
ಕಲಬುರಗಿ,ಏ.1-ನಗರದ ಅಡ್ವೋಕೇಟ್ ಕಾಲೋನಿಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದ ಬಾಗಿಲಿನ ಕೊಂಡಿ ಮುರಿದು ಕಳ್ಳರು ದೇವಿಯ ಬೆಳ್ಳಿ ಮೂರ್ತಿ ಸೇರಿ 1.37 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ಮತ್ತು ಬೆಳ್ಳಿ ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಜೇವರಗಿ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೇವಸ್ಥಾನದ ಬಾಗಿಲಿನ ಕೊಂಡಿ ಮುರಿದು ಕಳ್ಳರು ಮಹಾಲಕ್ಷ್ಮೀ ದೇವಿಮೂರ್ತಿ ಕೊರಳಲ್ಲಿನ 91 ಸಾವಿರ ರೂ.ಮೌಲ್ಯದ 7 ಗ್ರಾಂ.ಬಂಗಾರದ ತಾಳಿ, ಮಹಾಲಕ್ಷ್ಮೀ ದೇವಿಯ ಹಳೆಯ ಮೂರ್ತಿಯ ಕೊರಳಲ್ಲಿನ 26 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ತಾಳಿ, 20 ಸಾವಿರ ರೂ.ಮೌಲ್ಯದ 100 ಗ್ರಾಂ.ಬೆಳ್ಳಿಯ ಮೂರ್ತಿ ಸೇರಿ 1.37 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ದೋಚಿಕೊಂಡು ಹೋಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.




























