ಮಣ್ಣ ಬಿಟ್ಟು ಮಡಿಕೆ ಇಲ್ಲ ತನ್ನ ಬಿಟ್ಟು ದೇವರಿಲ್ಲ

ಕಲಬುರಗಿ,ಜೂ.೩೦-ಪಾಪಕರ್ಮಗಳನ್ನು ತಲೆಯಲ್ಲಿ ತುರಿಕೆ ಪಾಪ ಕಳೆದುಕೊಳ್ಳಲು ಬಂಗಾರದ ಆಕಳು ದಾನ ಮಾಡಲು ಹೇಳುತ್ತಾರೆ . ಹಾಗೆ ಮಾಡಿದರೆ ಪಾಪ ಕಳೆಯುವುದಿಲ್ಲ . ಮನುಷ್ಯ ತನ್ನ ಪಾಪುಕರ್ಮಗಳನ್ನು ತಾನೇ ತೊಳೆದುಕೊಳ್ಳಬೇಕೇ ವಿನಹ ಬೇರೆಯವರಿಂದ ತೊಳೆಯಲು ಸಾಧ್ಯವಿಲ್ಲ .ಪುಣ್ಯ ತೀರ್ಥಕ್ಷೇತ್ರಗಳಲ್ಲಿ ಮುಳುಗಿ ಬಂದರೆ ಪಾಪ ಕಳೆಯುತ್ತದೆಂದು ನಂಬಿಸಿದ್ದಾರೆ .ಇದು ಮೂರ್ಖತನದ ಪರಮಾವಧಿಯಾಗಿದೆ .ದೇವಾಲಯಗಳು ಪೂಜಾರಿಗಳು ಜನರಲ್ಲಿ ಪಾಪ ಕರ್ಮದ ಭಯ ಹುಟ್ಟಿಸಿ ತಾವು ಲಾಭ ಪಡೆಯುತ್ತಿದ್ದಾರೆ .ದೇವಾಲಯಗಳು ವ್ಯಾಪಾರ ಕೇಂದ್ರಗಳಾಗಿವೆ .ಮಣ್ಣ ಬಿಟ್ಟು ಮಡಿಕೆಯಿಲ್ಲ ತನ್ನ ಬಿಟ್ಟು ದೇವರಿಲ್ಲ ಎಂದು ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಶರಣಬಸವ ಸ್ವಾಮಿಗಳು ಹೇಳಿದರು.
ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪಯAðತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಎಂಟನೇ ದಿನದಂದು ಮಾತನಾಡಿದ ಅವರು, ದೇವಾಲಯಗಳಲ್ಲಿ ದೇವರ ಮೂರ್ತಿಗಳು ಕಳವಾಗುತ್ತವೆ .ದೇವರು ಮತ್ತು ದೇವರ ಸಂಪತ್ತು ಕಾಯಲು ಕಾವಲುಗಾರರಿದ್ದಾರೆ. ಅಂದರೆ ದೇವರಿಗೆ ತನ್ನನ್ನು ಮತ್ತು ತನ್ನ ಆಸ್ತಿಯನ್ನು ಕಾಪಾಡಿಕೊಳ್ಳುವ ಶಕ್ತಿ ಇಲ್ಲ ಎಂದಾಯಿತು. ಅಂತಹ ದೇವರು ಜನರನ್ನು ಹೇಗೆ ಕಾಪಾಡುತ್ತಾನೆ ? ಎಂದು ಪ್ರಶ್ನಿಸಿದರು. ದೇಹವೇ ದೇವಾಲಯವಾಗಿದೆ ಕಾಲೇ ಕಂಬವಾಗಿದೆ ಶಿರವೇ ಹೊನ್ನ ಕಳಸವಾಗಿದೆ. ಉಳಿ ಚಾಣಗಳು ಹುಟ್ಟಿದ ಮೇಲೆ ದೇವರುಗಳು ಹುಟ್ಟಿದವು. ದೇವರಿಗೆ ಹರಕೆ ಹೊತ್ತು ನಮ್ಮ ಕಾಮನೆಗಳು ಈಡೇರಿಸಿಕೊಳ್ಳುವವರು ದೇವರಿಗೆ ಲಂಚವನ್ನು ಕೊಟ್ಟು ತಮ್ಮ ಆಸೆಗಳನ್ನು ತೀರಿಸಿಕೊಂಡAತೆ. ದೇವರು ನಮಗೆ ಎಲ್ಲವನ್ನೂ ಕೊಟ್ಟವನಾಗಿದ್ದಾನೆ ನಮ್ಮಿಂದ ದೇವರು ಏನನ್ನೂ ಕೇಳುವುದಿಲ್ಲ ಭಕ್ತಿ ಮಾತ್ರ ಕೇಳುತ್ತಾನೆ. ನಿರ್ಮಲವಾದ ಮನಸ್ಸು ಕರ್ಪೂರದಾರತಿಯಾಗಿದೆ ಎಂದು ಹೇಳಿದರು.
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ ,ಕಾರ್ಯದರ್ಶಿಗಳಾದ ಡಾ.ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ್ ಪಾಳ, ಡಾ.ಕೆ.ಎಸ್ ವಾಲಿ, ಡಾ.ಎ.ಎಸ್ ಪಾಟೀಲ್, ಬಂಡಪ್ಪ ಕೇಸುರ್ ಉಪಸ್ಥಿತರಿದ್ದರು.