
ಸೇಡಂ,ಮಾ,೧೫: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಬೃಹನ ಮೂಲಾಧಾರ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಒಡೆಯರಾದ ಶ್ರೀ ಷ.ಬ್ರ,ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರ ದಿವ್ಯಾ ಸಾನ್ನಿಧ್ಯದಲ್ಲಿ ಇಂದು ಶ್ರೀ ಕಾರ್ತಿಕೇಶ್ವರ ಶಿವಾಚಾರ್ಯರ ಜಾತ್ರೋತ್ಸವ ಬಹು ಅದ್ದೂರಿಯಿಂದ ಜರುಗಲಿದೆ.ಬೆಳಗ್ಗೆ ೮ಕ್ಕೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಮೃತ್ಯುಂಜಯ ಹೋಮ, ಅಯ್ಯಾಚಾರ ಶಿವದೀಕ್ಷೆ ಜರುಗಿದ್ದು,ಜಗದ್ಗುರು ಶ್ರೀ ರೇಣುಕಾಚಾರ್ಯ,ಶ್ರೀ ಸದ್ಗುರು ಕಾರ್ತಿಕೇಶ್ವರ ಶಿವಾಚಾರ್ಯರ ಭಾವಚಿತ್ರದ ಭವ್ಯಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.ಸಂಜೆ ೬ಕ್ಕೆ ಭವ್ಯ ರಥೋತ್ಸವ ಜರುಗಲಿದೆ.


























