
ಕಲಬುರಗಿ : ಮಾ.16: ರೋಗಗಳ ವಿರುದ್ಧ ಹೋರಾಡಲು ಮತ್ತು ಕಾಯಿಲೆಗಳ ಮುಂಜಾಗ್ರತೆಗಾಗಿ ಲಸಿಕೆಗಳು ಅಗತ್ಯವಾಗಿವೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಸೋಮವಾರ ಜರುಗಿದ “ರಾಷ್ಟ್ರೀಯ ಲಸಿಕಾ ದಿನಾಚರಣೆ”ಯಲ್ಲಿ ಬಾಲಕಿಗೆ ಲಸಿಕೆಯನ್ನು ನೀಡುವ ಮೂಲಕ ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು. ಭಾರತ ಪೆÇೀಲಿಯೋ ಮುಕ್ತ ಘೋಷಣೆಯ ಪ್ರಯುಕ್ತ ಈ ದಿನವನ್ನು ಆಚರಿಸಲಾಗುತ್ತದೆ. ಇದು ಲಸಿಕೆಯ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ ಮತ್ತು ಪ್ರತಿ ಮಗುವಿಗೆ ವ್ಯಾಕ್ಸಿನೇಷನ್ ಖಚಿತಪಡಿಸಿಕೊಳ್ಳಲು ವೈದ್ಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ಗುರುತಿಸಿ, ಪ್ರಶಂಸಿಸುತ್ತದೆ ಎಂದರು. ಸಮಾಜ ಸೇವಕ ಎಚ್.ಬಿ.ಪಾಟೀಲ ಮಾತನಾಡಿ, ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶ ಲಸಿಕೆಗಳು ಅದೇ ರೋಗಕಾರಕದಿಂದ ಭವಿಷ್ಯದಲ್ಲಿ ಉಂಟಾಗಬಹುದಾದಂತಹ ರೋಗಗಳ ವಿರುದ್ಧ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ದಡಾರ, ಚಿಕನ್ ಪೆÇೀಕ್ಸ್, ಟೆಟನಸ್, ರುಬೆಲ್ಲಾ, ಪೆÇೀಲಿಯೊ ಮತ್ತು ಇತ್ತೀಚೆಗೆ ಕೋವಿಡ್ -19 ನಂತಹ ಹಲವಾರು ಮಾರಣಾಂತಿಕ ಕಾಯಿಲೆಗಳ ಹರಡುವಿಕೆಯನ್ನು ಲಸಿಕೆ ಕಡಿಮೆ ಮಾಡುತ್ತವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾ ಜಗನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪುರೆ, ನಾಗೇಶ್ವರಿ ಮುಗಳಿವಾಡಿ, ರೇಶ್ಮಾ ನಕ್ಕುಂದಿ, ಲಕ್ಷ್ಮೀ ಮೈಲಾರಿ, ಶ್ರೀದೇವಿ, ಚಂದ್ರಕಲಾ ಮಠಪತಿ, ಅರ್ಚನಾ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.



























