ನಿಮಗಾಗಿ ಅಸ್ಥಿತ್ವಕ್ಕೆ ತಂದ ಶಾಖೆ ಇದಾಗಿದೆ:ಸಿದ್ಧಲಿಂಗ ಶ್ರೀಗಳು

ಸೈದಾಪುರ:ಡಿ.೮:ಮಾನ್ವಿಯಿಂದ ಸೈದಾಪುರದ ಗಡಿ ಗ್ರಾಮೀಣ ಭಾಗದಲ್ಲಿ ಭಕ್ತರ ವಿಶ್ವಾಸದೊಂದಿಗೆ ನಿಮಗಾಗಿ ಅಸ್ಥಿತ್ವಕ್ಕೆ ತಂದ ಶಾಖೆ ಇದಾಗಿದ್ದೂ ೧೦ ವರ್ಷಗಳನ್ನು ಪೂರೈಸಿ ಇವತ್ತು ಅಭಿವೃದ್ದಿಯತ್ತ ಸಾಗುತ್ತಿರುವದಕ್ಕೆ ಹಿರಿಯ ಪೂಜ್ಯರ ಶುಭ ಹಾರೈಕೆ ಹಾಗೂ ಆಶೀರ್ವಾದ ಕಾರಣವಾಗಿದೆ. ಇದರ ಸರಿಯಾದ ಸದುಪಯೋಗ ನಮ್ಮದಾಗಬೇಕು ಎಂದು ನೇರಡಗುಂಬಾ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಜಿ.ಆರ್.ಪಾರ್ಕದಲ್ಲಿ ಶ್ರೀ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಾನ್ವಿ ಸೈದಾಪುರ ಶಾಖೆಯ ದಶಮಾನೋತ್ಸವದ ನಿಮಿತ್ಯ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ರೈತರು, ಸಾಮಾನ್ಯ ಜನರಿಗೆ ನೆರವಾಗಲೆಂದು ಪ್ರಾರಂಭ ಮಾಡಲಾದ ಸಹಕಾರಿ ಸಂಘ ಇವತ್ತು ಅಭಿವೃದ್ಧಿಯತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಲ್ಲರ ಸಹಕಾರದಿಂದ ಇನ್ನೂ ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ನೀಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿಯಮತದ ಅಧ್ಯಕ್ಷರು ಹಾಗೂ ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗ್ರಾಹಕರಿಂದ ಹಾಗೂ ಸಲಹಾ ಸಮಿತಿಯವರಿಂದ ಬ್ಯಾಂಕ್ ಅಭಿವೃದ್ಧಿ ಸಾಗುತ್ತಿದೆ. ಒಳ್ಳೆಯ ಕಾರ್ಯಕ್ಕೆ ನಿಷ್ಠೆಯಿಂದ ತಾಳ್ಮೆಯೊಂದಿಗೆ ಕಾರ್ಯ ನಿರ್ವಹಿಸಿದರೆ ಎತ್ತರಕ್ಕೆ ಬೆಳೆಯುತ್ತದೆ. ಈ ದಿಸೆಯಲ್ಲಿ ಎಲ್ಲರೂ ಸೇರಿ ಕಾರ್ಯ ನಿರ್ವಹಿಸೋಣ ಎಂದು ಕಿವಿ ಮಾತುಗಳನ್ನು ಹೇಳಿದರು.
ಚೇಗುಂಟ ಡಾ.ಕ್ಷೀರಲಿಂಗ ಮಹಾಸ್ವಾಮಿಗಳು, ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಹೊಸಪೇಟೆ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ ಅಧ್ಯಕ್ಷ ವಿಶ್ವನಾಥ ಹಿರೇಮಠ, ಸಿಂಧೂ ಪತ್ತಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಬಿ.ರಾಜಶೇಖರ, ಸೈದಾಪುರ ಶಾಖೆಯ ಸಲಹಾ ಸಮಿತಿಯ ವೆಂಕಟೇಶ.ಜಿ.ಪುರಿ, ಶಿವಮೂರ್ತಿ ಸ್ವಾಮಿ ಕೊಂಡಾಪುರ, ಬನ್ನಯ್ಯ ಸ್ವಾಮಿ ಬದ್ದೇಪಲ್ಲಿ, ನಿರಂಜರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಸದಾಶಿವರೆಡ್ಡಿಗೌಡ ಕಣೇಕಲ್, ಬಸರೆಡ್ಡಿಗೌಡ ಹೆಗ್ಗಣಗೇರಾ, ಲಕ್ಷಿö್ಮÃನಾರಾಯಣ ವಾರದ, ಅಭಿವೃದ್ಧಿಕಾರಿ ನಟರಾಜ, ಸೈದಾಪುರ, ಮಾನ್ವಿ, ಗಬ್ಬೂರ ಶಾಖೆಯ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು. ಸಿಇಒ ಎಂ.ಶAಕರಾನAದ ಪ್ರಾಸ್ತಾವಿಕ ಮಾತನಾಡಿದರು. ಸದಾಶಿವರೆಡ್ಡಿ ಪಾಟೀಲ ಕಣೇಕಲ್ ಸ್ವಾಗತಿಸಿದರು. ನಿರಂಜನರೆಡ್ಡಿ ಪಾಟೀಲ ಶೆಟ್ಟಹಳ್ಳಿ ನಿರೂಪಿಸಿದರು. ಬಸರೆಡ್ಡಿಗೌಡ ಹೆಗ್ಗಣಗೇರಾ ವಂದಿಸಿದರು.


ಎಸ್‌ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೧೦ ಸಾವಿರ, ದ್ವಿತೀಯ ಸ್ವಾನಕ್ಕೆ ೮ ಸಾವಿರ, ತೃತೀಯ ಸ್ಥಾನಕ್ಕೆ ೬ ಸಾವಿರ ರೂಪಾಯಿಗಳನ್ನು ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.