
ಕಾಳಗಿ : ಮಾ.23:ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ತೋರಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಕಜಾ ಎ ಹೇಳಿದರು.
ಪಟ್ಟಣ ಪಂಚಾಯತನಲ್ಲಿ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಚನಗಳನ್ನು ಆಲಿಸುವುದರಿಂದ ಜೀವನದಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಸರಿಯಾದ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಶರಣರ ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಶಿವಕುಮಾರ ಶಾಸ್ತ್ರಿ ಮಾತನಾಡಿದರು.
ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ರೇವಣಸಿದ್ಧ ಮುಗಳಿ, ತಾಲೂಕು ಸಮಾಜದ ಅಧ್ಯಕ್ಷ ಗಣೇಶ ಸಿಂಗಶೆಟ್ಟಿ, ಪ.ಪಂ ಸದಸ್ಯ ರಮೇಶ ಕಿಟ್ಟದ, ಗುರುರಾಜ ಮದ್ದೂರ, ಶರಣಪ್ಪ ಬೇಲೂರ, ಗಣಪತರಾವ ಸಿಂಗಶೆಟ್ಟಿ, ಪರಮೇಶ್ವರ ಮಡಿವಾಳ, ಈರಣ್ಣ ಟೆಂಗಳಿಕರ, ಶರಣಪ್ಪ ಕಿಟ್ಟದ, ಕೃಷ್ಣ ಸಿಂಗಶೆಟ್ಟಿ, ಮಲ್ಲಿಕಾರ್ಜುನ ಟೆಂಗಲೀಕರ, ಬಾಬು ಹೀರಾಪುರ, ರೀತಿಕೇಶ ಅಡಕಿ ಸೇರಿದಂತೆ ಅನೇಕರಿದ್ದರು.




























