Home ಜಿಲ್ಲೆ ಕಲಬುರಗಿ ಸರ್ವಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

ಸರ್ವಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

ಕಲಬುರಗಿ,ಮಾ.11: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಮತ್ತು ಜಸ್ಟೀಸ್ ಶಿವರಾಜ ಪಾಟೀಲ ಪದವಿ ಪೂರ್ವ ಕಾಲೇಜು ಕಲಬುರ್ಗಿ ಹಾಗೂ ರಾಯಚೂರು ಸಂಯುಕ್ತ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ನಾಡೋಜ ಡಾ. ಶಿವರಾಜ ವಿ. ಪಾಟೀಲ ಅವರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪೆÇ್ರೀತ್ಸಾಹ ಧನ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಮಾತನಾಡುತ್ತಾ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವುದರಿಂದ ಅವರು ಉತ್ತಮ ಸಾಧನೆ ಮಾಡಿ ದೇಶದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯುತ್ತಾರೆ. ಬಡವರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವಾಗ, ದಾನ ಮಾಡುವಾಗ, ದಾಸೋಹ ಮಾಡುವಾಗ ಕೊಡುವ ಕೈ ಮುಂದಾಗಬೇಕು, ತಲೆಬಾಗಬೇಕು. ಭಗವಂತ ಕೊಡುವ ಸಾಮಥ್ರ್ಯ ಕೊಟ್ಟಿದ್ದಾನೆ ಎಂಬ ವಿನಯ ಭಾವನೆ ಇರಬೇಕು ಎಂದರು.
ಮುಂದುವರೆದು ಮಾತನಾಡುತ್ತ, ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯದ ಮಟ್ಟಕ್ಕೆ ಗುರಿ ಇಟ್ಟುಕೊಳ್ಳಲಾರದೆ ಉನ್ನತ ಗುರಿ ಮಟ್ಟಕ್ಕೆ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ತಮ್ಮ ಮುಂದಿನ ಕೆಲಸ ಏನು? ಇನ್ನು ಹೆಚ್ಚಿಗೆ ಏನನ್ನು ಮಾಡಬಹುದು? ಇನ್ನು ಏನಾದರೂ ಸಾಧನೆ ಮಾಡಬಹುದಾ? ಎಂದು ಚಿಂತಿಸಿ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕು. ಭಾರತದ ನಾಗರಿಕರಾಗಿ ಮೂಲಭೂತ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಸದೃಢ. ಸಮೃದ್ಧ. ನೆಮ್ಮದಿಯ ಭಾರತ ಕಟ್ಟುವಲ್ಲಿ ಶ್ರಮಿಸಬೇಕು ಎಂದರು. ಅದಕ್ಕಾಗಿ ಮಾನವೀಯ ದೃಷ್ಟಿಯಿಂದ ದೇಶಕ್ಕಾಗಿ, ಸಮಾಜಕ್ಕಾಗಿ ನಾನೇನು ಮಾಡಬಹುದು ಎಂದು ದಿನದ ಒಂದು ಕ್ಷಣವಾದರೂ ಯೋಚಿಸಿ ಕೈಲಾದಷ್ಟು ಸಮಾಜಸೇವೆ ಮಾಡಬೇಕು. ಸಕಾರಾತ್ಮಕವಾಗಿ ಯೋಚಿಸಬೇಕು. ಹೃದಯ ಸದ್ಗುಣಗಳ ಆಧಾರವಾಗಿರಬೇಕು, ಆಗ ಇಲ್ಲಿಯೇ ಸ್ವರ್ಗ ಕಾಣಬಹುದು. ನಾನು ಭಾರತೀಯನೆಂಬ ಹೆಮ್ಮೆಯಿಂದ ಇರಬೇಕು. ನಾನು ಕನ್ನಡಿಗನೆಂಬ ಅಭಿಮಾನದಿಂದಿರಬೇಕು. ನಾನು ವಿಶ್ವಮಾನವನೆಂಬ ಪ್ರೀತಿ ಹೊಂದಿರಬೇಕು. ಉತ್ತಮ ಸತ್ಪ್ರಜೆಯಾಗಿ ಬಾಳಬೇಕೆಂದು ಪೆÇ್ರೀತ್ಸಾಹ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನ್ಯಾಯಮೂರ್ತಿ ಟಿ. ಎನ್. ಇನವಳ್ಳಿ ಅವರು ಮಾತನಾಡುತ್ತಾ ಸೌಜನ್ಯ, ಸೌಮ್ಯತೆ, ವಿನಮ್ರತೆ ಇದ್ದರೆ ಯಾವ ಮಟ್ಟಕ್ಕೆ ಏರಬಹುದು ಎಂಬುದಕ್ಕೆ ಜಸ್ಟಿಸ್ ಡಾ. ಶಿವರಾಜ ಪಾಟೀಲ ಅವರೇ ನಮಗೆಲ್ಲ ಮಾದರಿಯಾಗಿದ್ದಾರೆ. ಅವರು ಈ ನಾಡು ಕಂಡ ಸರಳ ಸಜ್ಜನಿಕೆಯ, ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿ, ನ್ಯಾಯ ಮೂರ್ತಿ. ಡಾ. ಶಿವರಾಜ ವಿ. ಪಾಟೀಜ ಅವರು ಕಾನೂನಿನ ಚೌಕಟ್ಟಿನಲ್ಲಿ ಬಡವರ ನೊಂದವರ ಅಸಹಾಯಕರ ಕಣ್ಣೀರು ಒರೆಸುವ ಶ್ರೇಷ್ಠ ಕೆಲಸ ಮಾಡಿ ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ಡಾ. ಡಿ. ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತಾ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಮನಸ್ಸಿನ ಮೃದುತ್ವ, ಪ್ರೀತಿ, ಪರಿಶುದ್ಧತೆ, ಪ್ರಾಮಾಣಿಕತೆ, ನಿರ್ಮಲ ಪ್ರೇಮ, ಸಕಾರಾತ್ಮಕ ಯೋಚನೆ, ಸಮಾಜದ ಬಗೆಗಿನ ಕಳಕಳಿ ಇವುಗಳಲ್ಲಿ ಒಂದಂಶವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಅವರು ಈ ಜಗತ್ತಿನ ಪುಣ್ಯ ಪುರುಷರಾಗಿದ್ದಾರೆ. ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ. ಎಂದು ಹೇಳಿದರು.
ರಂಜಾನ್ ದರ್ಗಾ ಅವರು ಗೌರವ ಅತಿಥಿಗಳಾಗಿದ್ದರು.ಸಾನಿಧ್ಯ ವಹಿಸಿಕೊಂಡಿರುವ ಇಲಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಗುರು ಮಹಾಂತ ಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡಿರುವ ನಾಲವಾರ್ ಕೋರಿ ಸಿದ್ದೇಶ್ವರ ಮಹಾ ಸಂಸ್ಥಾನ ಮಠದ ಪೂಜ್ಯ ಡಾ. ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ, ಜೆಇಇ, ನೀಟ್, ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 25,000 ವಿದ್ಯಾರ್ಥಿವೇತನ, ರೂ. 11,000 ಪ್ರೋತ್ಸಾಹಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ. ಎಲ್. ರಾಜಶೇಖರ, ಎನ್. ಶರಣಪ್ಪ, ಗೀತಾ ಚನ್ನಾರಡ್ಡಿ , ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಡಾ. ರಾಕೇಶ್ ಚನ್ನಾರಡ್ಡಿ ಪಾಟೀಲ್, ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ, ವಿನುತಾ ಆರ್.ಬಿ., ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಜಿಲ್ಲಾ ನ್ಯಾಯಾಧೀಶರು, ವಕೀಲರು, ಸಾಹಿತಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತ್ರಿವೇಣಿ ಭಾವಿ ವಂದಿಸಿದರು. ಡಾ. ವಿದ್ಯಾವತಿ ಪಾಟೀಲ್ ನಿರೂಪಿಸಿದರು.