ಇಂಚಗೇರಿ ಶಾಖಾ ಮಠದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡ ಜಗನ್ನಾಥ ಮಹಾರಾಜರ ಮೂರ್ತಿ

ಕಲಬುರಗಿ,ಡಿ.8-ಸಮರ್ಥ ಸದ್ಗುರು ಮಾಧವಾನಂದ ಪ್ರಭುಗಳ ಹಾಗೂ ಇಂಚಗೇರಿಮಠದ ಸದ್ಗುರುಗಳ ಸ್ಮರಣಾರ್ಥ 52 ನೇ ಆಧ್ಯಾತ್ಮ ಸಪ್ತಾಹದ ಕಾರ್ಯಕ್ರಮದಲ್ಲಿ ಕಲಬುರಗಿಯ ಇಂಚಗೇರಿ ಸಂಪ್ರದಾಯದ ಆಶ್ರಮದ ಸಂಸ್ಥಾಪಕರಾದ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಮೂರ್ತಿಯನ್ನು ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿದರು.
ಈ ಸಡಗರ ಸಂಭ್ರಮದಿಂದ ಜರುಗಿದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕಲಬುರಗಿಯ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.
ಸಮರ್ಥ ರಾಮದಾಸ ಮಹಾರಾಜರ ದಾಸಬೋದದ ವಿಮಲಬ್ರಹ್ಮ ನಿರೂಪಣೆ. ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪವೃಷ್ಠಿಯೊಂದಿಗೆ ಜ್ಞಾನಯಜ್ಞ ಆಧ್ಯಾತ್ಮ ಸಪ್ತಾಹ ಮಂಗಲಗೊಂಡಿತು. ಈ ಆಧ್ಯಾತ್ಮ ಸಪ್ತಾಹದಲ್ಲಿ ದೊಡ್ಡಪ್ಪ ಅಪ್ಪ, ಸುರೇಂದ್ರ ನಾಥ ಸ್ವಾಮಿಗಳು, ಶಿವಾನಂದ ಮಹಾಸ್ವಾಮಿಗಳು, ರಾಜಕೀಯ ಮುಖಂಡರು, ಕರ್ನಾಟಕ, ಮಹಾರಾಷ್ಟ್ರÀ ಹಾಗೂ ಕಲಬುರಗಿಯ ನಗರದಲ್ಲಿರುವ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.