕೀಯ ಗಣ್ಯರು ಕೆಲವು ಸಂದರ್ಭದಲ್ಲಿ ಬಳಿಸಿ ನಂತರದಲ್ಲಿ ತಪ್ಪಿನ ಅರಿವುಂಟಾಗಿದೆ ಎಂದು ಉದಾಹರಿಸಿದರು.


ಸವಿತ ಸಮಾಜದ ಮುಖ್ಯ ವಾಹಿನಿಗೆ ತರುವ ದೆಸೆಯಲ್ಲಿ ಮುಖ್ಯ ಮಂತ್ರಿ ಸವಿತ ಸಮುದಾಯದ ಅಭಿವೃದ್ದಿ ಮಂಡಳಿಯನ್ನು ರಚಿಸಿ ೧೮.೮೨ ಕೋಟಿ ರೂ ಅನುದಾನ ನೀಡಿದೆ ಅದರೆ ಇದು ಸಾಲದಾಗಿದೆ. ಕನಿಷ್ಟ ೫೦ ಕೋಟಿ ರೂಗಳಾದರೂ ಬಜೆಟ್‌ನಲ್ಲಿ ಮಂಜೂರು ಮಾಡ ಬೇಕೆಂದರು.


ಅಜಾಮ ಎಂಬುವುದು ಅರಾಭಿಕ್ ಭಾಷೆಂi ಕ್ಷೌರಿಕ ವೃತ್ತಿಯ ಹೆಸರಾಗಿದೆ. ಅದರೆ ಇದನ್ನು ಕೆಟ್ಟ ಭಾಷೆಗೆ ಬಳಕೆ ಮಾಡುವುದು ಪ್ರಚಲಿತದಲ್ಲಿರುವುದು ನೋವಿನ ಸಂಗತಿಯಾಗಿದೆ. ಈ ರೀತಿ ವೃತ್ತಿಯನ್ನು ಕೀಳಾಗಿ ಬಳಕೆ ಮಾಡುವ ವಿರುದ್ದ ಕಾನೂನು ಕ್ರಮ ಜಾರಿ ಮಾಡಲು ಮುಖ್ಯಮಂತ್ರಿಗಳ ಹಾಗೂ ಸಚಿವ ತಂಗಡಗಿ ಅವರ ಗಮನಕ್ಕೆ ತರಲಾಗಿದ್ದು ಶೀಘ್ರದಲ್ಲಿ ಕಾನೂನು ಕ್ರಮವನ್ನು ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು


ಸವಿತಾ ಸಮುದಾಯದ ಬಂಧುಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಶೈಕ್ಷಣಿಕವಾಗಿ, ಸಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ ಆಶಕ್ತ ಶೋಷಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೆಸೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿದೆ ಎಂದು ಹೇಳಿದರು.


ಸವಿತ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್. ಮಂಜುನಾಥ್ ಮಾತನಾಡಿ ಬುಧವಾರ ಸಂಜೆ ದೊಡ್ಡಸ್ಸಾಳದ ಎಂ.ರಾಮ ಮೂರ್ತಿ ಅವರ ಮನೆಯಲ್ಲಿ “ಹಳ್ಳಿ ಕ್ಷೌರಿಕೆ ಮನೆ ವಾಸ್ಯವ್ಯ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಗ್ರಾಮದಲ್ಲಿನ ಸಮುದಾಯವರನ್ನು ಸಂಘಟಿಸಿ ಕೊಂಡು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಹಾಗೂ ಸದ್ಬಳಿಸಿ ಕೊಳ್ಳಲು ಅರಿವು ಮೂಡಿಸಲಾಗುವುದು ಎಂದರು.


ಸವಿತ ಸಮಾಜದ ಮುಖಂಡ ದೀಪು ಹಾಗೂ ಸವಿತ ಸಮಾಜ ಹಾಗೂ ಜಿಲ್ಲಾ ಕಾಂಗ್ರೇಸ್ ಮುಖಂಡ ಕೋಟೆ ರಾಜೇಶ್ ಮಾತನಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮುದಾಯದ ಮುಖಂಡ ಗುರು ಹಾಗೂ ಕೆಂಪರಾಜ್ ಉಪಸ್ಥಿತರಿದ್ದರು.