Home ಜಿಲ್ಲೆ ಕಲಬುರಗಿ ಮಕ್ಕಳಲ್ಲಿ ಸಂಸ್ಕಾರ,ಮಾನವೀಯ ಮೌಲ್ಯ ಕಲಿಸಿ

ಮಕ್ಕಳಲ್ಲಿ ಸಂಸ್ಕಾರ,ಮಾನವೀಯ ಮೌಲ್ಯ ಕಲಿಸಿ

ಜೇವರಗಿ,ಮಾ.12: ಮಕ್ಕಳಲ್ಲಿ ಸಂಸ್ಕಾರದ ಕೊರತೆಯಾಗುತ್ತಿದ್ದು, ಪಾಲಕರು ನಿಗಾ ವಹಿಸುವ ಅಗತ್ಯತೆಯಿದೆ ಎಂದು ಪತ್ರಕರ್ತ ವಿಜಯಕುಮಾರ ಕಲ್ಲಾ ತಿಳಿಸಿದರು.
ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಕೆಜಿ ಮಕ್ಕಳ ತೇರ್ಗಡೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯತೆ ಇದೆ. ಮಕ್ಕಳಿಗೆ ಶಾಲೆಯಲ್ಲಿ ಹೆಚ್ಚು
ಅಂಕಗಳಿಸುವುದು ಹೇಗೆ ಎಂದಷ್ಟೇ ತಿಳಿಸಿದರೆ ಸಾಲದು, ಸಂಸ್ಕಾರವನ್ನು ಸಹ ಹೇಳಿಕೊಡಬೇಕು ಎಂದರು.
ನೂರಂದೇಶ್ವರ ಪ್ರೌಢ ಶಾಲೆಯ ಮುಖ್ಯಗುರುಗಳಾದ ಮಹಾದೇವಯ್ಯ ಸ್ಥಾವರಮಠ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಜ್ಯೋತಿ ಸಾಲಿಮಠ ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನೀಲ ರಾಂಪೂರ, ಅಪ್ಸರ್ ಪಟೇಲ್, ರಿಜ್ವಾನಾ ಬೇಗಂ, ಸಂಸ್ಥೆ ಆಡಳಿತಾಧಿಕಾರಿ ಶೃತಿ ಹಿರೇಮಠ, ದಾನಮ್ಮ ಪಿಯು ಕಾಲೇಜು ಪ್ರಾಚಾರ್ಯ ಜಗದೀಶ ಉಕನಾಳಕರ್ ಆಗಮಿಸಿದ್ದರು. ಶಿಕ್ಷಕಿ ಶಕುಂತಲಾ ಪ್ರಾರ್ಥಿಸಿದರು, ಶಿಕ್ಷಕಿ ಪವಿತ್ರಾ ಪಾಟೀಲ ಸ್ವಾಗತಿಸಿದರು, ಶಿಕ್ಷಕಿ ರೇಷ್ಮಾ ಕಾಂಬಳೆ ನಿರೂಪಿಸಿದರು, ಶಿಕ್ಷಕಿ ಹೀನಾ ವಂದಿಸಿದರು.