
ಕಲಬುರಗಿ :ಅ.21: ಅಪರೂಪದ ಶಿಲ್ಪ ಕಲಾವಿದ, ಸಾಂಪ್ರದಾಯಿಕ ಕುಸುರಿ ಕೆತ್ತನೆಯ ಪರಿಣಿತ, ನಗರದ ನ್ಯೂ ರಾಘವೇಂದ್ರ ಕಾಲನಿಯ ನಿವಾಸಿ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ ಕೇಂದ್ರ ಜವಳಿ ಸಚಿವಾಲಯದ 2024ನೇ ಸಾಲಿನ “ರಾಷ್ಟ್ರೀಯ ಕರಕುಶಲ ಪ್ರಶಸ್ತಿ” ದೊರೆತಿರುವ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಸಂಜೆ ಶಿಲ್ಪಿಯವರಿಗೆ ಗೃಹ ಸನ್ಮಾನದಲ್ಲಿ ಸತ್ಕರಿಸಿ, ಅಭಿನಂದಿಸಲಾಯಿತು. ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸದಸ್ಯ ಅಸ್ಲಾಂ ಶೇಖ್, ಶಿಲ್ಪಿಯವರ ಕುಟುಂಬ ಸದಸ್ಯರಾದ ದೇವಕಮ್ಮ ಸಿ.ಶಿಲ್ಪಿ, ಗಾಯತ್ರಿ ಶಿಲ್ಪಿ, ಪ್ರವೀಣ ಶಿಲ್ಪಿ, ಸ್ವರಾಂಕ ಭಾಗವಹಿಸಿದ್ದರು.