
ಜಮಖಂಡಿ:ಅ.26: ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ದೇವರನ್ನೆ ಕಳ್ಳತನ ಮಾಡಿರುವ ಘಟನೆ ತಡರಾತ್ರಿಯಲ್ಲಿ ಜರುಗಿದೆ.
ಗ್ರಾಮದ ದಿಗಂಬೇಶ್ವರ ಸಂಸ್ಥಾನ ಮಠದಲ್ಲಿ ತಡ ರಾತ್ರಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಮುಖ್ಯ ದ್ವಾರದ ಮೂಲಕವೇ ದೇವಸ್ಥಾನದಲ್ಲಿ ಪ್ರವೇಶ ಮಾಡಿರುವ ಕಳ್ಳರು ದೇವಾಲಯದಲ್ಲಿದ ಸುಮಾರು 8 ಕೆಜಿ ಬೆಳ್ಳಿಯ ಮೂರ್ತಿ ಹಾಗೂ ದೇವರ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾರೆ. ಮೂರ್ತಿಗೆ ಬಂಗಾರದ ಕಣ್ಣುಬಟ್ಟುಗಳು ಕೊಡ ಇದ್ದವು ಎಂದು ತಿಳಿದು ಬಂದಿದೆ.ದೇವರನ್ನೂ ಬಿಡದ ಖದೀಮರು
ಸ್ಥಳಕ್ಕೆ ಸಿ.ಪಿ.ಐ ಮಲ್ಲಪ್ಪ ಮಡ್ಡಿ ಹಾಗೂ ಗ್ರಾಮಿಣ ಪೆÇೀಲಿಸ ಠಾಣೆ ಪಿ.ಎಸ್.ಐ ಗಂಗಾಧರ ಪೂಜೆರಿ ಅವರ ಪೆÇೀಲಿಸ ತಂಡ ಹಾಗೂ ಶ್ವಾನ ದಳ, ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.