
ವಿಜಯಪುರ, ಮಾ. 27: ಜಿಲ್ಲೆಯ ಇಂಡಿ ಉಪವಿಭಾಗದ ವ್ಯಾಪ್ತಿಯ ವಿವಿಧ ಪೆÇಲೀಸ್ ಠಾಣೆಗಳ ಸರಹದ್ದಿನಲ್ಲಿ ನಡೆದ ವಿವಿಧ 20 ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ 42 ಜನ ಆರೋಪಿತರನ್ನು ಬಂಧಿಸಿ ಸುಮಾರು 1,20,04,750 ರೂ. ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು, ಕಳುವಾದ ಜೆಸಿಬಿ, ಪೀಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್ ವಾಹನಗಳು, ನೀರಿನ ಪಂಪ್‍ಸೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಿಗೆ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಗಳ ವಿವರ ನೀಡಿದರು.
2024, 2025 ಮತ್ತು 2026 ನೇ ಸಾಲಿನಲ್ಲಿ ದೇವಸ್ಥಾನ, ವಾಹನ, ಮನೆ, ಫೈನಾನ್ಸ, ದನ,ಕುರಿ, ಪಂಪ್‍ಸೆಟ್ ಕಳ್ಳತನ ಮತ್ತು ಸುಲಿಗೆ,ದರೋಡೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ, ಸುಲಿಗೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ?ಎಎಸ್ಪಿ ರಾಮನಗೌಡ ಹಟ್ಟಿ ಅವರ ಮೇಲ್ವಿಚಾರಣೆಯಲ್ಲಿ ಇಂಡಿ ಡಿಎಸ್ಪಿ ಸದಾಶಿವ ಕಟ್ಟಿಮನಿ ಮತ್ತು ಇಂಡಿ ಉಪವಿಭಾಗದ ಸಿಪಿಐ ಅವರ ನೇತೃತ್ವದಲ್ಲಿ ಆಯಾ ಪೆÇಲೀಸ ಠಾಣೆಯ ಪಿಎಸ್‍ಐ ಹಾಗೂ ಕೈಂ ಸಿಬ್ಬಂದಿ ಜನರನ್ನೊಳಗೊಂಡ ವಿವಿಧ ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು.
?ತನಿಖೆಗೆ ವಹಿಸಲಾದ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರು ತಮಗೆ ವಹಿಸಿದ ಕಳ್ಳತನದ ಪ್ರಕರಣಗಳ ತನಿಖೆಯನ್ನು ನಿಯಮಿತವಾಗಿ ಕೈಕೊಂಡು ಒಟ್ಟು 20 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ 42 ಜನ ಆರೋಪಿತರನ್ನು ಬಂಧಿಸಿ, ಸುಮಾರು 1,20,04,750 ರೂ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು, ಕಳುವಾದ ಜೆಸಿಬಿ, ಪೀಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್ ವಾಹನಗಳು, ನೀರಿನ ಪಂಪ್‍ಸೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದರು.
ಚಡಚಣ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ 18.12.2025 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಚಡಚಣ ಪೆÇಲೀಸ ಠಾಣೆಯ ವ್ಯಾಪ್ತಿಯ ಶಿರಾಡೋಣ ಗ್ರಾಮ ಬೀರಪ್ಪ ದೇವಸ್ಥಾನ (ಪಲ್ಲಕ್ಕಿ ಮನೆ) ಬಾಗಿಲ ಕೀಲಿ ಮುರಿದು ಮೂರ್ತಿಯ ಮೇಲಿದ್ದ ಹಾಗೂ ಟ್ರೇಜರಿಯಲ್ಲಿ ಇಟ್ಟ ಸುಮಾರು 6,51,000 ರೂಗಳ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಮಂಗಳವೇಡ ತಾಲೂಕಿನ ಕಾತ್ರಾಳ ಗ್ರಾಮದ ನಾಗೇಶ ಮಧುಕರ ಭೋಸಲೆ ಎಂಬ ಆರೋಪಿಯಿಂದ
ಒಟ್ಟು 6,42,000 ರೂ. ಕಿಮ್ಮತ್ತಿನ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 02.03.2026 ರಂದು ರಾತ್ರಿ ವೇಳೆಯಲ್ಲಿ ಚಡಚಣ ಪೆÇಲೀಸ ಠಾಣೆಯ ವ್ಯಾಪ್ತಿಯ ಟಾಕಳಿ ಗ್ರಾಮದಲ್ಲಿ ಪಿರ್ಯಾದಿದಾರ ಮಲ್ಲಿಕಾರ್ಜುನ ರಾಮಚಂದ್ರ ತೇಲಿ ಇವರ ಪೀಕಪ್ ಗೂಡ್ಸ ವಾಹನ ನಂ. ಏಂ.27.ಂಂ.4773 ನೇದ್ದನ್ನು ಮನೆಯ ಮುಂದೆ ಹಚ್ಚಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ
ಮಹಾರಾಷ್ಟ್ರದ ತುಳಜಾಪುರ ತಾಲೂಕಿನ ಕಿಲಜ ಗ್ರಾಮದ ವಿಶಾಲ ಠಾಣಾಜಿ ಮೋಳೆ ಎಂಬಾತನಿಂದ
ಕಳುವಾದ ಪೀಕಪ್ ಗೂಡ್ಸ ವಾಹನ ನಂ. ಏಂ.27.ಂಂ.4773 ಅಜಮಾಸ ಕಿಮ್ಮತ್ತು:ಮ 2,00,000 ರೂ.,
13.10.2025 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸಿಂದಗಿ ಪೆÇಲೀಸ್ ಠಾಣೆಯ ವ್ಯಾಪ್ತಿಯ ಯರಗಲ್ ಬಿಕೆ ಗ್ರಾಮದ ಪಿರ್ಯಾದಿದಾರ ಲಕ್ಷ್ಮೀ ಶರಣಪ್ಪ ತಳವಾರ ಸಾ: ಯರಗಲ್ ಬಿಕೆ ಅವರ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಒಟ್ಟು 4,50,000 ರೂ. ಕಿಮ್ಮತ್ತಿನ ಬಂಗಾರ ಹಾಗೂ ರೋಖ ಹಣ ಕಳುವು ಮಾಡಿಕೊಂಡ ಹೋದ ಬಗ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧೆವಾಡಿ ತಾಳ ಮೀರಜ್
ಶಂಕರ @ ಯುವರಾಜ್ ತಂ. ಈಶ್ವರ @ ಕಾಶೀನಾಥ @ ಲಿಂಗಂ ಭೋಸ್ಲೆ ಎಂಬ ಆರೋಪಿಯಿಂದ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಆರೋಪಿತನು ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿಯೂ ಬಂಧಿತನಿಂದ ಒಟ್ಟು 162.930 ಗ್ರಾಂ ಬಂಗಾರ ಆಭರಣ ಅಜಮಾಸ ಕಿಮ್ಮತ್ತು 6,80,000 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಇದೇ ರೀತಿ ಇಂಡಿ ಉಪವಿಭಾಗದ ವಿವಿಧ ಪೆÇಲೀಸ್ ಠಾಣೆ 20 ಪ್ರಕರಣಗಳಲ್ಲಿ 42 ಆರೋಪಿತರನ್ನು ಬಂಧಿಸಿ ಪೆÇಲೀಸರು ಆರೋಪಿತರಿಂದ ಒಟ್ಟು ಅಂದಾಜು 1,20,04,750-00 ರೂ. ಬಂಗಾರ, ಬೆಳ್ಳಿಯ ಆಭರಣಗಳು, ಜೆಸಿಬಿ, ಪೀಕಪ್, ಸ್ಕಾರ್ಪಿಯೋ, ಟ್ರ್ಯಾಕ್ಟರ್ ವಾಹನಗಳು, ನೀರಿನ ಪಂಪ್‍ಸೆಟ್, ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿಂಬರಗಿ ವಿವರಿಸಿದರು.
ತನಿಖಾ ತಂಡದ ಕರ್ತವ್ಯವನ್ನು ಶ್ಲಾಘಿಸಿ, ತಂಡದ ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ ಎಂದು ಅವರು ತಿಳಿಸಿದರು.



























