
ಕಲಬುರಗಿ,ಅ.21-ಆಳಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಮಹೇಶ್ ಮೇಘಣ್ಣನವರ್, ಆಳಂದ ಡಿವೈಎಸ್‍ಪಿ ತಮ್ಮಾರಾಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಐ ಶರಣಬಸಪ್ಪ ಕೋಡ್ಲಾ, ಸಿಬ್ಬಂದಿಗಳಾದ ಗಣಪತರಾವ ಘಂಟೆ, ಮಹಿಬೂಬ್ ಶೇಖ್, ಶೇಖರ್, ಜಾಕೀರ್, ಸಿದ್ದರಾಮ, ವೆಂಕಟೇಶ್, ಮೌಲಾಲಿ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ತುಳಜಾಪುರ ತಾಲ್ಲೂಕಿನ ಕುನಸಾವಳಗಿ ಗ್ರಾಮದ ಅರ್ಜುನ ತಂದೆ ವಿಶ್ವನಾಥ ಸಿಂದೆ (45) ಮತ್ತು ಹೆಬ್ಬಳಿ ಗ್ರಾಮದ ಜೀವನ್ ತಂದೆ ವಿಶ್ವನಾಥ ದೇಡೆ (25) ಎಂಬುವವರನ್ನು ಬಂಧಿಸಿ 53 ಸಾವಿರ ರೂಪಾಯಿ ಮೌಲ್ಯದ 503 ಗ್ರಾಂ.ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.