
ಜಮಖಂಡಿ: ಮಾ.25: ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಿನಾಲಿಗೆ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕೊಣ್ಣೂರ ಗ್ರಾಮದ ಸುಮಾರು 20 ವರ್ಷದ ಶಿವಪ್ಪ ಬಸಪ್ಪ ಗಸ್ತಿ ಎಂದು ಗುರುತಿಸಲಾಗಿದೆ. ತಂದೆಯ ಮರಣದ ನಂತರ ಶಿವಪ್ಪ ತನ್ನ ತಾಯಿಯೊಂದಿಗೆ ಮರೆಗುದ್ದಿ ಗ್ರಾಮದ ಅಜ್ಜನ ಮನೆಯಲ್ಲಿ ವಾಸವಾಗಿದ್ದನು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪಿ.ಎಸ್.ಐ ಗಂಗಾಧರ ಪೂಜೇರಿ ಅವರ ನೇತೃತ್ವದ ಪೆÇಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























