ಸಮೀಕ್ಷೆಗೆ ತೆರಳಿದ ಶಿಕ್ಷಕ ಆಸ್ಪತ್ರೆಗೆ ದಾಖಲು

ಕಾಳಗಿ:ಅ.17:ರಾಜ್ಯ ಹಿಂದುಳಿದ ವರ್ಗಗಳ ಮೂಲಕ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತೆರಳುತ್ತಿದ್ದ ಶಿಕ್ಷಕ ಬೈಕ್ ಸ್ಕೀಡ್ ಆಗಿ ಬಿದ್ದು, ಜೋರಾಗಿ ಪೆಟ್ಟಾಗಿರು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಜರುಗಿದೆ.

ಕಾಳಗಿ ತಾಲೂಕಿನ ಕೊಡದೂರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾಣಿಕರಾವ ಪಾಟೀಲ ದೊಟಿಕೋಳ(49)ಎಂದು ತಿಳಿದು ಬಂದಿದೆ.

ಸಮೀಕ್ಷೆಗೆಂದು ತಾಲೂಕಿನ ತೆಂಗಳಿ-ಸಾಲಹಳ್ಳಿ ಮಾರ್ಗಮಧ್ಯದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ತುಂಬಾ ಪೆಟ್ಟಾಗಿ ಕಾಲಿಗೆ ರಕ್ತಸುರಿಯುತ್ತಿದ್ದರಿಂದ ಮೋರ್ಛೆ ಹೊಗಿದ್ದಾನೆ.

ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಮಹಾಂತೇಶ ಪಂಚಾಳ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವಿಯತೆ ಮೆರೆದಿದ್ದಾರೆ.

ಒಳಪೆಟ್ಟಾಗಿ ತುಂಬಾ ಗಾಯಗೊಂಡಿರುವ ಶಿಕ್ಷಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮೀಕ್ಷೆಗೆಂದು ಕಳಿಸಿರುವ ಶಿಕ್ಷಕರಿಗೆ ಸರಿಯಾದ ತರಬೇತಿ ಇಲ್ಲ. ಇಳಿ ವಯಸ್ಸಿನ ಶಿಕ್ಷಕರಿಗೆ ಸಮೀಕ್ಷೆಗೆ ಒಳಪಡಿಸಿರುವುದು.
ಮೊಬೈಲ್ ಪರಿಜ್ಞಾನವೇ ಇಲ್ಲದ ಹಳೆ ಶಿಕ್ಷಕರು ಗಣತಿಕಾರ್ಯ ನಿರ್ವಹಿಸಲು ಬಾರದೆ ಮೇಲಾಧೀಕಾರಿಗಳ ಒತ್ತಡಕ್ಕೆ ಗೋಳೋ ಎಂದು ಕಣ್ಣಿರಿಕ್ಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಅಳಲನ್ನು ಯಾರಿಗೂ ಹೆಳಿಕೊಳ್ಳಲಾಗದೇ ಶಿಕ್ಷಕರ ಸಮೀಕ್ಷೆ ಸ್ಥಿತಿ ದೇವರೇ ಗತಿ ಎಂಬಂತಾಗಿದೆ.