
ಕೋಲಾರ,ಏ,೯- ಇತ್ತೀಚೆಗೆ ತಾವು ಸಾರ್ವಜನಿಕ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಹೊಗಳಿ, ಅವರ ಪರವಾಗಿ ನಿಷ್ಠೆ ತೋರಿಸಿರುವುದು ಭಾರತೀಯ ಜನತಾ ಪಾರ್ಟಿಯ ತತ್ವ, ಸಿದ್ಧಾಂತ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ವಿರೋಧವಾಗಿರುವುದಾಗಿ ಸ್ಪಷ್ಟಪಡಿಸಲಾಗುತ್ತದೆ.
ಭಾರತೀಯ ಜನತಾ ಪಾರ್ಟಿ ಎಂಬುದು ಸಾವಿರಾರು ಕಾರ್ಯಕರ್ತರ ತ್ಯಾಗ, ಬಲಿದಾನ ಮತ್ತು ನಿರಂತರ ಸಂಘಟನೆಗಳಿಂದ ನಿರ್ಮಿತವಾದ ಒಂದು ಸಿದ್ಧಾಂತಾಧಾರಿತ ಪಕ್ಷ. ಇಂತಹ ಪಕ್ಷದಲ್ಲಿ ಇದ್ದುಕೊಂಡು ವಿರೋಧ ಪಕ್ಷದ ನಾಯಕರನ್ನು ಹೊಗಳುವುದು ನಿಮ್ಮ ರಾಜಕೀಯ ದ್ವಂದ್ವವನ್ನು ತೋರಿಸುತ್ತದೆ. ಅಲ್ಲದೆ ಸಿದ್ದರಾಮಯ್ಯನವರು ಹಿಂದು ವಿರೋಧಿ ಎಸ್ ಸಿ ಎಸ್ ಟಿ ದಲಿತರ ಹಣ ದುರುಪಯೋಗ ಪಡಿಸಿಕೊಂಡ ವ್ಯಕ್ತಿ. ಮೂಡ ಕೆಸಿನಲ್ಲಿ ೧೮ ಸೈಟ್ಗಳನ್ನು ವಾಪಸ್ ಪಡಿಸಿದ ಭ್ರಷ್ಟ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ನೋವು ಉಂಟು ಮಾಡುವ ವ್ಯಕ್ತಿತ್ವ ಹೊಂದಿರುವ ಇವರು ನಿಮಗೆ ಆದರ್ಶ ವ್ಯಕ್ತಿ ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಸಮಯದಲ್ಲಿ ಎಲ್ಲಾ ರೀತಿಯ ಸವಲತ್ತು ಪಡೆದ ನೀವುಗಳು ಈ ದಿನ ನಮ್ಮ ವಿರೋಧ ಪಕ್ಷದ ನಾಯಕರನ್ನು ಹೊಗಳುವುದು ಯಾವ ನ್ಯಾಯ ಇದಲ್ಲದೆ ಉಚಿತ ಭಾಗ್ಯಗಳನ್ನು ಕರ್ನಾಟಕವನ್ನು ಅಭಿವೃದ್ಧಿಹೀನ ರಾಜ್ಯವನ್ನಾಗಿ ಮಾರ್ಪಡಿಸಿರುವ ಭ್ರಷ್ಟ ಸಿದ್ದರಾಮಯ್ಯ ನಿಮಗೆ ನಾಯಕ ಎಂಬ ವಿಷಯವನ್ನು ಸಭೆಯಲ್ಲಿ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ
ತಾವು ನಿಜವಾಗಿಯೂ ಶ್ರೀ ಸಿದ್ದರಾಮಯ್ಯನವರ ಮೇಲಿನ ನಿಷ್ಠೆಯನ್ನು ಮುಂದುವರಿಸಲು ಬಯಸಿದರೆ, ದಯವಿಟ್ಟು ತಕ್ಷಣವೇ ಭಾರತೀಯ ಜನತಾ ಪಾರ್ಟಿಯನ್ನು ತೊರೆದು, ನಂತರ ನಿಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಒಳಿತು.
ಜಿಲ್ಲಾಧ್ಯಕ್ಷನಾಗಿ, ಪಕ್ಷದ ಗೌರವಕ್ಕೆ ಧಕ್ಕೆ ಉಂಟುಮಾಡುವಂತಹ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ತಾವು ತಕ್ಷಣವೇ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ, ಇಂತಹ ಹೇಳಿಕೆಗಳಿಂದ ಹಿಂದೆ ಸರಿಯಬೇಕು. ಇಲ್ಲವಾದರೆ, ಪಕ್ಷದ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಎಚ್ಚರಿಕೆ ನೀಡಲಾಗುತ್ತದೆ.
ಪಕ್ಷದ ಶಿಸ್ತನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮನಗಾಣಿಸಿಕೊಳ್ಳಬೇಕುಎಂದರು.























