Home ಕ್ರೈಂ ಸುದ್ದಿಗಳು ಬಾಲಕ ಸೇರಿ ಮೂವರು ಪ್ರವಾಸಿಗರು ಕೆರೆಯಲ್ಲಿ ಮುಳುಗಿ ಸಾವು

ಬಾಲಕ ಸೇರಿ ಮೂವರು ಪ್ರವಾಸಿಗರು ಕೆರೆಯಲ್ಲಿ ಮುಳುಗಿ ಸಾವು

ವಿಜಯಪುರ, ಏ. 9:ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವ ಬಾಲಕ ಸೇರಿದಂತೆ ಮೂವರು ನಗರ ಹೊರ ವಲಯದ ಭೂತನಾಳ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಬುಧವಾರ ಸಂಭವಿಸಿದೆ.
ಬೆಂಗಳೂರಿನ ಆರ್ ಟಿ ನಗರದ ಮಹಮ್ಮದ್ ಹಯಾತ್ (12)
ಹೈದರ್ ಪಾಶಾ (32) ಅಬ್ದುಲ್ ಖುದ್ದುಸ್ (35) ಮೃತರು.
ವಿಜಯಪುರ ನಗರದ ಐತಿಹಾಸಿಕ ಭೂತನಾಳ ಕೆರೆ ವೀಕ್ಷಣೆಗೆ ತೆರಳಿದ್ದ ವೇಳೆ ಈ ಮೂವರು ಮೃತಪಟ್ಟಿದ್ದಾರೆ.
ಒಟ್ಟು 14 ಜನರು ಕುಟುಂಬ ಸಮೇತ ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದರು. ಕೆರೆಯ ಬಳಿ ಕುಟುಂಬಸ್ಥರು ಆಗಮಿಸಿದ ವೇಳೆ ಬಾಲಕ ಕೆರೆ ನೀರಿಗೆ ಇಳಿದಿದ್ದ. ಆಗ ಈ ದುರಂತ ಸಂಭವಿಸಿದೆ.
ಬಾಲಕ ಹೈದರ್ ಪಾಶಾ ನೀರಲ್ಲಿ ಇಳಿದಿದ್ದಾನೆ. ಈಜು ಬಾರದೇ ಆತ ಮುಳುಗಿದ್ದಾನೆ. ಆತನ ರಕ್ಷಣೆಗೆ ಅಬ್ದುಲ್ ಖುದ್ದುಸ್ ಹಾಗೂ ಹೈದರ್ ಪಾಶಾ ಮುಂದಾಗಿದ್ದಾರೆ. ಆಗ ಈ ಅನಾಹುತ ನಡೆದಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಆದರ್ಶ ನಗರ ಪೆÇಲೀಸರು ಮೂವರನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಸ್ಥಳದಲ್ಲೇ ಬಾಲಕ ಮಹಮ್ಮದ್ ಹಯಾತ್ ಹಾಗೂ ಹೈದರ್ ಪಾಶಾ ಸಾವನಪ್ಪಿದ್ದರು.
ತೀವ್ರ ಅಸ್ವಸ್ಥಗೊಂಡಿದ್ದ ಅಬ್ದುಲ್ ಖುದ್ದುಸ್ ಅಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆದಲ್ಲಿ ಸಾವನಪ್ಪಿದ್ದಾನೆ.
ನಂತರ ಮೂವರ ಶವಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಪೆÇಲೀಸರು ಹಸ್ತಾಂತರ ಮಾಡಿದ್ದಾರೆ.
ಆದರ್ಶ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.