ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ಕ್ರೀಡಾಕೂಟ: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ವಿಜಯಪುರ, ಡಿ. 5: ನವ್ಹಂಬರ 30 ರಿಂದ ಡಿಸೆಂಬರ 2 ರವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ-1 ನೇ ಸೆಮೆಸ್ಟರ್ ವ್ಯಾಸಂಗ ಮಾಡುತ್ತಿರುವ ಅಮೀರ ತಾಂಬೋಳಿ ಅವರು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನರೆ.
ಅದೇ ರೀತಿ ಮಲ್ಲಮ್ಮ ತೋಳಮಟ್ಟಿ ಅವರು 1500 ಮೀಟರ್ ಹಾಗೂ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿನ ಮೆಚ್ಚುಗೆ ಪಾತ್ರರಾಗಿದ್ದಾರೆ.
ಈ ಇಬ್ಬರು ಕ್ರೀಡಾಪಟುಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮೀತಿ ಅಧ್ಯಕ್ಷರೂ ಹಾಗೂ ವಿಜಯಪುರ ನಗರದ ಶಾಸಕರೂ ಆದ ಬಸನಗೌಡ ಪಾಟೀಲ, ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ಕ್ರೀಡಾ ನಿರ್ದೇಶಕ ಪೆÇ್ರ ಸಂಗಮೇಶ ಗುರವ, ಕ್ರೀಡಾ ಸಮೀತಿಯ ಸದಸ್ಯರಾದ ಡಾ. ಚಿದಾನಂದ ಆನೂರ, ಪೆÇ್ರ. ಎಂ.ಎಸ್, ಖೊದ್ನಾಪೂರ, ಡಾ. ದೇವೇಂದ್ರಗೌಡ ಪಾಟೀಲ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.