ಪಕ್ಷ ನಿಷ್ಠೆ ಇದ್ದವರಿಗೆ ಕಾಂಗ್ರೆಸ್ ನಲ್ಲಿ ಆವಕಾಶ:ನಂಜೇಗೌಡ

ಮಾಲೂರು ಡಿ೪: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಪಕ್ಷ ನಿಷ್ಠೆ, ತಾಳ್ಮೆ ಇದ್ದವರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.
ತಾಲೂಕಿನ ಟೇಕಲ್ ಹೋಬಳಿಯ ಕೊಮ್ಮನಹಳ್ಳಿ ಗ್ರಾಮದ ಅವರ ನಿವಾಸದಲ್ಲಿ ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಹಕರಿಸಿದ ಶಾಸಕ ಕೆ ವೈ ನಂಜೇಗೌಡ ಹಾಗೂ ರತ್ನಮ್ಮ ನಂಜೇಗೌಡ ಅವರನ್ನು ನೂತನ ಅಧ್ಯಕ್ಷ ಎಚ್.ಎಂ.ವಿಜಯನರಸಿಂಹ ಹಾಗೂ ಸದಸ್ಯರಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.


ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ನಿಷ್ಠೆ ತಾಳ್ಮೆ ಇದ್ದಿದ್ದರಿಂದ ಮೊದಲನೇ ಅವಧಿಯಲ್ಲಿ ನಹಿಮ್ ಅವರಿಗೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿ ಮೂರು ಮಂದಿ ಸದಸ್ಯರನ್ನಾಗಿ ನೇಮಕ ಮಾಡಿಸಲಾಗಿತ್ತು, ಅವರ ಆಡಳಿತ ಮಂಡಳಿ ರಾಜಕಾರಣದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿ ಮಾದರಿ ಆಡಳಿತ ನೀಡಿದೆ, ಅದೇ ರೀತಿ ಎರಡನೇ ಅವಧಿಗೆ ಪ್ರಾಧಿಕಾರದಲ್ಲಿ ಪಕ್ಷನಿಷ್ಠೆ ತಾಳ್ಮೆ ಇದ್ದ ವಿಜಯ ನರಸಿಂಹ ಅವರನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲಾಗಿದೆ, ವೈಯುಕ್ತಿಕವಾಗಿ ಸಂಬಂಧಿಕರಿಗೆ ಅವಕಾಶಗಳನ್ನು ಕಲ್ಪಿಸದೆ ಪಕ್ಷನಿಷ್ಠೆ ತಾಳ್ಮೆ ಇದ್ದವರಿಗೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಪಕ್ಷ ನಿಷ್ಠೆ ಇರುವ ಯಾರನ್ನೇ ಮಾಡಿದರು, ಕೆಲವರು ಬೇಸರ ಪಡುತ್ತಾರೆ, ಚರ್ಚೆಗಳು ಸಹ ಆಗುತ್ತವೆ, ತಾಳ್ಮೆಯಿಂದ ಕಾದರೆ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶಗಳು ಸಿಗುತ್ತ, ಕಾಂಗ್ರೆಸ್ ಪಕ್ಷ ಸಿದ್ದಾಂತ ಸಾಮಾಜಿಕ ನ್ಯಾಯದಡಿ ಕಾರ್ಯಕರ್ತರಿಗೆ ಅವಕಾಶಗಳು ಕಲ್ಪಿಸಿ ಪಕ್ಷವನ್ನು ಗಟ್ಟಿ ಮಾಡುವ ಉದ್ದೇಶ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೇಸರಪಟ್ಟು ತೀರ್ಮಾನ ಕೈಗೊಂಡವರನ್ನು ನೋಡುತ್ತಿದ್ದೇವೆ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿವೆ. ನಮ್ಮಲ್ಲಿರುವ ಸ್ನೇಹ ಬಾಂಧವ್ಯ ಹೇಗಿತ್ತು ತೀರ್ಮಾನ ಕೈಗೊಂಡ ನಂತರ ಬೇರೆಯವರೊಂದಿಗೆ ಹೇಗಿರುತ್ತದೆ ಎಂಬುದನ್ನು ನೋಡುತ್ತೇವೆ. ಅಲ್ಲೊಬ್ಬರು ಇನ್ನೊಬ್ಬರು ತೀರ್ಮಾನ ಕೈಗೊಂಡರೆ ಬೇಸರ ಪಡುವುದಿಲ್ಲ ೨೦೧೬, ೧೭, ೧೮ ರವರೆಗೆ ಪಕ್ಷ ಕಟ್ಟಲು ಕಷ್ಟ ಪಟ್ಟ ದಿನಗಳು ನೆನಪಿಸಿಕೊಂಡರೆ ಆ ದಿನಗಳು ಬೇರೆ ಇದರೆ ಈ ದಿನಗಳೇ ಬೇರೆ ಪ್ರತಿ ಬೂತ್ ನಲ್ಲಿ ನಂಬಿಕೆಯುಳ್ಳ ಪಕ್ಷದ ಕಾರ್ಯಕರ್ತರಿದ್ದಾರೆ.


೨೦೨೮ಕ್ಕೆ ಪಕ್ಷ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮಾಡಿ ಸ್ವಾರ್ಥವಿಲ್ಲದೆ ಕಾರ್ಯಕರ್ತರಿಗೆ ಮುಂಬರುವ ದಿನಗಳಲ್ಲಿ ನಡೆಯುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ, ಎಪಿಎಂಸಿ ಚುನಾವಣೆಗಳಲ್ಲಿ ಅವಕಾಶಗಳನ್ನು ಕಲ್ಪಿಸಿ ಅವರ ಗೆಲುವಿಗೆ ಶ್ರಮಿಸಲಾಗುವುದು, ೨೦೨೮ರ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಶಾಸಕರು ಮೂರನೇ ಬಾರಿಗೆ ಆಯ್ಕೆಯಾಗಲಿದ್ದಾರೆ, ಪಕ್ಷಕ್ಕೆ ಸೇರ್ಪಡೆಯಾಗುವವರು ಬೇಕಾದಷ ಮಂದಿ ಇದ್ದಾರೆ, ನಮ್ಮಲ್ಲಿ ಒಗ್ಗಟ್ಟಿದೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮತವಾರು ಶೇಕಡವಾರು ಹೆಚ್ಚು ಮಾಡಿಕೊಂಡಿದ್ದೇವೆ ಒಂದೊಂದು ಮತವು ಪಕ್ಷಕ್ಕೆ ಮುಖ್ಯವಾಗಿದೆ ಸಾಮಾಜಿಕವಾಗಿ ಅವಕಾಶಗಳು ಕಲ್ಪಿಸಿ ಎಲ್ಲರನ್ನು ಒಗ್ಗಟ್ಟಾಗಿ ಕರೆದೊಯ್ಯಲಾಗುತ್ತಿದೆ, ವಿಜಯ ನರಸಿಂಹ ಅವರು ತಂದೆಯಂತೆ ಪಕ್ಷಕ್ಕೆ ನಿಷ್ಠೆ ನಂಬಿಕೆ ಇರುವುದರಿಂದ ರಾಜಕಾರದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಮುಂಬರುವ ದಿನಗಳಲ್ಲಿಯೂ ಸಹ ಪಕ್ಷ ನಿಷ್ಠೆ ಕಾರ್ಯಕರ್ತರಿಗೆ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದರು