Home ಜಿಲ್ಲೆ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹೋಸ್ಟ್ ಇನ್‌ಸ್ಟಿಟ್ಯೂಷನ್ ಆಗಿ ಆಯ್ಕೆ

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹೋಸ್ಟ್ ಇನ್‌ಸ್ಟಿಟ್ಯೂಷನ್ ಆಗಿ ಆಯ್ಕೆ

ಸುರಪುರ:ಮಾ.೧೫: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿನ ನಗರದ ವೀರಪ್ಪ ನಿಷ್ಠಿ ಎಂಜಿನಿಯರಿAಗ್ ಕಾಲೇಜು ಕರ್ನಾಟಕ ಸರ್ಕಾರದ ಓಂIಓ ೨.೦ ನ್ಯೂ ಏಜ್ ಇನ್ನೋವೇಶನ್ ನೆಟ್ವರ್ಕ್ ಪ್ರೋಗ್ರಾಂ (ಓಊI) ಆಗಿ ಆಯ್ಕೆಯಾಗಿದೆ.ಇದರ ಕುರಿತು ಶ್ರೀ ಶರಣ ಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಶರಣಬಸಪ್ಪ ವಿ.ನಿಷ್ಠಿ ವಕೀಲರು ಮಾತನಾಡಿ,
ಓಂIಓ ೨.೦ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವ ತಂತ್ರಜ್ಞಾನ ಇಲಾಖೆ (ಆeಠಿಚಿಡಿಣmeಟಿಣ oಜಿ ಇಟeಛಿಣಡಿoಟಿiಛಿs, Iಖಿ, ಃಖಿ) ವತಿಯಿಂದ ಜಾರಿಗೆ ತರಲಾಗುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದನ್ನು ಕರ್ನಾಟಕ ಇನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಏIಖಿS) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯದ ಎಂಜಿನಿಯರಿAಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಲ್ಲಿ ನವೀನತೆ, ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಆಗಿದೆ. ಈ ಯೋಜನೆಯಡಿ ಆಯ್ಕೆಯಾದ ಸಂಸ್ಥೆಗಳಲ್ಲಿ ಇನೋವೇಶನ್ ಮತ್ತು ಇಂಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಹೊಸ ಆಲೋಚನೆಗಳನ್ನು ತಾಂತ್ರಿಕ ಮಾದರಿಗಳಾಗಿ ರೂಪಿಸುವುದಕ್ಕೆ ಹಾಗೂ ಸ್ಟಾರ್ಟ್ಅಪ್‌ಗಳಾಗಿ ಅಭಿವೃದ್ಧಿಪಡಿಸುವುದಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡಲಾಗುತ್ತದೆ. ಪ್ರತಿ ಓಂIಓ ಕೇಂದ್ರವು ವರ್ಷಕ್ಕೆ ೧೦ ವಿದ್ಯಾರ್ಥಿ ಯೋಜನೆಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದ್ದು.
ಇದರ ಜೊತೆಗೆ ಇನೋವೇಶನ್ ಮತ್ತು ಇಂಕ್ಯುಬೇಷನ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಈ ಯೋಜನೆಯು ವಿದ್ಯಾರ್ಥಿಗಳನ್ನು ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯಲು ಪ್ರೋತ್ಸಾಹಿಸುತ್ತದೆ. ವಿಶೇಷವಾಗಿ ಪುನರುತ್ಪಾದಕ ಶಕ್ತಿ, ಹವಾಮಾನ ಬದಲಾವಣೆ, ವಲಯ ಆರ್ಥಿಕತೆ , ಪರಿಸರ ಸ್ಥಿರತೆ ಮುಂತಾದ ಸಸ್ಟೇನಬಲ್ ಡೆವಲಪ್ಮೆಂಟ್ ಗೋಲ್ಸ್ (Sಆಉs) ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಮತ್ತು ನವೀನತಾ ಯೋಜನೆಗಳನ್ನು ಕೈಗೊಳ್ಳಲು ಉತ್ತೇಜನ ನೀಡಲಾಗುತ್ತದೆ. ಈ ಯೋಜನೆಯಡಿ ಪ್ರತಿಯೊಂದು ಓಂIಓ ಕೇಂದ್ರವೂ Pಡಿoರಿeಛಿಣ ಒoಟಿiಣoಡಿiಟಿg Uಟಿiಣ (PಒU) ಅಥವಾ ಂಟಿಛಿhoಡಿ Iಟಿsಣiಣuಣe ಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಮೆಂಟರಿAಗ್, ಕೈಗಾರಿಕಾ ಸಂಪರ್ಕ, ಸ್ಟಾರ್ಟ್ಅಪ್ ಮಾರ್ಗದರ್ಶನ ಮತ್ತು ಉದ್ಯಮಶೀಲ ತರಬೇತಿ ದೊರೆಯುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆಗಳನ್ನು ಪ್ರೋಟೋಟೈಪ್‌ಗಳಿಂದ ಯಶಸ್ವಿ ಸ್ಟಾರ್ಟ್ಅಪ್‌ಗಳವರೆಗೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಕಾಲೇಜು ಓಂIಓ ೨.೦ ಹೋಸ್ಟ್ ಇನ್‌ಸ್ಟಿಟ್ಯೂಷನ್ ಆಗಿ ಆಯ್ಕೆಯಾದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಕಾಲೇಜಿನ ಅಭಿವೃದ್ಧಿಗೆ ಇದು ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ ಎಂದು ತಿಳಿಸಿದ್ದಾರೆ.

ಮಹಾವಿದ್ಯಾಲಯದ ಈ ಸಾಧನೆಗೆ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಡಾ. ಶಾಂತಲಾ ಎಸ್. ನಿಷ್ಠಿ ಅವರು, ಬಸವರಾಜ ದೇಶಮುಖ ಅವರು, ಕಾರ್ಯದರ್ಶಿಗಳು ಹಾಗೂ ದೊಡ್ಡಪ್ಪ ಎಸ್. ನಿಷ್ಠಿ, ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್ ನಿಷ್ಠಿ , ಪ್ರಾಂಶುಪಾಲ ಡಾ. ಶರಣಬಸಪ್ಪ ಸಾಲಿ, ಸಂಶೋಧನೆ ಹಾಗೂ ಅಭಿವೃದ್ಧಿ ಡೀನ್ ಪ್ರೊ. ಸಾಹೇಬ್‌ಗೌಡ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.