
ವಾಷಿಂಗ್ಟನ್,ಆ.೨೯- ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಲಾದ ಹೆಚ್ಚಿನ ಸರಕುಗಳ ಮೇಲೆ ಶೇಕಡಾ ೫೦ರಷ್ಟು ಸುಂಕ ಜಾರಿಯಾಗಿದ್ದು ಇದರ ಪರಿಣಾಮ ಲಕ್ಷಾಂತರ ಕೋಟಿ ಭಾರತಕ್ಕೆ ನಷ್ಟವಾಗುತ್ತಿದೆ.
ಅಮೆರಿಕಾದ ಯಾವುದೇ ಒತ್ತಡ ಮಣಿಯುವುದಿಲ್ಲ, ದೇಶದ ರೈತರು ಮತ್ತು ಸಣ್ಣ ಉದ್ಯಮಿಗಳು ಹಾಗೂ ಉದ್ಯಮಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ, ಈ ಹಿನ್ನೆಲೆಯಲ್ಲಿ ಅಮೆರಿಕಾದೊಂದಿಗೆ ಸುಂಕ ಒಪ್ಪಂದ ಕುರಿತು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.
ರಷ್ಯಾದಿಂದ ತೈಲ ಖರೀದಿ ಮಾಡುವ ಭಾರತದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿ ಶೇಕಡಾ ೨೫ರಷ್ಟು ಸುಂಕ ವಿಧಿಸಲಾಗಿದೆ. ಇದರ ಜೊತೆಗೆ ಶೇಕಡಾ ೨೫ ರಷ್ಟು ಸುಂಕ ವಿಧಿಸಲಾಗಿದೆ. ಹೀಗಾಗಿ ಭಾರತದ ಮೇಲೆ ಶೇಕಡಾ ೫೦ ರಷ್ಟು ಸುಂಕ ವಿಧಿಸಲಾಗಿದೆ.
ಭಾರತದ ವಿವಿಧ ಉತ್ಪನ್ನಗಳು ಅಮೆರಿಕಾದಲ್ಲಿ ಪ್ರವೇಶ ಪಡೆದರೆ ಶೇಕಡಾ ೫೦ ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಿಂದ ಭಾರತದ ವಿವಿಧ ಉತ್ಪನ್ನಗಳ ಮೇಲೆ ಹೊರ ಬಿದ್ದಿದೆ. ಆಗಸ್ಟ್ ೨೭ರಿಂದ ಸುಂಕ ಜಾರಿಯಾಗಿದೆ.
ಹೆಚ್ಚುವರಿ ಸುಂಕ ವಿಧಿಸಿರುವ ಸಂಬಂಧ ಅಮೆರಿಕಾದೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಸ್ಪಷ್ಠಪಡಿಸಿದ್ದರು ಇನ್ನೂ ಯಾವುದೇ ಒಪ್ಪಂದಕ್ಕೆ ಬರಲು ತಿಣುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಷಿಂಗ್ಟನ್, ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತೊಂದು ಪವರ್ ಹೌಸ್ ಲಾಬಿ ಸಂಸ್ಥೆಯನ್ನು ನೇಮಿಸಿಕೊಂಡಿರುವುದು ನವದೆಹಲಿ ಹದಗೆಟ್ಟ ಭಾರತ-ಅಮೆರಿಕಾ ಸಂಬಂಧಗಳನ್ನು ಸರಿಪಡಿಸಲು ಪ್ರತಿಕ್ರಮಗಳನ್ನು ಸಕ್ರಿಯಗೊಳಿಸಿದೆ ಎಂದು ಹೇಳಲಾಗಿದೆ.
ಅಮೆರಿಕದ ಲಾಬಿಗೆ ಸಂಬಂಧಿಸಿದಂತೆ ತಿಂಗಳಿಗೆ ರೂ. ೨.೪ ಕೋಟಿ ರೂಪಾಯಿಯನ್ನು ಭಾರತ ಪಾವತಿ ಮಾಡುತ್ತಿದೆ, ಇದರಿಂದ ಭಾರತಕ್ಕೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಎರಡನೇ ಲಾಬಿ ಸಂಸ್ಥೆ ನೇಮಿಸಿಕೊಂಡ ಕೆಲವೇ ದಿನಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇಕಡಾ ೫೦ ರಷ್ಟು ಸುಂಕ ಜಾರಿಗೆ ಬಂದಿವೆ.
ಪಾಕಿಸ್ತಾನದ ಲಾಬಿ ಕ್ರಮಗಳು ಫಲ ನೀಡಿವೆ ಎಂದು ತೋರುತ್ತದೆಯಾದರೂ ಭಾರತ ಇನ್ನೂ ಅಮೆರಿಕದೊಂದಿಗಿನ ಸಂಬಂಧಗಳಲ್ಲಿ ಪ್ರಗತಿ ಸಾಧಿಸಲು ಹೆಣಗಾಡುತ್ತಿದೆ ಎಂದು ಹೇಳಲಾಗಿದೆ.