ವರದಾ ಡಾನ್ಸಿಂಗ್ ಕಂಪನಿ ವಾರ್ಷಿಕೋತ್ಸವ

ಕೆ.ಆರ್.ಪುರ, ಡಿ.೮- ಕೆಆರ್ ಪುರದ ವಿಜಿನಾಪುರದ ಕುವೆಂಪು ಆಟದ ಮೈದಾನದಲ್ಲಿ ವರದಾ ಡ್ಯಾನ್ಸಿಂಗ್ ಕಂಪನಿಯ ೧೫ನೇ ವರ್ಷದ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಸೌತ್ ಇಂಡಿಯನ್ ಡ್ಯಾನ್ಸರ್ಸ್ ಕಾರ್ಯಕ್ರಮವನ್ನು ಶಾಸಕ ಬಿ.ಎ. ಬಸವರಾಜ ಅವರು ಉದ್ಘಾಟಿಸಿದರು.


ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ಮಕ್ಕಳಲ್ಲಿರುವ ನೃತ್ಯದ ಪ್ರತಿಭೆಯನ್ನು ಹೊರತರಲು ಈ ಕಂಪನಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ನುಡಿದರು.


ಮಕ್ಕಳ ಪ್ರತಿಭೆಗೆ ವೇದಿಕೆಗಳ ಅವಶ್ಯಕವಾಗಿದ್ದು,ಈ ನಿಟ್ಟಿನಲ್ಲಿ ಪೋಷಕರು ಹಾಗೂ ತರಬೇತುದಾರರು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರದರ್ಶನಕ್ಕೆ ಬೆಂಬಲ ದೊರೆತು ಮುಂದುವರೆಯಲಿ ಎಂದು ಆಶಯ ವ್ಯಕ್ತಪಡಿಸಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳಿಂದಲೂ ಮಕ್ಕಳು ಭಾಗವಹಿಸಿದ್ದು , ಎರಡು ದಿನಗಳ ಕಾಲ ಕಾರ್ಯಕ್ರಮ ವಿಜೃಂಭಣೆಯಾಗಿ ಇದಾಗಿದೆ. ಸ್ಥಳೀಯ ಮುಖಂಡರಾದ ಪ್ರದೀಪ್ ಗೌಡ, ರಮೇಶ್ ಗೌಡ ಪುಷ್ಪರಾಜು ಅವರು ಕಾರ್ಯಕ್ರಮಕ್ಕೆ ಬೆನ್ನೆಲುಬುವಾಗಿ ನಿಂತರೆ,ನರಸಿಂಹ ಹಾಗೂ ಹಿರಣ್ಯ ಕಶುಪುವಿನ ಸಮರದ ಕಾಳಗದ ನೃತ್ಯ ಸೇರಿದಂತೆ ಹಲವು ನೃತ್ಯಗಳು ಗಮನ ಸೆಳೆಯಿತು.ಪುಟಾಣಿಗಳ ನೃತ್ಯ ಪ್ರದರ್ಶನಕ್ಕೆ ಜಮಾವಣಿಯಾಗಿದ ಜನರ ಮನಸೋತರು.


ಈ ಸಂದರ್ಭದಲ್ಲಿ ಪ್ರೋತ್ಸಾಹಕರಾದ ಪ್ರದೀಪ್ ಗೌಡ , ರಮೇಶ್ ಗೌಡ ,ಮಂಡಳ ಅಧ್ಯಕ್ಷ ಮುನೇಗೌಡ,ಮಾಜಿ ಅಧ್ಯಕ್ಷ ಚಿದಾನಂದ, ಮಾಜಿ ಪಾಲಿಕೆ ಸದಸ್ಯೆ ಗೀತಾವಿವೇಕಾನಂದ, ಮುಖಂಡರಾದ ಬಾಕ್ಸರ್ ನಾಗರಾಜ್,ಕೆ.ಆರ್.ಪುರದ ರಮೇಶ್ ಗೌಡ, ಜೇವಿಯರ್,ಮುನಿರಾಜು,ಸಜೀವನ್ ಇದ್ದರು.