ಅಲೆಮಾರಿ, ಅರೆ-ಅಲೆಮಾರಿ ಜನರ ಹೊರಾಟಕ್ಕೆ ಜಯ : ಭಗವಂತ ಖೂಬಾ

ಬೀದರ:ಜ.೩೧:ದಶಕಗಳಿಂದ ಅಲೆಮಾರಿ -ಅರೆ ಅಲೆಮಾರಿ ಜನಾಂಗದವರು ಇಚ್ಛಿಸಿದಂತೆ ಔರಾದ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. ೨೦೫ರಲ್ಲಿ ೨ ಎಕ್ಕರೆ ಜಮೀನು ಜಿಲ್ಲಾಡಳಿತ ನೀಡಿ, ಬರುವ ೬ ತಿಂಗಳೊಳಗೆ ನಾಗರೀಕ ಸೌಲಭ್ಯಗಳು, ಮೂಲಭೂತ ಸೌಕರ್ಯಗಳು ಮಾಡಿಕೊಡುವುದಾಗಿ ಜಿಲ್ಲಾಧಿಕಾರಿಗಳು ವಿಶ್ವಾಸ ನೀಡಿದ್ದಾರೆ, ಜಿಲ್ಲಾಡಳಿತದ ಕ್ರಮ ಶ್ಲಾಘನೀಯ, ಜಿಲ್ಲಾಧಿಕಾರಿ ಶ್ರೀಮತಿ. ಶಿಲ್ಪಾ ಶರ್ಮಾ ಅವರು ನನ್ನ ಮಾತಿಗೆ ಗೌರವ ಕೊಟ್ಟು, ಧರಣಿ ನಿರತ ಸ್ಥಳಕ್ಕೆ ತೆರಳಿ, ಅವರಿಗೆ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ, ದಶಕಗಳಿಂದ ದಿಕ್ಕಿಲ್ಲದಂತೆ ಬದುಕುತ್ತಿದ್ದ ಅಲೆಮಾರಿ, ಅರೆ ಅಲೆಮಾರಿ ಜನರಿಗೆ ನ್ಯಾಯ ಸಿಕ್ಕಿದೆ, ಇದರಿಂದಾಗಿ ಸುಮಾರು ೧೪೦ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದು ಎಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ.

ಈ ಜನರು ಔರಾದನಲ್ಲಿ ದಶಕಗಳಿಂದ ವಾಸಿಸುತ್ತಿದ್ದು, ಇವರ ಬಳಿ ಪಡಿತರ ಚಿಟಿ, ವೊಟರ್ ಐಡಿ, ಆಧಾರ ಕಾರ್ಡ ಎಲ್ಲವೂ ಔರಾದ ಪಟ್ಟಣದೆ ಆಗಿದೆ, ಇವರಿಗೆ ೨೦೨೦ರಲ್ಲಿ ನಮ್ಮ ಸರ್ಕಾರವಿದ್ದಾಗ ನಾನು ಔರಾದ ಪಟ್ಟಣದ ಸರ್ವೆ ನಂ. ೧೮೩ರಲ್ಲಿ ೨ ಎಕ್ಕರೆ ಜಮೀನು ಕೊಡಿಸಿದ್ದೆ, ಆದರೆ ಇವರನ್ನು ಔರಾದ ನಿಂದ ೧೦ ಕಿ.ಮೀ ದೂರ ಬೇರೆ ಸ್ಥಳ ನೀಡಲು ಜಿಲ್ಲಾಡಳಿತ ಮುಂದಾಗಿತ್ತು, ಆದರೆ ಈ ಜನರ ಹೊಟ್ಟೆ ಪಾಡು, ಔರಾದ ಪಟ್ಟಣದ ಮೇಲೆ ಅವಲಂಬಿತವಾಗಿತ್ತು, ಆದ್ದರಿಂದ ಈ ಜನರು ನಮಗೆ ಔರಾದನಲ್ಲಿಯೆ ನಿವೇಶನ ನೀಡುವಂತೆ ಧರಣಿಗೆ ಕುಳಿತಿದ್ದರು, ಈ ನ್ಯಾಯಯುತ ವಿಷಯದ ಬಗ್ಗೆ ಹೊರಾಟದ ಮುಖಂಡರು ನನ್ನ ಗಮನಕ್ಕೆ ತಂದಾಗ ನಾನು ಅವರ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಅಲ್ಲಿಂದಲೆ ತಹಸಿಲ್ದಾರ ಮತ್ತು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿ, ಇವರ ಹಕ್ಕು ಇವರಿಗೆ ನೀಡಬೇಕು, ತಾವು ಬಂದು ಇವರಿಗೆ ನ್ಯಾಯ ಕೋಡಬೇಕೆಂದು ಮನವಿ ಮಾಡಿಕೊಂಡಿದ್ದೆ, ಜಿಲ್ಲಾಧಿಕಾರಿಗಳು ಸಹ ನಮ್ಮ ಮಾತಿಗೆ ಗೌರವಿಸಿ ಈ ಜನರ ಕಷ್ಟಕ್ಕೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ, ಜಿಲ್ಲಾಧಿಕಾರಿಗಳು ಮುಂದೆಯೂ ಹೀಗೆ ಜನರ ಕಷ್ಟಗಳಿಗೆ ಸ್ಪಂದಿಸಿ, ಜನರ ಮನಸ್ಸಲ್ಲಿ ಒಳ್ಳೆಯ ಹೆಸರು ಸಂಪಾದಿಸಲಿ ಎಂದು ಖುಬಾ ಹಾರೈಸಿದ್ದಾರೆ.

ಈ ಹೊರಾಟದಲ್ಲಿ ಇದ್ದ ಜನರು ಮುಗ್ದರು, ಅವರಿಗೆ ಕಾನುನು ಗೊತ್ತಿಲ್ಲಾ, ಇಂತಹ ಮುಗ್ದ ಜನರಿಗಾಗಿ ಹೋರಾಟ ಮಾಡಿರುವುದು ನನಗೆ ಸಂತಸ ತಂದಿದೆ ಮತ್ತು ಇವರ ಹಕ್ಕಿಗಾಗಿ ಪ್ರತಿಭಟನೆಯ ಮುಂದಾಳತ್ವ ವಹಿಸಿದ ಶ್ರೀ ರಾಹುಲ್ ಖಂದಾರೆ, ಸುಭಾಷ ಲಾಧಾ, ಸಂತೋಷ ಶಿಂಧೆ, ಸಿದ್ದಾರ್ಥ ಭೊಸ್ಲೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ದಿನೇಶ ಶಿಂಧೆ ಎಲ್ಲರಿಗೂ ಭಗವಂತ ಖೂಬಾ ಅಭಿನಂದನೆಗಳು ತಿಳಿಸಿದ್ದಾರೆ.