Home ಜಿಲ್ಲೆ ಕಲಬುರಗಿ ಬಸವ ಜಯಂತಿ ಪ್ರಯುಕ್ತ ಶಕಾಪುರ ಶ್ರೀಗಳಿಗೆ ಸನ್ಮಾನ

ಬಸವ ಜಯಂತಿ ಪ್ರಯುಕ್ತ ಶಕಾಪುರ ಶ್ರೀಗಳಿಗೆ ಸನ್ಮಾನ

ಜೇವರಗಿ,ಏ 21: ಬಸವೇಶ್ವರ ನಗರದ ಕದಳಿವನ ವೇದಿಕೆ ವತಿಯಿಂದ ಬಸವ ಜಯಂತಿ ಪ್ರಯುಕ್ತ ಶಕಾಪುರ ತಪೆÇೀವನದ ಡಾ. ಸಿದ್ದರಾಮ ಶಿವಾಚಾರ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನುಆಯೋಜಿಸಲಾಯಿತು.
ಕೃಷಿ ರತ್ನ ಡಾ. ಸಿದ್ದರಾಮ ಶಿವಾಚಾರ್ಯರು, ಸುಮಾರು 1200 ಭಕ್ತರನ್ನು ಒಳಗೊಂಡ ಒಂದು ವಾರದ ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕದಳಿವನ ವೇದಿಕೆಯ ಮೈದಾನದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಶಕಾಪುರ ಶ್ರೀಗಳು ಗುದ್ದಲಿ ಪೂಜೆ ನೆರವೇರಿಸಿದರು. ಸುರೇಶಕುಮಾರ ಹಿರೇಮಠ ನಿರೂಪಿಸಿದರು.ಸುರೇಶ ಪಾಟೀಲ್ ನೇದಲಗಿ ವಂದನಾರ್ಪಣೆ ಸಲ್ಲಿಸಿದರು.ಡಾ. ಹಣಮಂತ್ರಾಯ ರಾಂಪುರೆ,ಕಸಾಪ ಅಧ್ಯಕ್ಷ ಎಸ್.ಕೆ. ಬಿರಾದಾರ, ಚನ್ನಮಲ್ಲಯ್ಯ ಹಿರೇಮಠ, ಶ್ರೀಹರಿ ಕರಕಿಹಳ್ಳಿ, ಸಿದ್ದು ಕೆರೂರ್, ರಾಜಶೇಖರಯ್ಯ ಹಿರೇಮಠ, ಭಗವಂತರಾಯ ನಾರಾಯಣಪುರ ಸೇರಿದಂತೆ ಕದಳಿವನ ವೇದಿಕೆಯ ಅಧ್ಯಕ್ಷರು, ಸದಸ್ಯರು ಹಾಗೂ ಅನೇಕ ಬಸವಾಭಿಮಾನಿಗಳು ಉಪಸ್ಥಿತರಿದ್ದರು.