
ತಾಳಿಕೋಟೆ:ಏ.೮: ವೀರಶೈವ ವಿದ್ಯಾವರ್ದಕ ಸಂಘದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಶ್ರಯ ಕಾಲೋನಿಯಲ್ಲಿ ಆಯೋಜಿಸಲಾದ ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶೇಷ ಶಿಬಿರವು ೨ನೇ ದಿನ ಮಂಗಳವಾರ ಸಂಭ್ರಮದಿAದ ಆರಂಭಗೊAಡಿತು.
ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ಆಶ್ರಯ ಕಾಲೋನಿಯ ಹನುಮಾನ್ ದೇವಾಲಯ ಮತ್ತು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.
ಶಿಬಿರದ ಮೊದಲ ದಿನ ಹಣರಹಿತ ಅರ್ಥವ್ಯವಸ್ಥೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಎಸ್.ಎಸ್. ನೆಲ್ಲಗಿ ಅವರು ಮಾತನಾಡಿ, ಹಣರಹಿತ ವ್ಯವಹಾರಗಳಿಂದ ಆರ್ಥಿಕ ಸ್ಥಿರತೆ ಸಾಧಿಸಬಹುದು ಹಾಗೂ ಡಿಜಿಟಲ್ ಪಾವತಿಗಳಿಂದ ಪಾರದರ್ಶಕತೆ ಹೆಚ್ಚುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಣದ ಮೌಲ್ಯ ಅರಿತು ವಂಚನೆಗಳಿAದ ದೂರವಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಮ್.ಆರ್. ಕತ್ತಿ ಅವರು ಮಾತನಾಡಿ, ಹಣರಹಿತ ವ್ಯವಸ್ಥೆಯಿಂದ ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಗೆ ಬರಲಿದೆ. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.
ಉಪನ್ಯಾಸಕರಾದ ಯು.ಎನ್. ಮಂಗೊAಡ ಅವರು, ಡಿಜಿಟಲ್ ವ್ಯವಹಾರಗಳಿಂದ ನಿತ್ಯ ಜೀವನದಲ್ಲಿ ಭದ್ರತೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಬಹುದು ಡಿಜಿಟಲ್ ವ್ಯವಹಾರದಿಂದ ಮೋಸ ವಂಚನೆ ಹೋಗದಿರುವ ಕುರಿತು ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಆರ್.ಎಂ. ಬಂಟನೂರ ಅವರು ಮಾತನಾಡಿ, ಬಸ್ ಪ್ರಯಾಣದಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಹಣರಹಿತ ವ್ಯವಹಾರ ವ್ಯಾಪಕವಾಗಿದ್ದು ಇದರ ಸುರಕ್ಷತೆ ಕುರಿತು ವಿದ್ಯಾರ್ಥಿಗಳು ಅಗತ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕöÈತಿಕ ಚಟುವಟಿಕೆಗಳು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಷ್ಟಿçÃಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಎ.ಎ. ಗಂಗನಗೌಡ ಕಾರ್ಯದರ್ಶಿ ಗಳಾದ ರೇಷ್ಮಾ ಚಲವಾದಿ ಹಾಗೂ ಎನ್ ಎಸ್ ಎಸ್ ಶಿಬಿರಾರ್ಥಿಗಳು, ಮಹಾವಿದ್ಯಾಲಯದ ಸರ್ವಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜ್ಯೋತಿ ಮತ್ತು ತಂಡದವರು ಪ್ರಾರ್ಥಿಸಿದಿರು. ಪಾರ್ವತಿ ಮತ್ತು ತಂಡದವರು ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಉಮಾಶ್ರೀ ಸ್ವಾಗತಿಸಿ ಪರಿಚಯಿಸಿದರು. ಸಂತೋಷ ಬಿರಾದಾರ್ ಪುಷ್ಪಾರ್ಪಣೆ ನೆರವೇರಿಸಿದರು. ಅನೀಶಾ ವಂದಿಸಿದರು. ಮಹಾಲಿಂಗ ಕಾರ್ಯಕ್ರಮ ನಿರೂಪಿಸಿದರು.





















