
ಬೆಂಗಳೂರು,ಜ.೨೪-ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬಳನ್ನು ವಂಚಿಸಿ ಇಬ್ಬರು ಕಳ್ಳಿಯರು ಸರಗಳ್ಳತನ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪಟ್ಟಣದ ಅಶೋಕ್ ನಗರದಲ್ಲಿ ನಡೆದಿದೆ.
ಶಿಡಲಘಟ್ಟದಿಂದ ದೇವನಹಳ್ಳಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ವೃದ್ಧೆಯ ಹಿಂದೆ ಕುಳಿತು ಕಳ್ಳಿಯರು ಸರಗಳ್ಳತನ ಮಾಡಿದ್ದಾರೆ. ನಂತರ, ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ.
ವೆಂಕಟಮ್ಮ ಎಂಬ ವೃದ್ಧೆಯ ಕುತ್ತಿಗೆಯಿಂದ ಸರ ಕದ್ದಿದ್ದಾರೆ.ಕಳ್ಳಿಯರಾದ ಸುಧಾ ಮತ್ತು ಅನು ಬಸ್ ನಿಲ್ಲಿಸಿದಾಗ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ ಅದೇ ಸಮಯದಲ್ಲಿ ವೃದ್ಧೆ ಸರ ಕಾಣೆಯಾಗಿದೆ ಎಂದು ಗೋಳಾಟ ನಡೆಸಿದ್ದಾರೆ.ಆ ಸಮಯದಲ್ಲಿ, ಸರಿಯಾಗಿ ಸ್ಥಳೀಯರು ಕಳ್ಳಿಯರನ್ನು ಬೆನ್ನಟ್ಟಿ ಅವರು ತಪ್ಪಿಸಿಕೊಳ್ಳದಂತೆ ಅವರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

























