
ಕಲಬುರಗಿ,ಏ 9: ಯುವ ಸಿವಿಲ್ ಇಂಜಿನಿಯರುಗಳಿಗಾಗಿ ನಗರದ ಖಾಸಗಿ ಹೊಟೇಲ್‍ನಲ್ಲಿ ಸರ್ಫಾ ಕೋಟ್ಸ್ ಪೈಂಟ್ಸ್ ವತಿಯಿಂದ ತಾಂತ್ರಿಕ ಕಾರ್ಯಾಗಾರ ಆಯೋಜಿಸಲಾಗಿತ್ತು .ಸಿವಿಲ್ ಇಂಜಿನಿಯರ್ ಹಾಗೂ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ ಪರಿಷತ್ ಸದಸ್ಯ ಮುರಳೀಧರ ಕರಲಗಿಕರ್ ಉದ್ಘಾಟನೆ ಮಾಡಿದರು
ನಂತರ ಕಂಪನಿಯ ಉತ್ತರ ಕರ್ನಾಟಕ ದ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಧರ ಸಫಾರೆ ಅವರು ಸವಿಸ್ತಾರವಾಗಿ ತಾಂತ್ರಿಕ ಸಲಹೆ ಮತ್ತು ಸೂಚನೆ ನೀಡಿದರು.ವೇದಿಕೆಮೇಲೆ ಸಿವಿಲ್ ಇಂಜಿನಿಯರಗಳಾದ ಅಂಬರೀಷ್ ಪಾಟೀಲ್, ವಿನಯ ಪಾಟೀಲ್, ರಾಜು ಕುಲಕರ್ಣಿ, ಅನಿಲಕುಮಾರ ಗಂಗಾಣೆ, ಗುರುರಾಜ ಪೈಂಟ್ಸ್, ಮಲ್ಲಿಕಾರ್ಜುನ್ ಕುಲಕರ್ಣಿ, ಸ್ಥಳೀಯ ಮಾರುಕಟ್ಟೆ ಅಧಿಕಾರಿ ಚಂದ್ರಶೇಖರ ಪಾಟೀಲ್, ಸಂದೀಪ್, ತೀರ್ಥಪ್ಪಾ, ವಿಜಯಕುಮಾರ ಗಂಗಾಣೆ, ಶರಣು, ಶಿವು ಬಿರಾದಾರ್ ಉಪಸ್ಥಿತರಿದ್ದರು





















