ಟಿಂಕರ್ ಕೋಡಿಂಗ್ ಲ್ಯಾಬ್ ಯೋಜನೆ ಸಭೆ

ಕೆಆರ್ ಪುರ, ಜೂ.೨೩- ಕ್ಯಾಪ್ ಜೆಮಿನಿ ಕಂಪನಿಯ ಸಹಕಾರದೊಂದಿಗೆ ಎಸ್‌ಆರ್‌ಎಫ್ ಫೌಂಡೇಶನ್ ನವರು ೨೦ ಟಿಂಕರ್ ಕೋಡಿಂಗ್ ಲ್ಯಾಬ್ ಅನ್ನೋ ೨೦ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ್ದು ಇದರ ಒಂದು ಅಂಗವಾಗಿ ರಾಮ ಮೂರ್ತಿ ನಗರ ಅಂಬೇಡ್ಕರ್ ನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಸಭೆಯನ್ನು ಆಯೋಜಿಸಿದ್ದರು.


ಇದರಲ್ಲಿ ಬೆಂಗಳೂರಿನ ಪೂರ್ವ ತಾಲ್ಲೂಕು-೪ ರಲ್ಲಿ ೧೮ ಶಾಲೆ, ಹಾಗೂ ಹೊಸಕೋಟೆಯಿಂದ ಎರಡು ಶಾಲೆಗಳು ಸೇರಿದಂತೆ ಒಟ್ಟು ೨೦ ಶಾಲೆಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದು ಇದರ ಅಧ್ಯಕ್ಷತೆಯನ್ನು ರಾಮಮೂರ್ತಿ ನಗರ ಶಾಲೆಯ ಎಸ್‌ಡಿಎಂಸಿ ಮುಖ್ಯಸ್ಥರಾದ ಹಿಟ್ಟಾಚಿ ಮಂಜು ಅವರು ವಹಿಸಿಕೊಂಡಿದ್ದರು.


ಈ ಒಂದು ಸಭೆಯಲ್ಲಿ ಟಿಂಕರ್ ಕೋಡಿಂಗ್ ಲ್ಯಾಬ್ ವಾರ್ಷಿಕ ಯೋಜನೆ ಕುರಿತು ಮತ್ತು ಪ್ರಸ್ತುತ ಇರುವ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


ಈ ಒಂದು ಸಭೆಯಲ್ಲಿ ಎಸ್ ಆರ್ ಎಫ್ ಫೌಂಡೇಶನ್ ತಂಡ, ರಾಮಮೂರ್ತಿ ನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಭಾರತಿ, ಎಸ್ ಡಿ ಎಮ್ ಸಿ ಮುಖ್ಯಸ್ಥರಾದ ಆರ್. ಮಂಜುನಾಥ್ ಹಾಗೂ ೨೦ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ರಾಮಮೂರ್ತಿನಗರ ಶಾಲೆಯ ಶಿಕ್ಷಕರನ್ನು ಭಾಗವಹಿಸಿದ್ದರು.