Home Lead News ಯುದ್ಧಾಂತ್ಯಕ್ಕೆ ಮೂರು ಷರತ್ತು

ಯುದ್ಧಾಂತ್ಯಕ್ಕೆ ಮೂರು ಷರತ್ತು

ಟೆಹರಾನ್,ಮಾ.೧೨- ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮ ಕಚ್ಚಾತೈಲದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು ತೈಲ ಸರಬರಾಜು ಹಡಗುಗಳ ಮೇಲ್ ದಾಳಿ ನಡೆದಿದ್ದು ತೈಲ ಪೂರೈಕೆ ಸ್ಥಗಿತಗೊಂಡಿದೆ, ದಾಳಿ, ಪ್ರತಿದಾಳಿಯ ಹಿನ್ನೆಲೆಯಲ್ಲಿ ಸಂಘರ್ಷ ೧೩ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧ ಕೊನೆಯಾಗಬೇಕಾದರೆ ೩ ಪ್ರಮುಖ ಷರತ್ತು ಈಡೇರಿಸಬೇಕು ಎನ್ನುವ ಬೇಡಿಕೆಯನ್ನು ಇರಾನ್- ಅಮೆರಿಕ ಮುಂದಿಟ್ಟಿದೆ.

ಇರಾನ್‌ನ “ಕಾನೂನುಬದ್ಧ ಹಕ್ಕುಗಳನ್ನು” ಗುರುತಿಸಿದರೆ ಮಾತ್ರ ಸಂಘರ್ಷ ಕೊನೆಗೊಳ್ಳಬಹುದು. ಯುದ್ಧದ ಸಮಯದಲ್ಲಿ ಉಂಟಾದ ಹಾನಿಗೆ ಪರಿಹಾರ ಮತ್ತು ಭವಿಷ್ಯದ ದಾಳಿ ತಡೆಯಲು ಬಲವಾದ ಅಂತರರಾಷ್ಟ್ರೀಯ ಖಾತರಿ ನೀಡಬೇಕು ಎನ್ನುವ ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಅಮೆರಿಕ, ಇಸ್ರೇಲ್ ಒಪ್ಪಿಕೊಂಡರೆ ಇರಾನ್ ಸಂಘರ್ಷ ಕೊನೆಗೊಳಿಸಲು ಸಿದ್ಧವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಖಚಿತ ಪಡಿಸಿದ್ದಾರೆ.

ಫೆಬ್ರವರಿ ೨೮ ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ ಪ್ರಾರಂಭವಾದ ಸಂಘರ್ಷ ಈ ಪ್ರದೇಶದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳೊಂದಿಗೆ ಉಲ್ಬಣಗೊಂಡಿದೆ. ದಾಳಿ ಪ್ರತಿದಾಳಿಯಿಂದ ಸಹ್ರಾಸರು ಡಾಲರ್ ಮೌಲ್ಯದ ಆಸ್ತಿ ಪಾಸ್ತಿಗೆ ಹಾನಿಗಾಗಿದೆ.


ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಬೆಲೆಗಳು ವೇಗವಾಗಿ ಏರುತ್ತಿವೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಣದುಬ್ಬರದ ಭಯ ಹೆಚ್ಚಿಸುತ್ತಿವೆ. ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ತೈಲ ಟ್ಯಾಂಕರ್‌ಗಳ ಸಾಗಾಟಕ್ಕೆ ಅಡ್ಡಿಪಡಿಸಿದೆ. ಈ ಕಾರಣದಿಂದಾಗಿ, ಇಂಧನ ಸರಬರಾಜು ಒತ್ತಡದಲ್ಲಿವೆ ಮತ್ತು ಜಾಗತಿಕ ಮಾರುಕಟ್ಟೆಗಳು ಅಸ್ಥಿರವಾಗುತ್ತಿವೆ.


ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧ ಕೊನೆಗೊಳಿಸಲು ಇರಾನ್ ಷರತ್ತುಗಳನ್ನು ಬಹಿರಂಗಪಡಿಸಿದ್ದು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧ ಕೊನೆಗೊಳಿಸಲು ತಾನು ಸಿದ್ಧನಿರುವುದಾಗಿ ಇರಾನ್ ತಿಳಿಸಿದೆ.


ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ , ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗಿನ ಮಾತುಕತೆಯ ಸಮಯದಲ್ಲಿ, ಈ ಪ್ರದೇಶದಲ್ಲಿ ಶಾಂತಿಗೆ ಇರಾನ್‌ನ ಬದ್ಧತೆ ಅವರು ಪುನರುಚ್ಚರಿಸಲಾಗಿದೆ. ಈ ಯುದ್ಧ ಇಸ್ರೇಲ್ ಮತ್ತು ಅಮೆರಿಕದ ನಾಯಕರಿಂದ ಪ್ರಾರಂಭವಾಗಿದೆ. ಇರಾನ್‌ನ ಕಾನೂನು ಹಕ್ಕುಗಳನ್ನು ಗುರುತಿಸುವುದು, ಪರಿಹಾರ ಕಂಡುಕೊಳ್ಳುವುದು ಮತ್ತು ಭವಿಷ್ಯದ ದಾಳಿಗಳ ವಿರುದ್ಧ ಅಂತರರಾಷ್ಟ್ರೀಯ ಖಾತರಿ ನೀಡಿದರೆ ಇರಾನ್ ಯುದ್ಧದಿಂದ ಹಿಂದೆ ಸರಿಯಲಿದೆ ಎಂದಿದ್ದಾರೆ.


ಇಸ್ರೇಲ್ ಮತ್ತು ಅಮೆರಿಕ ಕ್ರಮಗಳಿಂದಾಗಿ ಪ್ರಸ್ತುತ ಸಂಘರ್ಷ ಪ್ರಾರಂಭವಾಗಿದೆ ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿದ ಅವರು ಇರಾನ್ ಮುಂದಿಟ್ಟಿರುವ ಮೂರು ಬೇಡಿಕೆಗಳ ಬಗ್ಗೆ ಸ್ಪಷ್ಟ ಒಪ್ಪಂದಕ್ಕೆ ಬರದ ಹೊರತು ಯುದ್ಧ ಕೊನೆಗೊಳ್ಳಲು ಸಾಧ್ಯವಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.


ಅಂತರರಾಷ್ಟ್ರೀಯ ಬೆಂಬಲವನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ಇರಾನ್ ಪ್ರಸ್ತುತ ಹಲವಾರು ದೇಶಗಳು ಮತ್ತು ಪ್ರಾದೇಶಿಕ ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ. ಸಂಘರ್ಷ ಎರಡನೇ ವಾರಕ್ಕೆ ಪ್ರವೇಶಿಸಿದ್ದು ಮತ್ತಷ್ಟು ಪರಿಸ್ಥಿರಿ ಉಲ್ಬಣಗೊಳ್ಳುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

ಇರಾನ್ ಮುಂದಿಟ್ಟ ಷರತ್ತು


ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಇಸ್ರೇಲ್ ಮತ್ತು ಅಮೆರಿಕವೇ ನೇರ ಕಾರಣ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಆರೋಪ ಮಾಡಿದ್ದು ಯುದ್ಧ ನಿಲ್ಲಬೇಕಾದರೆ ೩ ಷರತ್ತು ಈಡೇರಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ.


ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು. ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಭವಿಷ್ಯದಲ್ಲಿ ಆಕ್ರಮಣ ಮಾಡುವುದಿಲ್ಲ ಎಂದು ದೃಢವಾದ ಅಂತರರಾಷ್ಟ್ರೀಯ ಖಾತರಿಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.


ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್ ಹೇಳಿದೆ.