
ಸೈದಾಪುರ:ಡಿ.7:ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿ ವಿಜೇತ ವಿದ್ಯಾರ್ಥಿಗಳಿಗೆ ಪದಕಗಳೊಂದಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುತ್ತಿರುವ ಸಂಸ್ಥೆಯ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಅಭಿಪ್ರಾಯಪಟ್ಟರು.
ಪಟ್ಟಣದ (ಎಸ್.ಜಿ.ಎಸ್) ಶ್ರೀ ಗೌರಿಶಂಕರ ಪಬ್ಲಿಕ್ ಶಾಲೆಯಲ್ಲಿ ದಸರಾ ರಜೆಯ ಕಾರ್ಯಯೋಜನೆ ಸ್ಪರ್ಧೆ, ಸ್ಪೆಲ್ಲಿಂಗ್ ಬೀ ಸ್ಪರ್ಧೆ, ಕಲೋತ್ಸವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಭೆ ಹಿಂದೆ ನಿರಂತರ ಪರಿಶ್ರಮ, ಶಿಸ್ತು, ತ್ಯಾಗ, ಆತ್ಮ ವಿಶ್ವಾಸ, ದೃಢ ಸಂಕಲ್ಪ ಅಡಗಿರುತ್ತದೆ. ಇದೆಲ್ಲವನ್ನು ತಮ್ಮದಾಗಿಸಿಕೊಂಡು ಬಹುಮಾನ ಪಡೆಯುತ್ತಿರುವುದು ಕೆವಲ ಪ್ರಮಾಣ ಪತ್ರವಲ್ಲ. ಮಕ್ಕಳ ಪ್ರಯತ್ನಕ್ಕೆ ನೀಡುತ್ತಿರುವ ಪ್ರೋತ್ಸಾಹವಾಗಿದೆ. ವಿದ್ಯಾರ್ಥಿಗಳ ಸಾಧನೆ ಹಿಂದೆ ಪಾಲಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಸಂಸ್ಥೆಯ ಶಿಸ್ತು ಮಹತ್ವದ ಪಾತ್ರ ವಹಿಸುತ್ತದೆ. ಇದು ಇಲ್ಲಿ ಕಾಣಬಹುದಾಗಿದೆ. ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು.
ಶಾಲಾ ಸಂಸ್ಥಾಪಕರಾದ ಪ್ರಭುಲಿಂಗ ವಾರದ, ಆಡಳಿತಾಧಿಕಾರಿ ಪಂಡಿತರಾವ್, ಮುಖ್ಯುಗುರು ಅಜಮಲ್.ಜಿ, ಶಿಕ್ಷಕರಾದ ರೇಷ್ಮಾ, ಜ್ಯೋತಿ, ಮೇಘ, ಲಿಜಾ, ದೀಪ್ನಾ, ಮಾಲಾಶ್ರೀ, ರಾಜೇಶ್ವರಿ, ದೇವಮ್ಮ, ಆಶಾ, ಪ್ರಕಾಶ, ಭೀಮಯ್ಯ ಸೇರಿದಂತೆ ಇತರರಿದ್ದರು. ಶಿಕ್ಷಕಿ ಪ್ರವಲ್ಲಿಕ ನಿರೂಪಿಸಿದರು. ವಂದಿಸಿದರು.
























