Home ಜಿಲ್ಲೆ ಕಲಬುರಗಿ ಸನ್ನಡತೆ ಆಧಾರದ ಮೇಲೆ ಇಬ್ಬರು ಕೈದಿಗಳ ಬಿಡುಗಡೆ

ಸನ್ನಡತೆ ಆಧಾರದ ಮೇಲೆ ಇಬ್ಬರು ಕೈದಿಗಳ ಬಿಡುಗಡೆ

ಕಲಬುರಗಿ,ಮಾ.14-ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿಗಳಲ್ಲಿ ಇಬ್ಬರನ್ನು ಶುಕ್ರವಾರ ಇಬ್ಬರನ್ನು ಸನ್ನಡತೆ ಆಧಾರ ಮೇಲೆ ಬಿಡುಗಡೆ ಮಾಡಲಾಯಿತು.
ಸುಭಾಷ ಅಲಿಯಾಸ್ ಸುಬ್ಬಣ್ಣ ತಂದೆ ಶಿವರಾಯ ನಾಟೀಕರ್ ಮತ್ತು ಜಯಮ್ಮ ಅಲಿಯಾಸ್ ಪದ್ಮಾ ಗಂಡ ಈರೇಶ ಅವರನ್ನು ಸನ್ನಡತೆಯ ಆಧಾರದ ಮೇಲೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ ಸದರಿ ಬಂದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ಹಾಗೂ ಸಿಹಿಯನ್ನ ನೀಡಿ ಶುಭ ಹಾರೈಸುತ್ತಾ ಹೊರಗಡೆ ಹೋಗಿ ಉತ್ತಮ ಬದುಕನ್ನ ಕಟ್ಟಿಕೊಂಡು ಸಮಾಜಮುಖಿ
ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂಧರ್ಬದಲ್ಲಿ ಸಂಸ್ಥೆಯ ಅಧೀಕ್ಷಕರಾದ ರಾಕೇಶ ಕಾಂಬ್ಳೆ, ಸಹಾಯಕ ಅಧೀಕ್ಷಕರಾದ ಸುರೇಶ ಬಿ, ಚನ್ನಪ್ಪ ಯಟಗಾಲ್, ಜೈಲರ್‍ಗಳಾದ ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.