ಶಿಕ್ಷಕರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ಸಚಿವ ಎಂ.ಬಿ. ಪಾಟೀಲ

ವಿಜಯಪುರ,ಜೂ.೨೯:ಹಿಂದಿನ ಕಾಲದಲ್ಲಿ ಗುರುಕುಲಗಳು ಗುಡಿಸಿಲಿನಲ್ಲಿ ನಡೆಯುತ್ತಿದ್ದವು. ಅಲ್ಲಿ ಒಳ್ಳೆಯ ಶಿಕ್ಷಣ ಪಡೆದು ಮೇಧಾವಿಗಳಾಗಿ ಉನ್ನತ ಹುದ್ದೆ ಪಡೆಯುತ್ತಿದ್ದರು. ಯಾಕೆಂದರೆ ಅಲ್ಲಿ ಒಳ್ಳೆಯ ಶಿಕ್ಷಕರಿಂದ ಒಳ್ಳೆಯ ಶಿಕ್ಷಣ ದೊರಕುತ್ತಿತ್ತು. ಆದರೆ ಅಲ್ಲಿ ಸುಸಜ್ಜಿತ ಕಟ್ಟಡಗಳಿರಲಿಲ್ಲ. ಇಂದು ಹಲವು ಸೌಲಭ್ಯಗಳೊಂದಿಗೆ ಕಟ್ಟಡ, ಡಿಜಿಟಲ್ ಕ್ಲಾಸ್ ಇತ್ಯಾದಿ ಇದ್ದರೂ ಶಿಕ್ಷಣದ ಗುಣಮಟ್ಟ ಹೆಚ್ಚಾಗಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಠಕ್ಕೆಯಲ್ಲಿ ಶುಕ್ರವಾರ ಸಂಜೆ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿ.ಎಸ್.ಆರ್.(ಎಂ.ಎಸ್.ಐ.ಎಲ್) ಅನುದಾನದಡಿ ನಿರ್ಮಿಸಲಾದ ಸಭಾಭವನ ಉದ್ಘಾಟನೆ, ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಗಸ್ತ್ಯ ಪೌಂಡೇಶನ ಪ್ರಾಯೋಜಕತ್ವದ ಸಂಚಾರಿ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಶಾಲೆಯ ಹೃದಯವಿದ್ದಂತೆ. ಶಿಕ್ಷಕರು ಪ್ರಾಮಾಣಿಕತೆಯಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಎಸ್ ಎಸ್ ಎಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯೂ ಕುಸಿತ ಕಂಡಿದ್ದು ಸುಧಾರಣೆಗೆ ಹೆಚ್ಚು ಆಧ್ಯತೆ ನೀಡಬೇಕು. ಶಾಲೆಗೆ ಬರುವ ಪ್ರತಿ ಮಕ್ಕಳ ಪ್ರತಿಭೆ ಹೊರಹಾಕಿ ಶಿಕ್ಷಕರು ಉತ್ತಮ ಶಿಕ್ಷಣ ನೀಡಿದರೆ ನಮ್ಮ ಜಿಲ್ಲೆ ಫಲಿತಾಂಶದಲ್ಲಿ ಟಾಪ್ ೧ ರ ಜಿಲ್ಲೆಯಾಗಿ ಹೊರ ಹೊಮ್ಮುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಸರಕಾರ ಹಲವು ಸೌಲಭ್ಯ ನೀಡಿದರೂ ಯಾಕೆ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುತ್ತಿಲ್ಲ. ಎಲ್ಲ ಸೌಲಭ್ಯ ಇದ್ದರೂ ಸರಕಾರಿ ಶಾಲೆಗಳು ಯಾಕೆ ಮುಚ್ಚುತ್ತಿವೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಹೇಳಿದರು.
ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕೊಡುವ ಮೂಲಕ ೯೨ ಮಕ್ಕಳು ೬೦೦ ಕ್ಕಿಂತ ಹೆಚ್ಚು ಅಂಕ ಪಡೆದು ಕೀರ್ತಿ ತಂದಿದ್ದಾರೆ. ಈ ಜಿಲ್ಲೆ ಟಾಪ ಹತ್ತರಲ್ಲಿ ಇರಬೇಕು ಎಂಬ ಆಸೆ , ನಮ್ಮ ಮಕ್ಕಳು ಓದುವ ಶಾಲಾ ಕೊಠಡಿ ನಿಜವಾದ ದೇವಾಲಯ, ಅಂತಹ ಶಾಲಾ ಕಟ್ಟಡ ನರ್ಮಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ಅಭಿವೃದ್ಧಿಯಾಗಿದೆ. ರೈತರ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕರ್ಯನರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ಗುಣಮಟ್ಟದ ಶಿಕ್ಷಣ ಈ ಜಿಲ್ಲೆಗೆ ಸೀಗಬೇಕು ಎಂಬ ಬಯಕೆಯಿಂದ ಸಚಿವರು ಶೈಕ್ಷಣಿಕ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ್ದಾರೆ. ಶಿಕ್ಷಣ ಜೀವನದಲ್ಲಿ ತುಂಬಾ ಆತ್ಮವಿಶ್ವಾಸ ನೀಡುತ್ತದೆ. ಎಸ್.ಎಸ್.ಎಲ್.ಸಿಯಲ್ಲಿ ಮಕ್ಕಳು ಹೆಚ್ಚು ಫಲಿತಾಂಶ ಪಡೆಯಲು ಜಿಲ್ಲಾ ಕ್ರೀಯಾ ಯೋಜನೆ ತಯಾರು ಮಾಡಿದ್ದೇವೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಸಚಿವರ ಸೂಚನೆಯಂತೆ ನೊಡಲ್ ಅಧಿಕಾರಿ ನೇಮಕ ಮಾಡಿದ್ದೇವೆ. ಜಿಲ್ಲಾ ಪಂಚಾಯಿತಿ, ಡಿಡಿಪಿಐ ಹಾಗೂ ಜನಪ್ರತಿನಿಧಿಗಳ ಸಹಯೋಗದಲ್ಲಿ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ದಿನಂಪ್ರತಿ ಶಾಲೆಗೆ ಹೋಗಿ ಪ್ರತಿ ತರಗತಿಗೆ ಹಾಜರು ಇರಬೇಕು. ಶಿಕ್ಷಕರ ಜೊತೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ನೇರವಾಗಿ ನಮಗೆ ಕರೆ ಮಾಡಿ ಎಂದರು. ಪಿಯುಸಿ ಹಾಗೂ ಎಸ್ ಎಸ್ ಎಲ್ಸಿ ಫಲಿತಾಂಶ ಮುಂದಿನ ದಿನಗಳಲ್ಲಿ ಟಾಪ್ ಹತ್ತರಲ್ಲಿ ನಮ್ಮ ಜಿಲ್ಲೆ ಇರುತ್ತೆ ಎಂಬ ಭರವಸೆ ಇದೆ ಎಂದರು.

ಗ್ಯಾರAಟಿ ಸಮೀತಿ ಅಧ್ಯಕ್ಷ ಗುರು ದಾಸ್ಯಾಳ, ಡಿಡಿಪಿಐ ಟಿ.ಎಸ್.ಕೊಲಾರ, ಬಿಇಓ ಪ್ರಮೋದಿನಿ ಬಳೋಲಮಟ್ಟಿ, ಎಸ್.ಡಿ.ಮೊಸಲಗಿ, ಗೀತಾ ಪಾಟೀಲ ಇದ್ದರು.