
ತಾಳಿಕೋಟೆ:ಫೆ.8: ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಶನಿವಾರರಂದು ನಡೆದ ಶ್ರೀ ಮದ್ ಉಜ್ಜಯಿನಿ ಸಧ್ದರ್ಮ ಮಹಾ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಫಲ್ಲಕ್ಕಿ ಮಹೋತ್ಸವವು ಶ್ರೀ ರಾಮಲಿಂಗಯ್ಯ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಭಕ್ತಿಭಾವದೊಂದಿಗೆ ಜರುಗಿತು.
ಚಬನೂರ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡ ಶ್ರೀ ಮದ್ ಉಜ್ಜಯಿನಿ ಸಧ್ದರ್ಮ ಮಹಾ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಫಲ್ಲಕ್ಕಿ ಮಹೋತ್ಸವವು ಗ್ರಾಮದ ಪ್ರಮುಖ ಬೀದಗಳಲ್ಲಿ ಸಂಚರಿಸಿ ನೂತನವಾಗಿ ನಿರ್ಮಿಸಲಾದ ಶ್ರೀಮಠದ ಆವರಣಕ್ಕೆ ತಲುಪಿತು.
ಅಡ್ಡ ಫಲ್ಲಕ್ಕಿ ಮಹೋತ್ಸವದ ಅಂಗವಾಗಿ ಚಬನೂರ ಗ್ರಾಮದ ಭಕ್ತಾಧಿಗಳು ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿಯನ್ನು ಬಿಡಿಸಿ ಜಗದ್ಗುರುಗಳ ಅಡ್ಡಫಲ್ಲಕ್ಕಿ ಮಹೋತ್ಸವವನ್ನು ಭಕ್ತಿಭಾವದೊಂದಿಗೆ ಸ್ವಾಗತಿಸಿದರು. ಮೇರವಣಿಗೆಯಲ್ಲಿ ಕರಡಿ ಮಜಲು, ಡೋಳ್ಳು ವಿವಿಧ ವಾಧ್ಯವೈಭವಗಳು ಅಡ್ಡಫಲ್ಲಕ್ಕಿ ಮಹೋತ್ಸವಕ್ಕೆ ಮೇರಗನ್ನು ಹೆಚ್ಚಿಸಿದವಲ್ಲದೇ ಭಕ್ತಾಧಿಗಳಿಂದ ಓಂ ನಮಃ ಶಿವಾಯ ಮಂತ್ರಪಠಣವು ಭಕ್ತಿಯ ಪರಕಾಷ್ಠೆಯನ್ನು ಇನ್ನಷ್ಠು ಹೆಚ್ಚಿಸಿತು.
ನೂತನವಾಗಿ ನಿರ್ಮಿಸಲಾದ ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರರ ಮಠವನ್ನು ಶ್ರೀ ಮದ್ ಉಜ್ಜಯಿನಿ ಸಧ್ದರ್ಮ ಮಹಾ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಉದ್ಘಾಟಿಸಿದರು. ನಂತರ ಸಧ್ದರ್ಮ ಸಮಾರಂಭವು ಪ್ರಾರಂಭಗೊಂಡಿತು.
ನೂತನ ಮಠದ ಉದ್ಘಾಟನೆ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಸ್ವಸ್ತ ಪುಣ್ಯಾವಾಚನಾ, ನಂದಿ ಸಮಾರಾಧನಾ, ಪಂಚ ಕಲಷ, ಹಾಗೂ ಉಮಾ ಮಹೇಶ್ವರ ಮಹಾ ಗಣಪತಿ, ಹಾಗೂ ರುದ್ರ ನವಗ್ರಹ ಮೃತ್ಯುಂಜಯ, ಜಯದಿ ಹೋಮ, ತಾರಾ ಪ್ರತಿಂಗಿರಾ ಹೋಮ, ಹವನ ಕಾರ್ಯಕ್ರಮಗಳನ್ನು ಪುರೋಹಿತರಾದ ವಿರಶೈವ ಆಗಮ ಪ್ರವೀಣ ಸಂತೋಷ ಶಾಸ್ತ್ರೀ ಸಜ್ಜಲಗುಡ್ಡ, ಹಾಗೂ ಡಾ.ವಿಧ್ವಾನ್ ವೀರಶೈವ ಆಗಮ ಸಂಸ್ಕøತ ಪಂಡಿತರಾದ ಚಂದ್ರಶೇಖರ ಶಾಸ್ತ್ರೀಗಳು ಸಿಂಧನೂರ ಅವರ ಬಳಗದಿಂದವರಿಂದ ನೇರವೇರಿಸಲಾಯಿತು.
ನೂತನವಾಗಿ ಪ್ರತಿಷ್ಠಾಪಿಸಲಾದ ಶ್ರೀ ಕಾಶಿಲಿಂಗಯ್ಯಶ್ರೀಗಳ ಮತ್ತು ನಂದಿ ಮೂರ್ತಿಯ ಪ್ರತಿಷ್ಠಾಪನೆಯು ಮಹಾ ಪುರ್ಣಾಹುತಿಯೊಂದಿಗೆ ಲೋಕಾರ್ಪಣೆ ಗೊಳಿಸಲಾಯಿತು.
ಈ ಸಮಯದಲ್ಲಿ ನೂತನಮಠದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಮಾಗಣಗೇರಿಯ ಶ್ರೀ ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ದೇವದುರ್ಗ ಶ್ರೀ ಕಪಿಲಸಿದ್ದರಾಮ ಶಿವಾಚಾರ್ಯರು, ಕವಿತಾಳದ ಶ್ರೀ ಸಿದ್ದಲಿಂಗ ಸ್ವಾಮಿಗಳು, ಕಲಕೇರಿ ಹಿರೇಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ದೇವರ ಹಿಪ್ಪರಗಿ ಪರದೇಶಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಕೊರವಾರದ ಶ್ರೀ ಕಾಶಿಲಿಂಗಶ್ರೀಗಳು, ಕಡಕೋಳ ಶ್ರೀ ಡಾ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ನಾವದಗಿ ಹಿರೇಮಠದ ರಾಜಗುರು ಶ್ರೀ ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ, ಬಸನಗೌಡ ಪಾಟೀಲ(ಚಬನೂರ), ಸೋಮನಗೌಡ ಪಾಟೀಲ, ಮುತ್ತುಗೌಡ ಯಾಳವಾರ, ಮಂಜುನಾಥ ಕವಡಿಮಟ್ಟಿ, ಮೊದಲಾದವರು ಪಾಲ್ಗೊಂಡಿದ್ದರು.




























